ಯುಗದ ಕವಿ ಜಗದ ಕವಿ
ವಿಶ್ವ ಮಾನವತೆಯ ರವಿ
ಮಲೆನಾಡ ಮಡಿಲಲ್ಲಿ ಜನನ
ಹಸಿರ ಐಸಿರಿಯ ಪಾವನ
ಕವಿಭಾವ ಉದಿಸಿದ ಚೇತನ
ಕನ್ನಡ ಸೊಗದ ಅನಿಕೇತನ....
ಇಂಗ್ಲೀಷ್ ಕವನಗಳಿಂದ ಪ್ರೇರಣೆ
ಕನ್ನಡ ಸಾಹಿತ್ಯದಲಿ ಸಾಧನೆ
ಅದ್ಭುತ ಬರಹಗಳ ಸರದಾರ
ವಿಶಿಷ್ಟ ಕೃತಿಗಳ ಸೂತ್ರಧಾರ
ಕಾನೂರು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು
ಪಕ್ಷಿಕಾಶಿಯಂತಹ ಪ್ರಕೃತಿ ಕವನಗಳು ....
ಹುಡುಕಿದವು ಹಲವು ಪ್ರಶಸ್ತಿಯ ಗರಿ
ಜ್ಞಾನಪೀಠ ,ಪಂಪದಂತಹ ಪುರಸ್ಕಾರ
ರಾಷ್ಟ್ರಕವಿ ಬಿರುದಿನ ಕಬ್ಬಿಗ
ನೆನಪಿನ ದೋಣಿಯ ಅಂಬಿಗ
ಧರ್ಮದ ಎಲ್ಲೆ ಮೀರಿದ ಕುವೆಂಪು
ಎಲ್ಲೆಡೆ ಪಸರಿಸಿದ ಕನ್ನಡದ ಕಂಪು....
- ಹಂಸರಾಗ ಶೆಟ್ಟಿ ಶಿಕ್ಷಕಿ ಗೋಳಿತೊಟ್ಟು ಕಡಬ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ