ಭಾನುವಾರ, ನವೆಂಬರ್ 7, 2021

ನಮ್ಮ ಕನ್ನಡ ಭಾಷೆ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

ತಾಯಿ ಭಾಷೆ ಎದೆಗೆ ಸವಿ ನೀಡುತಿರುವುದು
ಏಯ್ ಮಗು ಕಲಿತು ನಗು ಮುದವ ಕೊಡುವುದು
ಓಯ್ ಜಾಣ ಓದಿ ಬೀಗು ಹಿರಿಮೆ ತಿಳಿವುದು
ಬಾಯಿ ತೆರೆ ಉಲಿಯುತಿರು ಭಾಷೆ ಬೆಳೆವುದು

ತಂಪು ನೀಡಿ ಮನದ ಕೊಳೆ ತೊಳೆದು ಬಿಡುವುದು
ಇಂಪು ತಾನು ಕಂಪು ತಿಳಿ ಖುಷಿಯ ಕೊಡುವುದು
ಪಂಪನಂತೆ ಕವಿಗಳೆಲ್ಲ ನಾಡ ಸ್ಮರಿಸಲು
ಹಂಪೆಯಂತ ನೆಲೆಗಳಿಲ್ಲಿ ಕಲೆಗೆ ಇರುವವು

ಮಿಂದು ಏಳು ಧನ್ಯ ನೀನು ಚರಿತೆ ತಿಳಿದರೆ
ಇಂದೆ ಬಿಡು ಮೋಹ ತೊರೆ ಅನ್ಯ ಭಾಷೆಯ
ಮುಂದೆ ಹುಟ್ಟೋ ನಾಡ ಮಗು ನುಡಿಯ ಉಳಿಸಲಿ
ಚೆಂದ ಇಂತ ಭಾಷೆ ಸವಿ ಪರರಿಗೆ ಹಂಚಲಿ

ನಮ್ಮ ಭಾಷೆ ಕನ್ನಡ ಒಡನೆ ಇರುವುದು
ಹೆಮ್ಮಯಿಂದ ನುಡಿಗೆ ನಮ್ಮ ಜೀವ ಮಿಡಿಯಲಿ
ಅಮ್ಮನೆದೆ ಸವಿಯನೆಲ್ಲ ನುಡಿಯು ತಿಳಿಸಿತು
ಒಮ್ಮಗೆಲ್ಲ ಜಗದ ಬಗ್ಗೆ ಕಣ್ಣ ತೆರಸಿತು

ಕನ್ನಡ ತಾಯಿಗೆಮ್ಮ ಕೋಟಿ ನಮನವು
ಇನ್ನೇನು ಜಗದೊಳೆಲ್ಲ ತಾನು ಮೆರೆಯಲಿ
ಹೊನ್ನಿನಂತ ಭಾಷೆ ಇದು ಜಗವನಾಳಲಿ
ಕನ್ನಡದ ಕಂದನಿಗೆ ಜಯವೆ ದೊರೆಯಲಿ
- ಶ್ರೀ ತುಳಸಿದಾಸ ಬಿ ಎಸ್
ಶಿಕ್ಷಕರು ಬಾಲಕರ ಸರಕಾರಿ ಪ್ರೌಢ ಶಾಲೆ ಸಿಂಧನೂರು
ರಾಯಚೂರು ಜಿಲ್ಲೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...