ಬುಧವಾರ, ಅಕ್ಟೋಬರ್ 6, 2021

ಯಕ್ಷಗಾನ ಕೇವಲ ಒಂದು ಕಲೆಯಲ್ಲ, ಅದು ಭಾರತ ದೇಶದ ಸಂಸ್ಕೃತಿ (ಕಾರ್ಯಕ್ರಮದ ವರದಿ) - ವಿ. ಮಂ. ಸಾ. ವೇ. ಉತ್ತರ ಕನ್ನಡ ಜಿಲ್ಲಾ ಘಟಕ.

ಯಕ್ಷಗಾನ ಕೇವಲ ಒಂದು ಕಲೆಯಲ್ಲ, ಅದು ಭಾರತ ದೇಶದ ಸಂಸ್ಕೃತಿ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚಾಗಿ ಕಂಡುಬರುವ ಕಲೆಗಳಲ್ಲಿ, ಯಕ್ಷಗಾನವು ಒಂದು ವಿಶೇಷ ಹಾಗೂ ಬಹಳ ಮುಖ್ಯ ಸ್ಥಾನವನ್ನು ಪಡೆದಿರುವ ಕಲೆ. ಇಂತಹ ಯಕ್ಷಗಾನ ಕಲೆಯು ಅನೇಕ ರೀತಿಯ ಸಂಕಷ್ಟಗಳಿಗೆ ಸಿಲುಕಿ, ಅಳಿವಿನಂಚಿಗೆ ಸರಿಯುತ್ತಿರುವ ಸಂದರ್ಭದಲ್ಲಿ, ಇದರ ಕುರಿತಾಗಿ ವಿಶೇಷ ಕಾಳಜಿ ವಹಿಸುವ, ಜಾಗೃತಿ ಉಂಟು ಮಾಡುವ ಉದ್ದೇಶದಿಂದ ವಿಚಾರ ಮಂಟಪ ಸಾಹಿತ್ಯ ವೇದಿಕೆ  ಉತ್ತರ ಕನ್ನಡ ಜಿಲ್ಲಾ ಘಟಕವು ದಿನಾಂಕ-04/10/2021 ರ ಸೋಮವಾರದಂದು ಗೂಗಲ್ ಮೀಟ್ ಸಾಮಾಜಿಕ ಮಾಧ್ಯಮದ ಮೂಲಕ ಯಕ್ಷಗಾನ ಮತ್ತು ಯುವಜನತೆ ಎಂಬ ವಿಷಯದ ಕುರಿತಾದ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಉಪನ್ಯಾಸಕರಾಗಿ ಯಕ್ಷ ಅಭಿನೇತ್ರಿ ಶ್ರೀ ನೀಲ್ಕೊಡ್ ಶಂಕರ್ ಹೆಗಡೆಯವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಮಂ.ಸಾ. ವೇದಿಕೆ ರಾಜ್ಯ ಘಟಕದ ಗೌರವಾಧ್ಯಕ್ಷರಾಗಿರುವ ಶ್ರೀ ವರುಣ್ ರಾಜ್ ಜಿ ರವರು ವಹಿಸಿದ್ದರು. ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಹಲವಟರು ಆಸಕ್ತರು  ಸೇರಿದ್ದರು. ಸಭೆಯ ಪ್ರಾರಂಭದಲ್ಲಿ ವಿ.ಮಂ.ಸಾ.ವೇ.ಉತ್ತರ ಕನ್ನಡ ಜಿಲ್ಲಾ ಘಟಕದ ಮಹಿಳಾ ಉಪಾಧ್ಯಕ್ಷೆಯಾಗಿರುವ ಶ್ರೀಮತಿ ಸುಮ ಹಡಪದ್ ರವರು ಶ್ರೀ ಗಣೇಶನ ಸ್ತುತಿ ಹಾಡುವುದರ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿ.ಮಂ.ಸಾ.ವೇ.ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಕು.ಏಕತಾ ಭಟ್ ರವರು ಉಪನ್ಯಾಸಕರನ್ನು ಸಭಾಧ್ಯಕ್ಷರನ್ನು ಹಾಗೂ ವೇದಿಕೆಯ ಎಲ್ಲಾ ಪದಾಧಿಕಾರಿಗಳನ್ನೂ ಸಭಿಕರನ್ನೂ ಸ್ವಾಗತಿಸಿ ಕಾರ್ಯಕ್ರಮದ ಕುರಿತಾದ ಪ್ರಾಸ್ಥಾವಿಕ ಮಾತುಗಳನ್ನಾಡುತ್ತಾ ವಿ.ಮಂ.ಸಾ.ವೇದಿಕೆಯ ಧ್ಯೆಯೋದ್ದೇಶಗಳನ್ನ ತಿಳಿಸಿಕೊಟ್ಟರು. ನಂತರ ಯಕ್ಷ ಅಭಿನೇತ್ರಿಯೆಂಬ ಖ್ಯಾತಿ ಹೊಂದಿರುವ ಯಕ್ಷಗಾನದ ಪ್ರಮುಖ ಸ್ತ್ರೀ ವೇಶದ ಕಲಾವಿದರಾದ ಶ್ರೀ ನೀಲ್ಕೊಡ್ ಶಂಕರ್ ಹೆಗಡೆಯವರು ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಅವರು ಮಾತನಾಡುತ್ತಾ ಯಕ್ಷಗಾನ ಇದು ಕೇವಲ ಒಂದು ಕಲೆಯಲ್ಲ. ಬದಲಾಗಿ ನಮ್ಮ ಭಾರತ ದೇಶದ ಸಂಸ್ಕೃತಿ ಹಾಗೂ ಇತಿಹಾಸ ಎನ್ನುವುದನ್ನು ಸ್ಪಷ್ಟಪಡಿಸಿದರು.ಇಂದು ಈ ಯಕ್ಷಗಾನ ನಮ್ಮ ಕನ್ನಡಿಗರಿಗಾಗಿಯೇ ಉಳಿದುಕೊಂಡಂತಿದೆ ಎಂಬ ಮಾತನ್ನು ಉದ್ಗರಿಸಿದರು. ಯಕ್ಷಗಾನದ ಇತಿಹಾಸ ಹಾಗೂ ಅದರ ವಿಸ್ತಾರ ಹಾಗೇ ಅದರಲ್ಲಡಗಿರುವ ನಮ್ಮ ಸಂಸ್ಕೃತಿ ಸತ್ವದ ಕುರಿತು ಆಳವಾಗಿ ವಿವರಿಸಿದರು. ನಮ್ಮ ಇಂದಿನ ಯುವ ಜನತೆ ಆಧುನಿಕತೆಯ ಮಾಯೆಗೆ ಮೋಹಕ್ಕೆ ಸಿಲುಕಿ ನಿಜವಾದ ಕಲೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹಿಂಜರಿಯುತ್ತಿರುವುದು ದುರಧೃಷ್ಟಕರ ಎಂದರು. ಹಾಗೇ ಯುವ ಜನತೆಯಲ್ಲಿ ಯಕ್ಷಗಾನದ ಕುರಿತಾಗಿ ಕೆಲವರಿಗೆ ಆಸಕ್ತಿಯಿದ್ದರೂ ಸರಿಯಾದ ರೀತಿಯಲ್ಲಿ ಪೋಷಕರ ಪ್ರೋತ್ಸಾಹವಾಗಲೀ ಅಥವಾ ಈ ಕ್ಷೇತ್ರದಲ್ಲಿ ಸ್ಥಿರವಾಗಿ ನೆಲೆ ನಿಲ್ಲುವ ಆರ್ಥಿಕ ಸ್ಥಿತಿ - ಗತಿಗಳಾಗಲೀ ಸರಿಯಾಗಿ ಇಲ್ಲದಿರುವುದೇ ಇದರ ನಿರ್ಲಕ್ಷ್ಯಕ್ಕೆ ಪ್ರಮುಖ ಕಾರಣವೆಂದು ಹೇಳಿದರು. ಯಕ್ಷಗಾನ ಕಲಾವಿದನೆಂದರೆ ಒಂದು ರೀತಿಯ ಮೂಗು ಮುರಿಯುವ ನಿರ್ಲಕ್ಷಿಸುವ ಏನೂ ಪ್ರಯೋಜನಕ್ಕೆ ಬಾರದವ ಮಾಡುವ ಕೆಲಸ ಇದು ಎಂಬುದಾಗಿ ಬಿಂಬಿಸುವ ಒಂದು ಕಾಲಘಟ್ಟ ಇತ್ತು. ಇಂದಿಗೂ ಅದನ್ನೇ ಅನುಸರಿಸುವ ಜನರೂ ಇದ್ದಾರೆ. ಅಂತಹ ಮಡಿವಂತಿಕೆಯಿಂದ ಕಲಾವಿದನಾಗ ಹೊರಟವರು ಹೊರ ಬರಬೇಕು. ಇಂದಿನ ಹಲವಾರು ಆಧುನಿಕ ಮನರಂಜನೆಯ ಮಾರ್ಗಗಳ ನಡುವೆ ನಮ್ಮ ಯಕ್ಷಗಾನ ಕಲೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಬೆಂಬಲವಾಗಿ ನಿಲ್ಲುವ ಯುವ ಸಮೂಹ ಬೆಳೆಯ ಬೇಕಾಗಿದೆ.ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡುವುದು ಕೇವಲ ನಮ್ಮ ವೖೆಯಕ್ತಿಕ ಇಚ್ಛೆಯನ್ನು ಈಡೇರಿಸಿಕೊಳ್ಳುವುದಷ್ಟಕ್ಕೆ ಸೀಮಿತವಾಗಬಾರದು.  ಹತ್ತು-ಹದಿನೖೆದು ವರ್ಷಗಳ ಕಲಿಕೆಯ ತಪಸ್ಸಿನಿಂದ ಅರಳುವ ಶಾಶ್ವತ ಪ್ರತಿಭೆಯಾಗಬೇಕು ಹಾಗೂ ಸರ್ಕಾರ ಸಂಘ ಸಂಸ್ಥೆಗಳು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯಕ್ಷಗಾನ ಕಲಾವಿದರ ನೆರವಿಗೆ ಧಾವಿಸಬೇಕು ಎಂದು ತಮ್ಮ ಮನದ ಇಂಗಿತವನ್ನ ವ್ಯಕ್ತಪಡಿಸಿದರು. ನಂತರ ಪ್ರಶ್ನೋತ್ತರ ಸಮಯದಲ್ಲಿ ಕು.ಏಕತಾ ಭಟ್ ರವರು, ಯುವ ಕಲಾವಿದರಲ್ಲಿ ಮೊದಲಿದ್ದ ಆಸಕ್ತಿ ಉತ್ಸಾಹ ನಂತರದ ದಿನಗಳಲ್ಲಿ ಮರೆಯಾಗುತ್ತಿರುವುದು ಏಕೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರಿಯಾದ ಉದ್ದೇಶದ ಕೊರತೆ ಹಾಗೂ ತಮ್ಮ ಕೌಟುಂಬಿಕ ಬಳಗದ ಪ್ರೋತ್ಸಾಹ ಸಿಗದಿರುವುದು ಹಾಗೂ ತಮ್ಮ ನಿರೀಕ್ಷೆಯ ಸಂಪಾದನೆ ಪ್ರಾರಂಭದ ಹಂತದಲ್ಲಿ ಸಿಗದಿರುವುದು ಇವೇ ಮೊದಲಾದ ಕಾರಣವೆಂದು ತಿಳಿಸಿದರು. ನಂತರ ಸ್ತ್ರೀಯರಿಗೇಕೆ ಯಕ್ಷಗಾನದಲ್ಲಿ ಪುರುಷ ಸಮಾನವಾದ ಅವಕಾಶ ಸಿಗುತ್ತಿಲ್ಲವೆಂದು ಶ್ರೀ ವರುಣ್ ರಾಜ್ ಜಿ ಯವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ವಿಚಾರದಲ್ಲಿ ಹೇಳುವುದಾದರೇ ಸ್ತ್ರೀಯರ ವೖೆಯಕ್ತಿಕ ಸಮಸ್ಯೆ ಹಾಗೂ ಯಕ್ಷಗಾನ ನಡೆಯುವ ಸ್ಥಳದಲ್ಲಿ ಅವರ ವೇಷ - ಭೂಷಣಕ್ಕೆ ಪ್ರತ್ಯೇಕ ಕೊಠಡಿಯ ಸೌಕರ್ಯದ ಕೊರತೆ ಹಾಗೂ ಯಾವುದೇ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಇವೇ ಪ್ರಮುಖ ಕಾರಣವೆಂದು ನುಡಿದರು. ಹಾಗೇ ಯಕ್ಷಗಾನದಂತ ಅಮೋಘ ಕಲೆಯ ಮೂಲಕ ಅದರ ವೇಷ-ಭೂಷಣ ಮಾತುಗಾರಿಕೆಯ ಮೂಲಕ ಜನ ಮನದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯನ್ನ ಸದಾ ಚಿರಸ್ಥಾಯಿಯಾಗಿಸೋಣವೆಂಬ ಆಶಾ ಭಾವದೊಂದಿಗೆ ಕಾರ್ಯಕ್ರಮದ ಅಧ್ಯಕ್ಷರಿಗೂ ಪದಾಧಿಕಾರಿಗಳಿಗೂ ಹಾಗೂ ಸಭಿಕರಿಗೆ ವಂದಿಸಿ ಶ್ರೀ ನೀಲ್ಕೊಡ್ ಶಂಕರ್ ಹೆಗಡೆಯವರು ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿ.ಮಂ.ಸಾ.ವೇದಿಕೆ ರಾಜ್ಯ ಘಟಕದ ಗೌರವಾಧ್ಯಕ್ಷರಾಗಿರುವ ಶ್ರೀ ವರುಣ್ ರಾಜ್ ಜೀ ರವರು ಮಾತನಾಡಿ ಇಂತಹ ಭಿನ್ನ-ವಿಭಿನ್ನ ವಿಷಯಗಳ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಉತ್ತರ ಕನ್ನಡ ಜಿಲ್ಲಾ ಘಟಕಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಾಗೇ ಇಂತಹ ಚಿಂತನಾಶೀಲ ಕಾರ್ಯಕ್ರಮಗಳು ಹೆಚ್ಚು-ಹೆಚ್ಚಾಗಿ ಮೂಡಿ ಬರಬೇಕೆನ್ನುವ ನಿಟ್ಟಿನಲ್ಲಿ ತಮ್ಮ ಮಾತುಗಳ ಮೂಲಕ ಯುವ ಬಳಗಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಹೃದಯ ವೖೆಶಾಲ್ಯತೆಯನ್ನು ಮೆರೆದರು. ಹಾಗೇ ಉಪನ್ಯಾಸಕರಾದ ಶ್ರೀ ನೀಲ್ಕೊಡ್ ಶಂಕರ್ ಹೆಗಡೆಯವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿ ತಮ್ಮ ಮಾತುಗಳನ್ನ ಮುಗಿಸಿದರು.ಕಾರ್ಯಕ್ರಮದಲ್ಲಿ ವಿ.ಮಂ.ಸಾ.ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷರಾದ ಅಂಜನ್ ಕುಮಾರ್ ರವರೂ ಉಪಸ್ಥಿತರಿದ್ದರು. ನಂತರ ಉತ್ತರ ಕನ್ನಡ ಜಿಲ್ಲಾ ಘಟಕದ ಸಂಚಾಲಕರಾದ ಕು.ಮೇಘನಾ ಶಿವಾನಂದ್ ರವರು ಗಣ್ಯರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಎಲ್ಲಾ ಸಭಿಕರಿಗೆ ವಂದನಾರ್ಪಣೆಯನ್ನು ಸಲ್ಲಿಸಿದರು.ಈ ಮೂಲಕ ಯಕ್ಷಗಾನ ಮತ್ತು ಯುವ ಜನತೆ ಎಂಬ ವಿಷಯದ ಕುರಿತಾದ ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ಕಾರ್ಯಕ್ರಮದ ನಿರ್ವಹಣೆ ಹಾಗೂ ನಿರೂಪಣೆಯ ಜವಾಬ್ದಾರಿಯನ್ನು ಉತ್ತರ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿಯಾದ ರಜನಿಕಾಂತ್ ವಹಿಸಿದ್ದರು.
      
ವರದಿ- ವಿ.ಮಂ.ಸಾ.ವೇ.ಉತ್ತರ ಕನ್ನಡ ಜಿಲ್ಲಾ ಘಟಕ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...