ಮಂಗಳವಾರ, ಅಕ್ಟೋಬರ್ 12, 2021

ಸಾಹಿತ್ಯ ಸಮ್ಮೇಳನ ಪ್ರಶಸ್ತಿ ಪರಂತು (ಕವಿತೆ) - ಶ್ರೀ ಗೊರೂರು ಅನಂತರಾಜು - ಹಾಸನ.


ಸಾಹಿತ್ಯ ಸಮ್ಮೇಳನ  ಪ್ರಶಸ್ತಿ ಪರಂತು
ಸಾಲ ಮಾಡಿ ಕವನ ಸಂಕಲನ
ಪ್ರಕಟಿಸಿದ ತಪ್ಪಿಗೆ
ಸಾಹಿತ್ಯ ಸಮ್ಮೇಳನದಲ್ಲಿ
ಶಾಲು ಹೊದಿಸಿ ಸನ್ಮಾನಿಸಿ
ಬಂಡಾಯ ಕವಿಯೆಂದು
ಹಾಡಿ ಹೊಗಳಿದರು
ಮನೆಯಲ್ಲಿ ಮಡದಿ ತೆಗಳಿದಳು
ಹೊದ್ದುಕೊಂಡು ಬೆಚ್ಚಗೆ
ಮಲಗಿರಿ ತೆಪ್ಪಗೆ
ಮತ್ತೆ ಕವಿತೆ ಬರೆದರೆ
ನಾ ಹೋಗುವೆ ತೌರಿಗೆ
ಹೆಂಡ ಬಿಟ್ಟರೂ 
ಬಂಡಾಯ ಕವಿತೆ ಬಿಡಲಾದೀತೆ
ಬರೆದೆ ಹೊಸ ಕವಿತೆ
ಅದು ನವ್ಯ ಕವಿತೆ
ಬಂಡಾಯವೆದ್ದು ಮಡದಿ ತೌರಿಗೆ
ನಾನು ಅಡಿಗೆ ಮನೆ ಒಳಗೆ
ಕೋಸಂಬರಿಯಿಂದ ಕಾದಂಬರಿಯವರಿಗೆ
ಅಡಿಗೆ ಮನೆ ಸಾಹಿತ್ಯಕ್ಕೆ
ಒಗ್ಗರಣೆ ಹಾಕಿ ಬರೆದೆ
ಮಡದಿ ಹೆಸರಿನಲ್ಲಿ
ಪತ್ರಿಕೆಗೆ ಕಳಿಸಿದೆ
ಅವಳು ಬೆಳಕಿಗೆ ಬಂದಳು
ನಾನು ಕತ್ತಲೆಗೆ ಸರಿದೆ
ಅವಳೀಗ ಸಮಾಜ ಸುಧಾರಕಿ
ನಾನು ಅಡಿಗೆ ಮನೆ ಭಟ್ಟಾರಕ
     
- ಗೊರೂರು ಅನಂತರಾಜು
ಹಾಸನ
9449462879.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...