ಮಂಗಳವಾರ, ಅಕ್ಟೋಬರ್ 5, 2021

ಪ್ರೇಮದಾಸನದೊಂದು ಪ್ರೇಮಕಾವ್ಯ (ಕವಿತೆ) - ಹನುಮಂತ ದಾಸರ ಹೊಗರನಾಳ.

ಪ್ರೇಮದಾಸನದೊಂದು ಪ್ರೇಮಕಾವ್ಯ

ಐ ಲವ್ ಯು ಪ್ರೇಯಸಿ , ನೀ ನನ್ನ ಊರ್ವಶಿ
ನೀನೊಂತರ ಪ್ರೀತಿಗೆ ಸೌಂದರ್ಯದ ರೂಪಸಿ....!!

ಸಂಗಾತಿಯಾದರೇ, ಸಂಪ್ರೀತಿ ನೀಡುವೇ
ಒಲವೆಂಬ ಓಲೆಗೆ ನಾ ಲೇಖನಿಯಾಗುವೇ....!!

ಈ ಸುಂದರ ಬದುಕಿಗೆ ನೂರಾರು ಭಾವನೆ
ನಿನ್ನ ಮನದಾಸೆಗೆ ನಾ ಆಸರೆ ನೀಡುವೇ...!!

ನೀ ಎಲ್ಲಿದ್ದರೇನೇ ನಿನ್ನೊಳಗಿರುವವನು ನಾನೇ
ನೋಟಕೆ ಬಲಿಯಾಗಿ ಬದುಕಿರುವೆನು ತಾನೇ...!!

ನೀ ಕ್ಷಣ ಕಾಣದೇ ಹೋದರೇ ಕಣ್ಣಿಗೆ ಕತ್ತಲಾವರಿಸುದು
ನಗೆಯ ಬೀರುವ ಆ ಮೊಗವ ನೋಡದೇ ಮನ ಮೌನಕೆ ಬರುವುದು....!!

ನೀ ನನ್ನ ಬಾಳಿನ ಬಂಗಾರ, ಹಚ್ಚಿ ಕರೆತರುವೆನು ಹಣೆಗೆ ಸಿಂಧೂರ
ಕೈ ಬಳೆಯ ತೊಡಿಸಿ, ಹೂ ಮುಡಿಸಿ ಸಿಂಗಾರಿಯಂತೆ ಮೆರೆಸುವೆನು ನಿನ್ನ ಶೃಂಗಾರತೇರಲಿ ...!!

ನನ್ನೀ ಪ್ರೇಮನುಡಿಗಳಿಗೆ ನೀ ಒಲಿದು ಪ್ರೇರಣೆಯ ನೀಡಲು ಬರುವೆಯಾ ಸಖಿಯೇ
ಪ್ರೇಮಕೆ ಸೋತು ಬರೆದಿಹನೊಂದು ಪ್ರೇಮಕಾವ್ಯ ನಿನ್ನೀ ಪ್ರೇಮದಾಸ .!!

 - ಹನುಮಂತ ದಾಸರ ಹೊಗರನಾಳ
ಮೊ:994524623.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...