ಅಂಧಕಾರವ ಅಳಿಸುವುದು
ಅಣ್ಣನೆಂಬ ಹಣತೆ
ನನ್ನ ನಗುವ ಹಣತೆ ನನ್ನಣ್ಣ
ನನ್ನ ಜೀವಜ್ಯೋತಿ ನನ್ನಣ್ಣ
ನನ್ನಣ್ಣನ ಸದಾ ನಕ್ಕರೆ
ನನ್ನಣ್ಣ ತೋರುವ ಅಕ್ಕರೆ
ನನ್ನ ಜೀವನ ಹಾಲು ಸಕ್ಕರೆ
ಬದುಕಲಿ ನನ್ನಣ್ಣ ಬಂಗಾರ
ಅಣ್ಣ ನಗುವ ಮುಂದೆ ಬೇಕಿಲ್ಲ ಸಿಂಗಾರ
ಭರವಸೆ ಬೆಳಕಿಗೆ ನನ್ನಣನೇ ಆಧಾರ.
- ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ