ಶನಿವಾರ, ಡಿಸೆಂಬರ್ 11, 2021

ಕನ್ನಡಮ್ಮನ ಸಂಕೇತ (ಕವಿತೆ) ವಿಜಯ ಲಕ್ಷ್ಮಿ, ಕೊಡಿಯಾಲ.

ಉತ್ತುಂಗ ಶಿಖರವನೇರಿ,
ಸ್ವರ್ಣ ಕಿರಣವನು ತೋರಿ,
ಏರುತಿಹುದು ನೋಡು ನಮ್ಮ ಬಾವುಟ

 ಮುತ್ತೈದೆ ಕೆನ್ನೆಗರಿಸಿಣ,
ಅವಳ ಹಣೆಗೆ ಕುಂಕುಮ,
ಕನ್ನಡಮ್ಮಗೆ ಅರಿಸಿನ ಕುಂಕುಮ ನಮ್ಮ ಬಾವುಟ

ನೇಸರನ ಉದಯದೆ ನೋಡು,
ಉಷೆಯ ಆಗಮನದ ಹಾಡು,
ಅವರಸಂಗಮವೇ ನೋಡು ನಮ್ಮ ಬಾವುಟ

ಅರಿಸಿನದ ರವಿಕೆ ತೊಟ್ಟು,
ಕುಂಕುಮದ ಸೀರೆಯನುಟ್ಟು,
ಮರೆದಿಹಳು ಕನ್ನಡತಿ ನಮ್ಮ ಬಾವುಟ

ಮುಂದಿನ ದಿನಗಳಲ್ಲಿ,
ಕನ್ನಡವೇ ಶಾಶ್ವತವಿಲ್ಲಿ,
ಯುಗ ಯುಗ ದಲ್ಲೂ ಬೆಳೆಯಲಿ ನಮ್ಮ ಬಾವುಟ

ದೀವಿಗೆಯ ಬೆಳಕಿನಲ್ಲಿ,
ಭಾವನೆಯ ಉದುಗಿಸಿದಲ್ಲಿ,
ಬೆಳಕ ಕಿರಣದಲ್ಲಿ ಕಂಡೆ ನಮ್ಮ ಬಾವುಟ

ಉನ್ನತ ಶಿಖರಕ್ಕೇರಿ,
ಆಗಸದೆತ್ತರಕ್ಕೇರಿ, ಕನ್ನಡದ ಕೀರ್ತಿ ಬೆಳಗಲಿ ನಮ್ಮ ಬಾವುಟ, ನಮ್ಮ ಬಾವುಟ

ಜೈ ಭುವನೇಶ್ವರಿ, ಜೈ ಕನ್ನಡಾಂಬೆ, ಸಿರಿ ಕನ್ನಡ ಬಾಳಲಿ, ಕನ್ನಡ ಏಳಲಿ, ಕನ್ನಡವೆ ವಿಜೃಂಭಿಸಲಿ.
- ವಿಜಯ ಲಕ್ಷ್ಮಿ, ಕೊಡಿಯಾಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...