ಶನಿವಾರ, ಜನವರಿ 8, 2022

ಹೊಸವರ್ಷದ ಸಂಕಲ್ಪ (ಲೇಖನ) - ಮಲ್ಲಿಕಾರ್ಜುನ ಎಸ್ ಆಲಮೇಲ

ನಮ್ಮಯ ಭಾರತೀಯ ಪರಂಪರೆಯ ನೂತನ ವರುಷ ಹರುಷದ ಯುಗಾದಿಯಾದರು. ನಾವೆಲ್ಲ ಒಗ್ಗಿಕೊಂಡಿರುವ ಮತ್ತು, ಅತಿ ಆಡಂಬರದಿ ಸ್ವಾಗತಿಸುವ ದಿನದರ್ಶಿಕೆಯ  ಆಂಗ್ಲ ಹೊಸವರ್ಷಕ್ಕೆ 
ಪ್ರಪ್ರಥಮದಲ್ಲಿ  ಸಕಲ ಸುಜನರಿಗೂ ಹಾರ್ದಿಕ ಶುಭಾಶಯಗಳು. ಈ ಆಂಗ್ಲರ ನೂತನ ವರ್ಷದ ಪ್ರಥಮ ದಿನವನ್ನು ಕುಡುಕರ ದಿನಾಚರಣೆಯನ್ನಾಗಿ ಘನವೆತ್ತ ಸರಕಾರ ಘೋಷಣೆ ಮಾಡಬೇಕೆನ್ನುವದು ಒತ್ತಾಯ ಪೂರ್ವಕ ನನ್ನ ವಯಕ್ತಿಕ ಅಭಿಪ್ರಾಯ. ಏಕೆಂದರೆ, ಆ ದಿನದ ಮುನ್ನ ರಾತ್ರಿ ಮದ್ಯದ ಪ್ರವಾಹವೇ ಆರ್ಭಟಿಸುತ್ತದೆ, ಮಾದಕ ವಸ್ತುಗಳಿಂದ ಶೃಂಗಾರ ಗೊಂಡಿರುವ ದುರ್ವ್ಯಸನಿಗಳ  ಅನಧಿಕೃತ ಸಾಮ್ರಾಜ್ಯವೇ ಅನಾವರಣ ಗೊಳ್ಳುತ್ತದೆ. ಥೂ ಇದು ನಮ್ಮ ಸಂಸ್ಕೃತಿಯೇ ?. ಪರಮಪವಿತ್ರ ಭರತ ಭುವಿಯಲ್ಲಿ ಜನ್ಮವೆತ್ತಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅಡಿಯಳಾಗುತ್ತಿದ್ದೇವೆಲ್ಲ ಎಂತಹ ದುರ್ಗತಿ ನಮ್ಮದು. ಇದು ಹೀಗೆ ಮುಂದುವರೆದರೆ ಮಹಾನ್ ವೀರರ ಹೋರಾಟ, ತ್ಯಾಗ, ಬಲಿದಾನದ ಪ್ರತಿಫಲವಾಗಿ ಲಭಿಸಿರುವ, ಶ್ರೇಷ್ಠ ಸ್ವಾತಂತ್ರ್ಯವನ್ನು ಕಳೆದುಕೊಂಡು ಮತ್ತೆ ಆಂಗ್ಲರ ಅಡಿಯಾಳಾಗಿ ಬದುಕುವ, ದುಃಸ್ಥಿತಿ ಬಂದೊದಗಿದರು ಆಶ್ಚರ್ಯವಿಲ್ಲ. 
ಅದಕ್ಕಾಗಿ ನನ್ನ ಈ ಆಂಗ್ಲ ನೂತನ ವರ್ಷ ಮೊಟ್ಟಮೊದಲ ಸಂಕಲ್ಪವೆಂದ್ರೆ ಪರದೇಸಿ ಸಂಸ್ಕೃತಿಯ ಪಾಶಾಂಕುಶದಲ್ಲಿ ಸಿಲುಕಿ ನರಳುತ್ತಿರುವ ಕೆಲವರನ್ನಾದ್ರು ಮರಳಿ ನಮ್ಮ ಭವ್ಯ -ದಿವ್ಯ ಸಂಸ್ಕೃತಿಗೆ ಕರೆತರುವದು, ಒಂದೆ ಬಾರಿಗೆ ಎಲ್ಲವನ್ನು ಸರಿಮಾಡಲು ಯಾರು ಮಹಾನ್ ವ್ಯಕ್ತಿಯೋ, ಅಥವಾ ಮಹಿಮಾ ಪುರುಷರು  ಅಲ್ಲ. ಆದ್ದರಿಂದ ಅದಕ್ಕೆ ಭಾರತಮಾತೆಯ ಧೀರಕುವರರ ಅತ್ಯಾವಶ್ಯಕತೆಯಿದೆ ತಾವೆಲ್ಲರು ಕೂಡ ನನ್ನಿ ಆಶಯಕ್ಕೆ, ಸರ್ವ ಸುಜನರು ಶಕ್ತಿಯುಕ್ತಿಯ ಬಲವು ನೀಡುವರೆನ್ನುವ ಅಪಾರವಾದ ನಂಬಿಕೆಯಿದೆ. 
ಇನ್ನೊಂದು ಸಂಕಲ್ಪವೆಂದ್ರೆ,  ನಮ್ಮ ಕನ್ನಡ ಬಾವುಟ ಸುಟ್ಟುಹಾಕಿದ ಕೆಟ್ಟ ಸಂಘಟನೆಗಳನ್ನ ಕರ್ನಾಟಕದಲ್ಲಿ ನಿಷೇಧಿಸುವ ತನಕ ವಿಶ್ರಮಿಸದಿರುವದು,  ಜನ್ಮಭೂಮಿ ಕರುನಾಡಿನ  ನೆಲ, ಜಲ, ಭಾಷೆಯ ತಂಟೆಗೆ ಬಂದವರಿಗೆ ತಕ್ಕ ಪಾಠವನ್ನು ಕಲಿಸುವದು ಕಳೆದ ವರ್ಷ ಘಟಿಸಿದ ಕರಾಳ ಘಟನೆ ಮರುಕಳಿಸದಂತೆ ದಿಟ್ಟ ಉತ್ತರಕೊಡುವದು.
ಬನ್ನಿರೇಲ್ಲಾ ಕನ್ನಡಿಗರೇ, ಭರತ ಭುವಿಯ ಕುಡಿಗಳೇ  ಸಾಮರಸ್ಯದ ಕನ್ನಡನಾಡು, ನವ್ಯ ದಿವ್ಯ ಭವ್ಯಸಮೃದ್ಧಿಯ ಭಾರತ ಕಟ್ಟೋಣ ವಿಷಜಂತುಗಳನ್ನ 
ಚಟ್ಟಕ್ಕೆ ಅಟ್ಟೋಣ... ಜೈ ಹಿಂದ್ ಜೈ ಕರ್ನಾಟಕ... 
✍ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...