ಶನಿವಾರ, ಜನವರಿ 8, 2022

ಕೊರೋನಾ ಕಿತಾಪತಿ (ಕವಿತೆ) - ಹನುಮಂತ ದಾಸರ ಹೊಗರನಾಳ

ಎಲ್ಲಿ ಕುಳಿತಾದೋ ಸರ್ಕಾರ
ಏನು ನಡಿಸ್ಯಾರೋ ರಾಜಕಾರಣಿಗಳು ದರ್ಬಾರ
ಮತ್ತೇ ಶುರುವಾಯ್ತೋ ಕೊರೋನಾ ಕಾರ್ಬಾರ
ಮತ್ತೊಬ್ಬ ಸೇರ್ಯಾನೋ ಓಮಿಕ್ರಾನ್ ಎಂಬ ಸರ್ದಾರ....!!

ಸತ್ಯ ಐತೋ ಸುಳ್ಳೈತೋ ನಮಗಂತೂ ಗೊತ್ತಿಲ್ಲ
ಹೋದವರಂತೂ ಕೊರೋನಾದಿಂದ ಸತ್ತಿಲ್ಲ
ಇದ್ದವರಂತೂ ಲಸಿಕೆಗಳಿಂದ ಬದುಕಿಲ್ಲ
ಹಿಂಗ್ಯಾಕ ಅಂತ ನಮಗ್ಯಾರಿಗೂ ತಿಳಿದಿಲ್ಲ....!!

ಬರತೈತೋ ಅಲೆಗಳಾಗಿ ವರ್ಷಕ್ಕೊಮ್ಮೆ ಕೊರೋನಾ
ಅದರಿಂದ ಸಾಗೈತೋ ಸರ್ಕಾರದವರ ಜೀವನ
ಹಗಲಿರುಳು ತಿಂತಾರೋ ಕಡು-ಬಡವರ ಪ್ರಾಣಾನ
ಈ ಕುತಂತ್ರಕ್ಕೆ ಸಿಗುತ್ತಿಲ್ಲ ಯಾವುದೇ ಕಾರಣ....!!

ಕೊರೋನಾ ನೆಪದಾಗ ಏರೈತಿ ಎಲ್ಲಾ ಬೆಲೆ
ಕ್ಷಣಕ್ಷಣಕ್ಕೂ ನಡೆದೈತಿ ಜನಸಾಮಾನ್ಯರ ಕೊಲೆ
ಬದುಕುಳಿಯಲು ಸಿಗುತ್ತಿಲ್ಲ ಬೇರೆಲ್ಲೂ ನೆಲೆ
ಹೆಣೆದು ಎಸೆದಂತಾಗಿದೆ ಸುತ್ತಲೂ ಭಯದ ಬಲೆ.....!!

ನಿರುದ್ಯೋಗ ತೊಲಗೈತೋ ಮಾಸ್ಕ್ ಮಾರಾಟದೊಳಗ
ದೇಶ ಅಭಿವೃದ್ಧಿ ಹೊಂದೈತೋ ಸ್ಯಾನಿಟೈಜರ್ ವಿತರಣೆಯೊಳಗ
ಕೊರೋನಾ ಹೆಚ್ಚಾಗುತ್ತ ಪ್ರತೀ ಶೈಕ್ಷಣಿಕ ವರ್ಷಕ್ಕ
ತಿಂದು-ತೇಗುತೈತಿ ಸರ್ಕಾರ ಸರ್ಕಾರ ಬಡವರಿಟ್ಟ ಬೆವರಿನ ರೊಕ್ಕ......!!
-ಹನುಮಂತ ದಾಸರ ಹೊಗರನಾಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...