ಬದುಕು ಸಹ ಪ್ರತಿ ದಿನ ದಣಿಯುತ್ತಲೇ ಇದೆ ಸಾಕಿ
ವಿಶ್ರಾಂತಿಸಲಿ ಬಿಡು,
ದೇವ್ರಾಣೆ ಬದುಕಿನ ಪ್ರತಿದಿನವೂ ನೀನೇ ಎಲ್ಲ ಎಂದು ಕೊಂಡು ಬದುಕಿದವನು ನಾನು,
ವಿಶ್ರಾಂತಿ ಕೇಳುತ್ತಿರುವೆನು ಅಲ್ಲ
ಒಂದಿಷ್ಟು ನೀಡಿಯೇ ಬಿಡು, ಏಳೇಳು ಜನ್ಮಕ್ಕೂ, ಮತ್ತೆಂದೂ ನಾನು ನಿನ್ನ ಬಳಿ ವಿಶ್ರಾಂತಿ ಕೇಳಿರಬಾರದು.
ಪ್ರತಿ ಜನ್ಮದಲ್ಲೂ ನೀನು ನನ್ನೊಡನೆ ಜೊತೆಯಾಗುತ್ತಲೇ ಇರು, ಆದರೆ
ಮನವ ಕುಕ್ಕಿ ತಿನ್ನಬೇಡ ನೋವಾಗುವುದು..
ಹೆಬ್ಬಾವಿನಂತೆ ಪೂರ್ತಿಯಾಗಿ ನುಂಗಿ,
ಸಮಯ ದಕ್ಕಂತೆಲ್ಲಾ ಜೀರ್ಣಿಸುತ್ತಾ ವಿಶ್ರಾಂತಿಸು
ನಾನೇನು ಮುನಿಸಿಕೊಳ್ಳುವುದಿಲ್ಲ, ಸರಿಯೇ.!
ನೀನು ಬೆಳಕು ನೀಡುವ ಒಲವೆಂದು ಕೊಂಡಿದ್ದೇನೆ
ಹಲವು ಬಗೆಯ ಆಲೋಚನೆಯೊತ್ತು ಬರಬೇಡ,
ಮನ ಕೊಂಚ ಮುನಿಸಿಕೊಂಡಿದೆ,
ಸಮಾಧಾನ ಪಡಿಸಲು ನೀನೇನು ಆಗಸವನ್ನೇ ಧರೆಗೆ ತರಬೇಕಿಲ್ಲ. ನಿನ್ನ ಒಲವಿನ ಮುಗುಳ್ನಗೆ ಸಾಕೆನಗೆ,
ಆಗುವುದಲ್ಲ...?
ಪರಿಮಳವಿರುವ ಹೂದೋಟದಲಿ ನನ್ನದೇ ಆದ ಒಂದು ಹೊಸ ಹೂ ತಳಿಯೊಂದನ್ನು
ನಾಟಿ ಮಾಡಿದ್ದೇನೆ. ಅದು ಎಂದೂ ಬಾಡುವುದಿಲ್ಲ
ಒಮ್ಮೆ ಮುಡಿದು ಕೊಂಡರೆ, ಹಣೆಯ ಮೇಲಿನ
ಕುಂಕುಮ ಅಳಿಸಿದಾಗಲೇ ಬಾಡುತ್ತೆ,
ಒಮ್ಮೆ ಮುಡಿದುಕೋ ಆ ಹೂವಿಗೆ ಜೊತೆಯಾಗಿ ಮುನ್ನಡಿ ಕತ್ತಲೆಯಲ್ಲಿಯೂ ಹೊಳೆಯುತ್ತೀಯ ಎನ್ನುವ ಭರವಸೆ ನಿನ್ನಲ್ಲಿಯೇ ಮನದಟ್ಟಾಗಲಿ ಪ್ರಿಯೆ. !!
ರೆಕ್ಕೆಯ ಬಿಚ್ಚಿ ಹಾರಬಲ್ಲ ಹಕ್ಕಿಯನೊಮ್ಮೆ ನೋಡು,
ಅದೆಷ್ಟು ಸ್ವತಂತ್ರ ಅಲ್ವೇ,
ಹಾಗೆಯೇ ಅದರಂತೆಯೂ ನೀನು ಸ್ವತಂತ್ರಳೇ,
ಮೂರುಘಂಟಿನ ದಾರ ಧರಿಸಿದೆ ಎಂದರೆ
ಕೊಂಚ ಬಂದಿಕಾನೆಯಲ್ಲಿ ಬದುಕಬೇಕಾಗುತ್ತೆ, ಅಲ್ಲಿಯೂ ಸ್ವತಂತ್ರವಿದೆ ಸಂಸ್ಕೃತಿ-ಸಂಸ್ಕಾರ ನಿನ್ನದಾಗಿರಲಷ್ಟೇ.!!!
ಚಿತ್ತಾರದ ಬೆಳಕಿದಿಯಲ್ಲ ಅಲ್ಲಿ ನೀ ಹೊಳೆಯಲು
ಒಂದಿಷ್ಟು ಜಾಗವನ್ನು ಮಾಡಿರುವೆ,
ನಿನಗೆ ಸಾಕನ್ನಿಸಿದಾಗ ಅಲ್ಲಿಯೂ ಗೆಳೆಯರಿದ್ದಾರೆ
ಒಮ್ಮೆ ಅವರೊಂದಿಗೂ ಸಮಯ ಕಳೆದು ನೋಡು,
ಒಂದಿಷ್ಟು ನೆಮ್ಮದಿ ಕೊಂದವರ ಚಿತೆ ಆದಷ್ಟು ಬೇಗ ತಯಾರಾಗಲು ಉಪಾಯ ದೊರಕುವುದೇನೋ
ಸರಿಯೇ...... ! ಸರಿ ನಾನಿನ್ನು ಬರಲೇ................. !
- ಮಹೇಶ್ ಎಂ.ಗದ್ವಾಲ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ