ಭಾನುವಾರ, ನವೆಂಬರ್ 7, 2021

ಹನಿಗವನಗಳು (ಫೊಲಿಟಿಕಲ್ ಪದ್ಯಗಳು) - ಶ್ರೀ ಗೊರೂರು ಅನಂತರಾಜು.

1,ಬೈಯ್ದು ಕೂಗಾಡುವ
ಬೈ ಎಲೆಕ್ಷನ್
ಕುಡ್ಡು ತೂರಾಡುವ
ನಮ್ ಕಲೆಕ್ಷನ್
ಆಮೇಲೆ
ಗೊತ್ತೆ ಇದೆಯಲ್ಲಾ
ಟಾಟಾ ಬೈಬೈ
ನಮ್  ಸೆಲೆಕ್ಷನ್

2, ಹೆಂಡ ಕುಡಿದು ಹೋದರೆ
ಹೆಂಡತಿ ಕದ ತೆರೆಯುವುದಿಲ್ಲ
ಅದಕ್ಕೆ 
ನಾನು ಹೊರಗೆ ಕುಡಿಯುವುದಿಲ್ಲ

3. ಹೆಂಡ ಕೊಟ್ಟರೆ ಮುಟ್ಟಬೇಡಿ
ಬೈಯ್ದಳು ಮನೆಯಲ್ಲಿ ಮಡದಿ
ಕಾಸು ಚಿನ್ನ ಎಂದೆ
ಓಕೆ ಬಾಸು 
ನಮ್ಮ ಮೇಲ್ಮನೆಗೆ  ಅವಳೇ 
ಬಿಗ್  ಬಾಸು

4. ನಾ ಹೋಗಿದ್ದೆ
ಚುನಾವಣಾ ರಾಲಿಗೆ
ಹೈಕ್ಲಾಸ್ ಭಾಷಣ ಕೇಳಿ
ಹತ್ತಿದ್ದು ಪ್ಯಾಸೆಂಜರ್ ರೈಲಿಗೆ
    
- ಗೊರೂರು ಅನಂತರಾಜು, ಹಾಸನ. 9449462879.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...