ಶನಿವಾರ, ಜನವರಿ 8, 2022

ಗುರು ಮಾತೆ ಸಾವಿತ್ರಿ ಫುಲೆ (ಕವಿತೆ) - ಸಂಜಯ.ಜಿ.ಕುರಣೆ.

ಅಂದು
ತಳಸಮುದಾಯದ 
ಇಡೀ  ಜನಾಂಗವೇ ಶಿಕ್ಷಣದಿ0ದ 
ವ0ಚಿತವಾದ ದಿನಗಳಲ್ಲಿ 

ಶಿಕ್ಷಣವೇ  ಸಂಪತ್ತು
ಪಡೆಯಲೆ ಬೇಕು ಇವತ್ತು 
ಸಂಚಲನ ಮೂಡಿಸಿದ 
ಸಾದ್ವಿ ಸರಸ್ವತಿ 
ಸಾವಿತ್ರಿ ಬಾಯಿ ಪುಲೆ 

ಉಳ್ಳವರ ಸ್ವತ್ತಾದ ಶಿಕ್ಷಣ 
ಎಲ್ಲರ ಹಕ್ಕಾಗಿಸಿದ ಅಕ್ಕ
ಸಾವಿತ್ರಿ ಬಾಯಿ ಪುಲೆ 

ಹೆಣ್ಣುಮಕ್ಕಳಿ0ದ ಬಲುದೂರಾದ. 
ಶಿಕ್ಷಣದ ವ್ಯವಸ್ಥೆಯನ್ನು ಹತ್ತಿರ ತ0ದು 
ಜಾಗ್ರತಿಮೂಡಿಸಿ ಶಿಕ್ಷಣ
ಅ0ಕುರಿಸಿದ ದೇಶದ ಮೊದಲ 
ಶಿಕ್ಷಕಿ
ಸಾವಿತ್ರಿ ಬಾಯಿ ಪುಲೆ 

ಅವರ ಸಮಾಜ ಅವರಿಗಾಗಿ 
ನೀಡಿದ ಹಿಂಸೆ ಸವ್ವಾಲಾಗಿ
ಸ್ವೀಕರಿಸಿದ ದಂಪತಿಗಳು 
ನಾಡಿಗಾಗಿ ನೀಡಿದ ಅವರ 
ಸೇವೆ ಅಮರವಾಯಿತು 
ಸಾಮಾಜೀಕ ಸಮಾನತೆಗಾಗಿ 
ಸಾರ್ವತ್ರಿಕ ಶಿಕ್ಷಣಕಾಗಿ 

ಅಂದು------
ಪ್ರವಾಹದ ವಿರುದ್ಧ 
ಇಜೀ--ಜಯಸಾದಿಸಿದ 
ಪುಲೆ ದಂಪತಿಗಳು. 

ಅಂದು ಆಲೋಚಿಸಿದ ಮಹಾತ್ಮಾ
ಜೋತಿಬಾ ಪುಲೆಯವರ ಶಿಕ್ಷಣದ ಶಕ್ತಿ 
ಇಂದು ಅದುವೇ ಎಲ್ಲರ 
ಭಕ್ತಿ ಯಾಗಿದೆ. 

ಟೀಕೆ ಟಿಪ್ಪಣಿಗಳ 
ಸುರಿ ಮಳೆ ಸುರಿದರೂ
ಗುರಿ ಬಿಡದ 
ಗುರು ವರ್ಯರು 
ಪುಲೆ  ದಂಪತಿಗಳು. 

- ಸಂಜಯ.ಜಿ.ಕುರಣೆ. ಶಿಕ್ಷಕರು,  ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಐನಾಪೂರ. 
ತಾಲೂಕು. ಕಾಗವಾಡ 
ಜಿಲ್ಲಾ. ಬೆಳಗಾವಿ 
ಮೊಬೈಲ್. 9663065992.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...