ಮಂಗಳವಾರ, ಅಕ್ಟೋಬರ್ 5, 2021

ಸಹಕಾರಿ- ನಿಮಗೆಂದೂ ನಾವು ಆಭಾರಿ (ಲೇಖನ) - ಶಾಂತಾರಾಮ, ಶಿರಸಿ, ಉತ್ತರ ಕನ್ನಡ.

ಸಹಕಾರಿ- ನಿಮಗೆಂದೂ ನಾವು ಆಭಾರಿ.
ಕರ್ನಾಟಕದಲ್ಲಿ(ದೇಶದಲ್ಲೇ ಪ್ರಥಮ ಪತ್ತಿನ ಸಹಕಾರ ಸಂಘದ ಸ್ಥಾಪಕರು)
ಸಹಕಾರ ಸಂಘದ ಹರಿಕಾರ ಶ್ರೀ ಸಣ್ಣರಾಮನ ಗೌಡ  ಸಿದ್ದರಾಮನ ಗೌಡ ಪಾಟೀಲರನ್ನು (ಎಸ್.ಎಸ್.ಪಾಟೀಲ್) ರನ್ನು ನೆನೆಯುತ್ತಾ ಮುಂದುವರೆಯಿರಿ

ವ್ಯವಸಾಯ ಸೇವಾ ಸಹಕಾರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ, ಹಾಲು ಉತ್ಪಾದಕರ ಸಹಕಾರ, 
ಗ್ರಾಮೀಣ ಸೇವಾ ಸಹಕಾರ ಇಂತಹ  ಅನೇಕ ದೃಷ್ಟಿಗೆ ನಿಲುಕದಷ್ಟು ನಾಮಾಂಕಿತ ಸಂಘ-ಸಂಸ್ಥೆಗಳು ಎಲ್ಲರಿಗೂ ಸಹಕಾರಿ, 

ಅವೆಷ್ಟೊ ಗ್ರಾಮೀಣ ರೈತಾಬಿ ಜನರ- ಹಳ್ಳಿಗಾಡಿನ ಮಹಿಳೆಯರ,ಹಳ್ಳಿಯ ಬಡ ಜನರ ಕತ್ತಲೆ ತುಂಬಿದ ಬದುಕಿಗೆ ದೀಪದ ಬೆಳಕಿನಂತೆ ತೋರಿಸುತ್ತಿದೆ ದಾರಿ, 
ಸಹಕಾರ ತತ್ವ- ಕಾನೂನಿನ ಚೌಕಟ್ಟು-ನ್ಯಾಯಬದ್ಧ ನಡವಳಿಕೆ- ಸಾಮರಸ್ಯ- ಸದಸ್ಯತ್ವ ಇಂತಹ ಅನೇಕ ಜವಾಬ್ದಾರಿಗಳ ಅಡಿಯಲ್ಲಿ ನಡೆಯುತ್ತಿದೆ ಸಹಕಾರ ಸಂಘಗಳ ಕಾರ್ಯವೈಖರಿ, 

ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರ ಸಂಘಗಳ ಜೊತೆಗಿನ ಜನತೆಯ ಸಾಮರಸ್ಯ-ನಂಬಿಕೆ- ಜವಾಬ್ದಾರಿಯುತ ನಡವಳಿಕೆ ಅತೀ , 
ಸಹಕಾರ ಸಂಘಗಳು ರೈತಾಬಿ ಜನರಿಗೆ- ಬಡವರಿಗೆ-ಮಹಿಳೆಯರಿಗೆ ತೋರುವ ಕಾಳಜಿ, ಸಾಮಾಜಿಕ ಕಳಕಳಿ- ನಮ್ದೇ ಜನ ಅಲ್ವಾ ಎನ್ನುವ ರೀತಿ, -
ಹೊಂದಾಣಿಕೆಯ ಸ್ವಭಾವ, ಸಾಲ-ಸೌಲಭ್ಯ ಒಂದಾ- ಎರಡಾ ಹೇಳುತ್ತಾ ಸಾಗಿದರೆ ದೂರ ಕಾಣದ ತೀರ ಮುಗಿಯದ ವಿಚಾರ - ಅದೆಂತಹ ಪ್ರೀತಿ-
ಚಂದ ಅಲ್ವೇ ಈ ಸಹಕಾರಿಗಳ ಸೇವಾ ಪರಿ, 

ಇಂತಹ ಸಹಕಾರ ಸಂಘಗಳ ಜೊತೆಗಿರುವ ನಾವು
"ಸಹಕಾರಂ ಗೆಲ್ಗೇ- ಸಹಕಾರಂ ಬಾಳ್ಗೆ" ಎಂದು ಕೈ-ಕೈ ಕುಲುಕಿಕೊಂಡು ನಿಮಗೆಂದೂ ಆಭಾರಿ, 
ಗ್ರಾಮೀಣ ಜನರ ಜೀವನ/ಬದುಕನ್ನು ಹಸನಾಗಿಸುವಲ್ಲಿ ಸಹಕಾರಿಯು ಎತ್ತಿದ ಕೈರೀ, 
ಹೀಗೇ ಉತ್ತಮ ರೀತಿಯಲ್ಲಿ ಮುಂದುವರೆಯುತಿರಲಿ ಸಹಕಾರ ಸಂಘಗಳ ಸಹಾಯ - ಸಹಕಾರ - ಸಾಮರಸ್ಯ-ಸಂಘಟನೆ- ವ್ಯವಹಾರದ ಸವಾರಿ..

"ಸಹಕಾರಿ ತತ್ವ, 
ಇದರಲ್ಲಡಗಿದೆ ಶ್ರೇಷ್ಠ ತತ್ವ"

- ಶಾಂತಾರಾಮ ಶಿರಸಿ, 
ಉತ್ತರ ಕನ್ನಡ...
7676106237
8762110543.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...