ತಮ್ಮನ್ನು ತಾವು ಮಾತ್ರ ನಿಗ್ರಹಸಿಬಹುದಲ್ಲದೇ!ಇತರರನ್ನಲ್ಲ.
ನಿಮ್ಮ ಪ್ರೀತಿ ಸ್ವತಂತ್ರ್ಯವಾಗಿದ್ದರೆ ಸಂಕುಚಿತವಾಗದು
ಕಾಡುವ ಪ್ರಶ್ನೆ, ಕೇಳುವ ಪ್ರಶ್ನೆ
ಇರುವುದಾದರೂ ಎಷ್ಟು ದಿನ ?
ನಾವಿರುದಾದರೂ ಎಲ್ಲಿ? ಸ್ಥಳಯಾರದು
ಸಮಯ ಯಾರದಿದು? ಅದರಂತೆ ನಾವುಗಳು
ತೊಗಲಿನ ಕಾಯ ನೀಡಿದವರೊಬ್ಬರು
ಎರೆದವಳೊಬ್ಬರು,ಹಾಲುಣಿದದ್ದು ಅವ್ವ
ತಂದೆ ಕಾರಣನು ಖುಷಿಕ್ಷಣಗಳಿಗೆ
ಎಲ್ಲರಿಂದಲೂ ಒಂದೊಂದು ಖಡ ಪಡೆದ
ನಾವು ವಿಶಾಲ ಹೃದಯವನ್ನಾದರೂ
ಸ್ವತಃ ನಿರ್ಮಿಸಿಕೊಳ್ಳಿ ಜೀವನ ಸುಂದರವಿದೆ........
ಮನುಷ್ಯ ತನ್ನ ಮುಕಗೋಪದಿಂದ ತನ್ನ ಬುದ್ಧಿವಂತಿಕೆಯನ್ನು ವ್ಯಯಿಸಿಬಿಡುತ್ತಾನೆ ಈ ಹುಚ್ಚಾಟಕೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ ಅವನ ಕೋಪವೇ ತನ್ನ ಅವನತಿಗೆ ಕಾರಣವಾಗುತ್ತದೆ ಮನುಷ್ಯನ ಬಹುದೊಡ್ಡ ಉಡುಗೊರೆ ಎಂದರೆ ತಾಳ್ಮೆ ತಾಳ್ಮೆಕಳೆದುಕೊಂಡು ಎಲ್ಲರನ್ನೂ ಕಳೆದುಕೊಂಡ ಎಷ್ಟೋ ಉದಾಹರಣೆಗಳಿವೆ ನಮ್ಮವರಿಗಾಗಲಿ ಇತರಿರಿಗಾಗಲಿ ಯಾರೋಬ್ಬರ ಮುಂದೇಯೂ ಸಹ ತಾಳ್ಮೆ ಇರಲಿ,ಅವನ ನೆಮ್ಮದಿ ಶಾಂತಿ ರಹಿತ ಜೀವನಕ್ಕೆ ಕಾರಣರಾಗಿ ಬಿಡುತ್ತಾರೆ ವಿಶಾಲ ಹೃದಯ ಸೃಷ್ಠಿಸಿಕೊಳ್ಳಿ ಆನಂದಮಯ ಬದುಕಿಗೆ ವಾಸರದಾರರಾಗಬೇಕಿದೆ,ಸಂಕುತದಿಂದ ಖುಷಿಸಂಗತಿಯಿಂದ ವಂಚಿತರಾಗುವುದು ಅದಾವ ನ್ಯಾಯ? ಅಲ್ಲವೇ.
ಧ್ಯಾನ,ಯೋಗ,ಎಲ್ಲದರಲ್ಲಿಯೂ ಸಹ ಅದೇ ಹೇಳಿವೆ ತಮ್ಮನ್ನು ತಾವು ಮಾತ್ರ ನಿಗ್ರಹಸಿಬಹುದಲ್ಲದೇ ಮತ್ತೋರ್ವರನ್ನು ನಿಗ್ರಹಿಸಲು ಆಗದು ಎಂದು,ನಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಮಹತ್ತರ ಸಾಧನೆ ಹಾಗೂ ಪೂರಕವಾಗಿ ಸಮಯೋಚಿತ ಮಾತು ಸಹ ಅವಶ್ಯ ಹೀಗಿರುವಾಗ ಆ ಲಾಜಿಕ್ ತಿಳಿಯದೇಯೇ ನಾವು ಮತ್ತೋರ್ವರನ್ನು ನಿಗ್ರಹಿಸಲು ನಮ್ಮಂತೇಯೇ ಅವರು ಎನ್ನುವುದು ಅದೆಷ್ಟು ಸರಿ ಅಲ್ಲವೇ.
ಅವರೇಕೆ ಹಾಗೇ,ನಾನೇಕೆ ಹೀಗೆ,ನನ್ನಂತಿರಲಿ ಇಲ್ಲವೇ ನಾನೂ ಅವರಂತಿರಲಿ ಎಂಬ ಜಿಡ್ಡಿಗೆ ಜೋತು ಬಿದ್ದಿದ್ದೆವೇನೋ ಅದನ್ನು ತೊರೆದು ಎಲ್ಲರೊಂದಿಗೆ ಬೆರೆತು ಅವರು ನಮ್ಮೋಡನೆ ಬೆರೆತು ನಡೆಯಬೇಕಿದ್ದರೆ ಅವರನ್ನ ಆಕರ್ಷಿಸುವ ತುಸುನಗು,
ಹತ್ತಿರವಾಗಿಸಿಕೊಳ್ಳಬಲ್ಲ ಮೃದುವಾದ ಮಾತು,ಅವರ ಕಷ್ಟವೂ ನಮ್ಮ ಕಷ್ಟವೇನೋ ಎಂದು ಪರಿಭಾವಿಸುವ ತೆರೆದ ಹೃದಯದ.ನಿಜವಾಗಿಯೂ ಇವಕ್ಕಿಂತ ಮಿಗಿಲಾಗಿ ಮತ್ಯಾವುವು ಇಲ್ಲ ಆದರೆ ಎದುರಿರುವ ವ್ಯಕ್ತಿಯೂ ಸಹ ಭಾವನಾ ಜೀವಿ ಅಥವಾ ಮತ್ತೋಬ್ಬರನ್ನು ಅರ್ಥೈಸಿಕೊಳ್ಳಬಹುದಾದ ವ್ಯಕ್ತಿ ಆಗಿದ್ದರೆ ಮಾತ್ರ ಇದು ಅನ್ವಯವಾಗಲು ಸಾಧ್ಯ.
ಇರ್ವರ ಸ್ನೇಹ ಅಥವಾ ಪ್ರೀತಿಯೇ ಆಗಿರಬಹುದು ಮತ್ತೋಬ್ಬರ ಮುಂದೆ ಬಿಟ್ಟುಕೊಡದಂತಿದ್ದರೆ ,ಅಥವಾ ಇಬ್ಬರೂ ಸೇರಿ ಮತ್ತೊಬ್ಬರನ್ನು ಹಾಸ್ಯಕೀಡುಮಾಡುವಂತಿದ್ದರಷ್ಟೇ ಅನುಬಂಧದ ಸ್ನೇಹ ,ಪ್ರೀತಿಯ ಬಂಧವಲ್ಲ , ಮತ್ತೋರ್ವರನ್ನು ಈ ಇಬ್ಬರಿಂದ ಸಂತೋಷಗೊಳಿಸುವುದೇನಿದೇ ಅದು ನಿಜವಾದ ಸ್ನೇಹ , ಹಾಗೇಯೇ ಆತ್ಮೀಯತೆ ಬೆಳೆದಂತೆಲ್ಲ ಮೊದಲಿದ್ದ ಸ್ವಾಂತಂತ್ರ್ಯ ಸಂಕುಚಿತಗೊಳ್ಳುತ್ತಾ ಹೋಗುತ್ತದೆ ಇದಾದಾಗ ಆ ನಿಜವಾದ ಸಂಬಂಧ ಕಳಚಿದಂತೆಯೇ ಸರಿ
ಯಾವ ಸಮಯದಲ್ಲೂ ಯಾವ ಸಂಗತಿಯಲ್ಲೂ ಸಾವಿರ ಸಂದರ್ಭಗಳಲ್ಲಿಯೂ ಸಹ ಸ್ವಾಂತಂತ್ರ್ಯವಾಗಿರುವುದೇನಿದೆ ಅದು ಸತ್ಯ ಹಾಗೂ ಶಾಶ್ವತ ಬಂಧ .
ಇತ್ತಿಚಿನ ದಿನಗಳಲ್ಲಿ ಸ್ನೇಹ ಸಂಬಂಧಗಳು ಫೋನ್ ನಲ್ಲಿಯೇ ವಾಸ್ತವಕ್ಕೆ ಸಮೀಪದ ಸಂಗತಿಯಾಗಿದ್ದರೂ ಸಹ ಸ್ನೇಹಗಳ ಪ್ರಾರಂಭದಲ್ಲಿ ಯಾವ ಸಂಕೋಲೆಗಳಿಲ್ಲ ಗಂಟೆಯ ಮಾತು,ದಿನದ ವರದಿ ಪ್ರವೃತ್ತಿಯ ಸಂತಸ ಮೆಲುಕು ಪರಸ್ಪರ ವಿನಿಮಯ ,ಮತ್ತೋರ್ವರ ಅನುಕರಣೆ,ಅವರಿವರ ಸುದ್ದಿ,ಹೊಸಲೋಕದ ಸೃಷ್ಠಿಗೆ ಸಂಸ್ಥಾಪಕನಂತೆ ಮರೆವ ಕ್ಷಣಗಳು ಅವರದೇ ಆದರೂ ಆದ್ಯಾಕೋ ಗೊತ್ತಿಲ್ಲ ಬರಬರುತ್ತಾ ತುಂಬಾ ಸಂಕುಚಿತನಾಗುತ್ತಾನೆ.ಎಷ್ಟಾದರೂ ಮನುಷ್ಯ ಜೀವಿ ಅಲ್ಲವೇನು?
ಅವರಂತ್ಯಾಕೆ,ನನ್ನಂತೆ ನಾನು ಅನುಕರಣೆ ಯಾಕೆ ಎಂಬ ತಮ್ಮದೇ ಅಲಾಪನೇಯಲ್ಲಿ ಮೊದಲಿದ್ದ ಸ್ನೇಹವನ್ನು ಸಂಕುಚಿತಕ್ಕೆ ತಳ್ಳುತ್ತಾ ಶಾಂತಿ ನೆಮ್ಮದಿಯ ಬದುಕನ್ನು ತಾವೇ ಅವನತಿಗೆ ಕಾರಣವಾಗುತ್ತಾರೇನೋ ಅನ್ನಿಸುತ್ತದೆ .
ಹೋದ ಮಾತು,ಮೂಡಿದ ಒಡಕು ಎರೆಡನ್ನೂ ಸಹ ಒಂದಾಗಿಸಲೂ ಮಧ್ಯಸ್ಥಿಕೆಯ ಸರಕಿಲ್ಲ,ಕಟ್ಟುವ ಗಾರೆಯವರು ಇನ್ನೂ ದೊರೆತಿಲ್ಲ
ಹಾಗಾಗಿ ವೈ ಮನಸ್ಸಿಗೆ ಆಸ್ಪದ ನೀಡದೆ ಆತ್ಮೀಯತೆಯಿಂದ ಸ್ವಾತಂತ್ರ್ಯ ವನ್ನು ಸಂಕುಚಿತವಾಗಿರಿಸದೆ ಎಲ್ಲರನ್ನೂ ಪ್ರೀತಿಸೋಣ, ಮಾತೃತ್ವ ಭಾತೃತ್ವದಿಂದ ಕಾಣೋಣ .
- ಕಾರ್ತಿಕ ಆಚಾರ್ಯ.ಕೆ, ಎಂ.ಕಲ್ಲಹಳ್ಳಿ ವಿಜಯನಗರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ನಿತ್ಯವೂ ಪಡೆಯುವ ಜೀವನಾನುಭವದ ಉತ್ತಮ ಪ್ರಸ್ತುತಿ.
ಪ್ರತ್ಯುತ್ತರಅಳಿಸಿ