ಮಂಗಳವಾರ, ಅಕ್ಟೋಬರ್ 12, 2021

ಗಝಲ್ - ಲಕ್ಷ್ಮೀ ನಾರಾಯಣ ಕೆ ವಾಣಿಗರಹಳ್ಳಿ.

ಗಜಲ್

ಮುಚ್ಚಿದ ಕಣ್ಣೊಳಗೂ ಶಿಲೆಯಂತೆ ಕಾಣುವೆಯಲ್ಲ ಸಖಿ
ಧ್ಯಾನಿಸಿ ಕುಳಿತಾಗಲೂ ಉಸಿರಂತೆ ಪ್ರಾಣವಾದೆಯಲ್ಲ ಸಖಿ

ನಿನ್ನೊಂದಿಗಿನ ನೆನಪುಗಳೆ ಸಿಹಿ ಸವಿಯ ಹಾಲು ಜೇನು  
ನನ್ನೆದೆಯಲಿ ನಿನ್ನದೇ ಹೆಸರು ಅಚ್ಚಾದಂತೆ ಜೊತೆಯಾದೆಯಲ್ಲ ಸಖಿ

ನೀನಿಲ್ಲವೆನ್ನುವ ಸುಳ್ಳಿಗೆ ಸಾಕ್ಷಿಯಾದ ನೆನಪುಗಳ ಮಾಲೆ 
ಹೂವಿನಲ್ಲಿ ಮಕರಂದ ಸೇರಿದಂತೆ ಗಮಗಮಿಸಿದೆಯಲ್ಲ‌ ಸಖಿ

ನೀನಿಲ್ಲದ ಜಗದಲ್ಲಿ ಸುಖವೆಲ್ಲಿಯದು? ಊಹಿಸಲು ಸಾಧ್ಯವೆ
ಇರುಳಲ್ಲಿನ ಹುಣ್ಣಿಮೆಯ ಚಂದಿರನಂತೆ ಮನದಬೆಳಕಾದೆಯಲ್ಲ ಸಖಿ

ಒಮ್ಮೆಯಾದರೂ ಬಂದುಬಿಡು ಹೃದಯದ ಒಳಗಡೆ ಬಡಿತವಾಗಿ
ಉಸಿರು ನಿಂತಾಗಲು ಎದೆಮೇಲೆ ಮಲ್ಲಿಗೆಯಂತೆ ನಗುತ್ತಿರುವೆಯಲ್ಲ ಸಖಿ.

- ಲಕ್ಷ್ಮೀ ನಾರಾಯಣ ಕೆ ವಾಣಿಗರಹಳ್ಳಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...