ಬದುಕು ದೂರ
ಬೆತ್ತಲ ಬಾಳಲಿ ಕತ್ತಲ ಬದುಕಲಿ.
ಎತ್ತ ನೋಡಲಿ ದಶದಿಕ್ಕಿನಲ್ಲಿ.
ಬದುಕಿನ ಪಯಣದಲ್ಲಿ//
ಚಿಗುರೊಡೆಯುವ ಕಣ್ಣುಗಳಲ್ಲಿ.
ಕನಸು ಬಾಡಿದ ಹೃದಯ ಮಂದಿರದಲ್ಲಿ.
ಚಾಮರ ಹಿಡಿದು ನಿಂತಿದೆ ಬದುಕಿನ ಬಂಡಿಯಲ್ಲಿ.//
ಬಣ್ಣದ ತೇರಲಿ ಸಿಂಗಾರ ಇಲ್ಲದ ಬದುಕಲ್ಲಿ.
ಹೊರಟಿದೆ ಮರುಭೂಮಿಯ ಕಡಲಿನಲ್ಲಿ.
ಬತ್ತಿದೆ ಮಮತೆಯ ಮಡಿಲಲ್ಲಿ.//
ತುಂಡು ಹೊಟ್ಟೆಗೆ ತೃಪ್ತಿ ಇಲ್ಲದ ಬದುಕಲಿ.
ಕನಸಿಲ್ಲದ ಜೋಕಾಲಿಯಲ್ಲಿ.
ಮೆರವಣಿಗೆ ಹೊರಟಂತೆ ಕಣ್ಣೀರ ಕಡಲಲ್ಲಿ.//
- ಮಧು. ಕೆ. ಬಿ (ಭಾವುಕ ಮನ) ಕೊತ್ತತ್ತಿ, ಮಂಡ್ಯ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ