ಭಾನುವಾರ, ನವೆಂಬರ್ 7, 2021

ಕೋಣೆಯೊಳಗೆ ಬೆಳೆದವಳು (ಕವಿತೆ) - ಗೌತಮ್ ಗೌಡ, ಕೀರಣಗೆರೆ, ರಾಮನಗರ.

ಹುಟ್ಟು, ತೊಟ್ಟಿಲು
ಹಟ್ಟಿ, ಹಟ್ಟಿಯಲ್ಲಿನ ಮಂದಿ
ಇಷ್ಟನ್ನೇ ನೋಡಿದವಳು.
ಎಲ್ಲರಂತೆ
ಕುಂಟೆ ಬಿಲ್ಲೆ, ಕೋಲಾಟಗಳ
ಆಡಿದವಳಲ್ಲ
ಮುಟ್ಟಾದಾಗ ಕೊಟ್ಟಿಗೆಗೆ
ಬೆನ್ನು ಕೊಟ್ಟು
ಹೆತ್ತವರು ಕೈ ತೊಳೆದು
ಕೊಂಡಾಗ,,
ಕಟ್ಟಿ ಕೊಂಡವನ ಕಾಲು
ತೊಳೆದವಳು...
ಬಗೆ ಬಗೆಯ ಅಡುಗೆ ಹಟ್ಟಿ
ಹುಟ್ಟ ಬಟ್ಟೆಗಳ ಕೈ
ಕಳಚುವಂತೆ ತಟ್ಟಿ
ಸದಾ ನೀರಲ್ಲಿ ನೆಂದವಳು 
ಮಡಿಯಲ್ಲಿ ಬೆಂದವಳು
ಬೈಗುಳಗಳನ್ನೇ ಉಂಡರು
ಉಸಿರಿನ ಸದ್ದಡಗಿಸಿ 
ಮೌನವನ್ನೇ ಉಸುರಿದವಳು
ಮಾತುಗಳನ್ನೇ ಕಾಣದವಳು..
ಕಣ್ಣ ಬಿಂಬದಲಿ ಸದಾ ಗೋಡೆಗಳ ಕಂಡರು 
ಬಯಲ ಗಾಳಿಯ ಕುಡಿಯದವಳು
ಇಚ್ಛೆ ಇದ್ದಾಗ ಹಾಸಿಗೆ ಕಾಣದವಳು
ಇಚ್ಛೆಇಲ್ಲದಿದ್ದರೂ ಹಾಸಿಗೆ ಬೆಚ್ಚಗೊಳಿಸಿದವಳು
 ಸದಾ ಗೋಡೆಗಳ ನಡುವೆಯೆ
ಬಸವಳಿದವಳು 
ಇವಳು ಎಲ್ಲರಂತೆ
ಹೂ ಮುಡಿದು ಬಯಲಲ್ಲಿ ತಿರುಗಿದವಳಲ್ಲ
ಕಿತ್ತು ತಂದ ಹೂವನು 
ಕೋಣೆಯೊಳಗೆ ಮುಡಿದು ಮುಗಿಲುಗೊಂಡವಳು..
ಬಣ್ಣ ಬಣ್ಣದ ಹೂಗಳ ಕಾಣದವಳು 
ಕಿಟಕಿ, ಸೂರುಗಳ
ತೂತಿನಳ್ಳಿ ನುಸುಳಿಬಂದ
ಕಿರಣಗಳಲ್ಲಿ
ಬೆಳಕು ಕಂಡವಳು..
ಸದಾ ಇರುಳಲ್ಲಿ ಮಿಂದವಳು
ಇಂತವಳು
ಕೋಣೆಯೊಳಗೆ ಬೆಳೆದವಳು
 -ಗೌತಮ್ ಗೌಡ, ಕೀರಣಗೆರೆ, ರಾಮನಗರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...