ಭಾನುವಾರ, ನವೆಂಬರ್ 7, 2021

ಇವರೆಂಥ ನಾಯಕರು (ಕವಿತೆ) - ಮೋಹನ್ ಪ್ರಸಾದ ಎಸ್.

 ಮಾನ ಮರ್ಯಾದೆಗಳನ್ನು ಮರೆತು
ನಡೆಸುವರು ಸಾಮಾಜಿಕ ಅತ್ಯಾಚಾರ 
ಎಲ್ಲಿ ಸಿಕ್ಕಿತು ಹೆಣ್ಣಿಗೆ ಗೌರವ? 
ಏಕೆ ನಮ್ಮ ಮಧ್ಯೆ ಈ ರೀತಿ? 
ಹೇಳುವರು ನಮ್ಮದು ಮಾದರಿ ಸಂಸ್ಕೃತಿ 
ಆದರೆ ರಕ್ಷಕರೇ ಭಕ್ಷಕರಂತೆ ರೂಪ ತಾಳಿ 
ಎತ್ತ ಸಾಗುತ್ತಿದೆ ನಮ್ಮ ಸಮಾಜದ ಸ್ಥಿತಿ. 

       ತಲೆ ಹೊಡೆದು ದರೋಡೆ ಮಾಡಿ
ಕಟ್ಟುವವರು ಮಹಲು ಮಹಡಿಯ 
ಹೇಳುವರು ನಾವು ಸಭ್ಯರು ಎಂದು 
ನಾಟಕದಿಂದ ಜನರನ್ನು ಮರಳು ಮಾಡಿ 
ತೋರಿಸುವರು ದುಷ್ಟ ಕ್ರೂರ ಮುಖದರ್ಶನವ
ನಂತರ ಎಸಗುವರು ಅನಾಚಾರದ ಅಟ್ಟಹಾಸವ. 

ಕಪಟ ಮೋಸ ಸುಳ್ಳು ನಮ್ಮಲ್ಲಿ ಇಲ್ಲ 
ಎಂದು ಮೊಸಳೆ ಕಣ್ಣೀರು ಹಾಕುತ 
ಊಸರವಳ್ಳಿಯಾಗೆ ಬದಲಿಸುವರು ತಮ್ಮ ಎಲ್ಲಾ ಆಶ್ವಾಸನೆ ನಾ .....
ನಂಬದಿರು ನಂಬದಿರು............... 
 -  ಮೋಹನ್ ಪ್ರಸಾದ ಎಸ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...