ಶನಿವಾರ, ಜನವರಿ 1, 2022

ನಾನು ಕಂಡಂತೆ ನನ್ನ ಬಸವೇಶ್ವರ ಗ್ರಂಥಾಲಯ (ಕಿರು ಲೇಖನ) - ರಾಜು ಬೈರೆಡ್ಡಿ .

ಗ್ರಂಥಾಲಯ ಇದು ಜ್ಞಾನದ ಆಲಯ. 'ಪುಸ್ತಕದಲ್ಲಿ ಇರುವ ಅಕ್ಷರ ಮಸ್ತಕಕ್ಕೆ ಏರಿಸಿದರೆ ಮಸ್ತಕವೆ ಒಂದು ದೊಡ್ಡ ಪುಸ್ತಕವಾಗುವದು;
 ಎಂಬ ಧ್ಯೇಯ ವಾಕ್ಯದಂತೆ ಪುಸ್ತಕ ನಮ್ಮ ಬಾಳಿನ ಬೆಳಕು ಪುಸ್ತಕದಲ್ಲಿರುವ ಅಕ್ಷರ ಯಾವತ್ತಾದರೂ ಒಂದು ದಿನ ಅಳಿಸಿ ಹೋಗಬಹುದು ಆದರೆ ನಿಮ್ಮ ನಿಮ್ಮಾಮಸ್ತಕ (ಮೆದಳು)ಕ್ಕೆ ಹಾಕಿದ ಅಕ್ಷರ ಎಂದಿಗೂ ಅಳಿಸಿ ಹೋಗಲಾರದು. ಒಂದು ಮಾತು ಅಂತರು ನಿಜ ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಟ್ಟೆ ಕೊಡುತ್ತದೆ.ನಿಮಗೆ ಹೇಗೆ ಆಕಾಶದಲ್ಲಿ ಹೇಗೆ ನಕ್ಷತ್ರಗಳು ಕಾಣುತ್ತದೆಯೋ ಹಾಗೆ ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿ ಪುಸ್ತಕಗಳು ಇವೆ ಅದು ಹೇಗೆ ಹೊಳೆಯುತದ್ದೆಯೂ ಹಾಗೆ ನಮ್ಮ ವಿದ್ಯರ್ಥಿಗಳು ನಮ್ಮ ಪುಸ್ತಕಗಳನ್ನು ಓದಿ ಒಂದಲ್ಲ ಒಂದು ದಿನ ಹೊಳೆಯ್ತಾರೆ   ಮೊದಲಿಗೆ ಗ್ರಂಥಾಲಯ ಎಂದರೇನು?ಇದು ನಮ್ಮ ಸಂಗ ಜೀವಿ ಗ್ರಂಥಾಲಯ ಎಂದರೆ ಒಂದು ಕಡೆ ಪುಸ್ತಕವನ್ನು ಸಂಗ್ರಹಿಸಿ ಜ್ಞಾನ  ವನ್ನು ನೀಡುವ ಆಲಯವೆ ಗ್ರಂಥಾಲಯ ನಮ್ಮ ಗ್ರಂಥಾಲಯದಲ್ಲಿ ಸರಿಸುಮಾರು  20 ರಿಂದ 30 ಸಾವಿರ ಪುಸ್ತಕಗಳನ್ನು ಒಳಗೊಂಡಿದೆ ಇಲ್ಲಿ ವಿಧ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಆ ಗ್ರಂಥಾಲಯದ ವಾತಾವರಣ ಮತ್ತು ಅಲ್ಲಿನ ನಿಶ್ಯಬ್ಧ ನಮಗೆ ಇನ್ನೂ ಓದಬೇಕೆಂಬ ಹಂಬಲ ಹೆಚ್ಚಿಸುತ್ತದೆ ಇಲ್ಲಿ ಕುಳಿತು ಓದಿದರೆ. ನಾವು ಸಾಕಷ್ಟು ವಿಷಯ ತಿಳಿದು ಕೊಳ್ಳಬೇಕೆಂಬ ಹಂಬಲ  ನಮ್ಮ ಮನಸಿನಲ್ಲಿ ಬಂದರೆ ನಾವು ಸಾಕಷ್ಟು ವಿಷಯವನ್ನು ತಿಳಿದು ನಮ್ಮ ಕಾಲೇಜಿನ ಹೆಸರನ್ನು ದಶ ದಿಕ್ಕಿನಲ್ಲೂ ಹಬ್ಬಿಸಬಹುದು ಇದು ನೂರರಷ್ಟು ನಿಜ  ಒಂದು ಮಂದಿರ ಕಟ್ಟಿದರೆ ಸಾವಿರ ಬಿಕ್ಷಕರು ಹುಟ್ಟುತ್ತಾರೆ ಒಂದು ಗ್ರಂಥಾಲಯ ಕಟ್ಟಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ.

-ರಾಜು ಬೈರೆಡ್ಡಿ 
ತಾ .ಶಹಾಪುರ ಜಿ.ಯಾದಗಿರಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...