ಬಾಳ ನೊಗವ ಹೊತ್ತು ತೆತ್ತು ಫಲದ ಧಾರೆ
ಹಸಿಗೂಸಿನ ತೊದಲು ಜೊಲ್ಲೆ ಆಕೆ ಒಡವೆ
ಗುಡಿಕಂಬದ ಹೂವೆಲ್ಲ ಕೂಸ ಕನಸ ಗೋಪುರ
ಎಣಿಸಲು ಬಾರದಾಕೆ ಸೆರಗಂಚಲಿ ಕೂಡಿಟ್ಟ ಕಾಸು
ಸವೆದ ಹಿಮ್ಮಡಿ ಬಿರುಕು ಬೊಗಸೆ ತುಂಬಿದ ಕಂಬನಿ
ಬಾನ ಭುವಿಯ ಬಂಧವು ಉಸಿರ ಹೆಸರಾಚೆಗೂ
ಹಸಿವ ಕಂಡಿಲ್ಲ ಬವಣೆ ಅರಿವಿಲ್ಲ ಅವಳ ನೆರಳಡಿ
ಅಳಿವು ಉಳಿವಿನ ಓಟದಿ ನಿನದೆ ಗೆಲುವಿರಲಿ !
ನಿನ್ನ ಆ ಮಡಿಲ ಋಣವು ಆ ಮಣ್ಣ ಗುಣದಂತೆ
ಅರಿಯದ ಹರೆಯದಿ ಹಡೆದೆ ಹೆಗಲಾದೆ ನಡೆಸಿದೆ
ಬರಿದಾದ ಬಾನಡಿ ಭರವಸೆಯ ಹಗಲು ನೀನಾದೆ
ದಣಿವ ದೂಡಿ ಹಸಿವ ನೀಗಿದೆ ನೆಮ್ಮದಿಯ ನಾಳೆಗೆ
ನಿನ್ನ ಕಂಗಳಪ್ಪಿ ಕಳೆದ ದಿನಗಳು ಕಮರಿ ಹೋಗವು
ಸ್ವಾರ್ಥದ ನೆರಳು ಬೆಂಬಿಡದೆ ಕಾಡಿದೆ ಬೆಳಕೆಂಬ ಈ ಬದುಕಲಿ .
- ಮಂಜೇಶ್ ದೇವಗಳ್ಳಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ