ಭಾನುವಾರ, ನವೆಂಬರ್ 7, 2021

ಬೆಟ್ಟದ ಹೂವು ಬಾಡಿ ಹೋಯಿತು (ಕವಿತೆ) - ಅಂಬರೀಶ ನಾಯ್ಕೋಡಿ.

ಮರೆಯಾದ ಮಾಣಿಕ್ಯ,
ಪುನೀತ ನೆಂಬ ಚಾಣಕ್ಯ.
ತುಂಬಾ ನೋವಾಗುತ್ತಿದೆ ಮನಕ್ಕೆ,
ಸಂಕಟವಾಗುತ್ತಿದೆ ಜಗಕ್ಕೆ.....!

ಸಾವಿರಾರು ಅಭಿಮಾನಿಗಳ ಸರದಾರ,
ನಮ್ಮ ಪುನೀತ ರಾಜಕುಮಾರ.
ಚಿತ್ರರಂಗದ ನೇತಾರ,
ರಾಜಕುಮಾರನ ಈ ಕುವರ.....!

ಬೆಟ್ಟದ ಹೂವು ಬಾಡಿಹೋಯಿತು,
ಜನಮನಕೆ ತುಂಬಾ ನೋವಾಯಿತು.
ವರ್ತಿಸಿದರು ಅನೇಕ ಚಿತ್ರಗಳಲ್ಲಿ,
ಪ್ರೀತಿ ಹಂಚಿದರು ಮುಗ್ಧ ಭಾವನೆಗಳಲ್ಲಿ.....!

ಯುವಕರಿಗೆ ಸ್ಪೂರ್ತಿಯಾದರೂ ಯುವರತ್ನ,
ಮೆಚ್ಚಲೇಬೇಕು ಇವರ ಪ್ರಯತ್ನ.
ಚಿತ್ರರಂಗದಲ್ಲಿ ಮಾಡಿದರು ಐತಿಹಾಸಿಕ ಕ್ರಾಂತಿ,
ಇವರ ಆತ್ಮಕ್ಕೆ ಸಿಗಲಿ ಚಿರಶಾಂತಿ.....! 
   -  ಅಂಬರೀಶ ನಾಯ್ಕೋಡಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...