ಶನಿವಾರ, ಜನವರಿ 1, 2022

ಹ್ಯಾಪಿ ನ್ಯೂ ಇಯರ್ ೨೦೨೨ (ಲೇಖನ) - ಹನುಮಂತ ರಾಜು ಎನ್

ನಾವು ಕೆಲವೊಮ್ಮೆ ಕೆಲವು ಜಿಜ್ಞಾಸೆಗಳಿಗೆ ಒಳಗಾಗುತ್ತೇವೆ.  ಉದಾಹರಣೆ ಹೊಸವರ್ಷ,  ಏನಿದು ನಾವು ಜಗತ್ತೆಲ್ಲ ಆಚರಿಸುತ್ತಿರುವ ಹೊಸವರ್ಷದೊಂದಿಗೆ ನಮ್ಮ ದಿನವನ್ನು ಪ್ರಾರಂಭಿಸಿ ಖುಷಿಯಾಗಿ ಸಂಭ್ರಮಿಸಬೇಕೋ. ಇಲ್ಲ ನಮ್ಮ ಹಿಂದೂ ಸಂಪ್ರದಾಯದಂತೆ ಯುಗಾದಿಯ ಚಾಂದ್ರಮಾನದ ದಿನ ಬೇವು ಬೆಲ್ಲ ಬೀರಿ  ಮಾರನೇ ದಿನ ಚಂದ್ರನ ನೋಡಿ ಖುಷಿಯಾಗಿ ಹಿರಿಯರ ಆಶೀರ್ವಾದ ಪಡೆದು ಹೊಸ ವರುಷದ ದಿನವನ್ನು ಆಚರಿಸಬೇಕೋ. 

ನಮ್ಮದು ಭಾರತ ಬಹು ಸಂಸ್ಕೃತಿ ಭಾಷೆ ಭೌಗೋಳಿಕವಾಗಿ ಬಹು ದೊಡ್ಡ ವೈವಿಧ್ಯತೆಯಿಂದ ಕೂಡಿದ ದೇಶ. ನಮ್ಮ ದೇಶದ ಆಚಾರ ವಿಚಾರ ಭಾಷೆ ನುಡಿ ನಡೆ ವಸ್ತ್ರ ವೈವಿಧ್ಯ ಪ್ರತಿ 10 ಮೈಲಿ ಅಂತರದಲ್ಲಿ ಬದಲಾಗುತ್ತೆ.  ಆದ್ದರಿಂದ ವ್ಯಾವಹಾರಿಕವಾಗಿ ಎಲ್ಲರಿಗು ಅನುಕೂಲಕರವಾದ ಇಂಗ್ಲಿಷ್ ಕ್ಯಾಲೆಂಡರನ್ನು ನಮ್ಮ ದೈನಂದಿನ ವ್ಯವಹಾರಗಳಿಗೆ ನಾವು ಬಳಸುತ್ತೇವೆ. ಇದರಿಂದ ಪ್ರಪಂಚದಲ್ಲಿ ಎಲ್ಲರೊಂದಿಗೆ ಸಂವಹಿಸಲು ಸಹಕಾರಿಯಾಗಿದೆ.
ಹಾಗೇ ಯುಗಾದಿಯಂದು ನಮ್ಮ ನಿಜವಾದ ಹೊಸ ವರ್ಷ ಪ್ರಾರಂಭವಾದರೂ ಅದನ್ನು ಹಬ್ಬವಾಗಿ ಆಚರಿಸಿ ಹೊಸಬಟ್ಟೆ ತೊಟ್ಟು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತೇವೆ. ಸಾಂಸ್ಕೃತಿಕವಾಗಿ ನೋಡುವುದಾದರೆ ನಮ್ಮ ಪಂಚಾಂಗ ಶ್ರವಣ ಪ್ರಾರಂಭವಾಗುವುದೇ ಯುಗಾದಿಯಂದು ಮದುವೆ ಮುಂಜಿಗಳಿಗೆಲ್ಲ ಪಂಚಾಂಗ ನೋಡಿಯೇ ನಿರ್ಧರಿಸುತ್ತೇವೆ.  

ನಮ್ಮದು ವಿವಿಧತೆಯಲ್ಲಿ ಏಕತೆ ಸಾರುವ ನಾಡು.  ಆದ್ದರಿಂದ ಇಂಗ್ಲಿಷ್ ಪಂಚಾಂಗ ವ್ಯವಹಾರಕ್ಕಿರಲಿ ಯುಗಾದಿ ನಮ್ಮ ಧಾರ್ಮಿಕ ಆಚರಣೆಗಳಾದ ಹಬ್ಬ ಹರಿದಿನಗಳು,  ಮದುವೆ ಮುಂಜಿ ಗೃಹಪ್ರವೇಶ ಇತ್ಯಾದಿ ಸ್ವಕಾರ್ಯಗಳನ್ನು ನಡೆಸಲು ನಮ್ಮ ಆಚಾರ ವಿಚಾರಗಳಿಗೆ ಮೀಸಲಾಗಿರಲಿ. 
- ಹನುಮಂತ ರಾಜು ಎನ್,  ನೆಲಗದರನಹಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...