ಶನಿವಾರ, ಜನವರಿ 8, 2022

ಕೋರಿಕೆ (ಕವಿತೆ) - ಮಧುಮಾಲತಿ ರುದ್ರೇಶ್ ಬೇಲೂರು.

ಕೇಳಿ ಮನುಜರೆ ಪ್ರಕೃತಿಯ ಮಡಿಲು ˌˌˌ
ಎಲ್ಲ ಜೀವಿಗಳಿಗೂ ಸಮ ಪ್ರೀತಿಯ ಕಡಲುˌˌˌ

 ಮಂಗನಿಂದಲೇ ಮಾನವನೆಂಬುದ ಮರೆತಿರಾˌˌ
 ಕಾಡ ಕಡಿದು ನಮ್ಮ ನೆಲೆಯ ಕಸಿದಿರಾ?

 ವನದೇವಿಯ ಮಡಿಲಲಿ ಇದ್ದೆವು ಸ್ವೇಚ್ಛೆಯಲಿˌˌ
 ನಾಡಿಗೆ ಬಂದೆವು ಆಹಾರವನ್ನರಸುತಲಿˌˌ

  ನಿಮಗಿಂತ ಕಾಡು ಪ್ರಾಣಿಗಳೇ ಮೇಲೆಂಬುದನರಿತೆವುˌˌ
 ಮಾನವೀಯತೆ ಮರೆತ ಮೃಗಗಳನಿಲ್ಲಿ ಕಂಡೆವುˌˌ

 ಕಾಂಕ್ರೀಟ್ ಕಾಡಿನಲ್ಲಿ ಹೃದಯಶೂನ್ಯರೇ ಇಹರಿಲ್ಲಿˌˌ
 ಕರುಳ ಕುಡಿಯನುಳಿಸಲು ಹೋರಾಡಬೇಕಿದೆಯಿಲ್ಲಿˌˌ

 ನೀರುನೆರಳಿನಾಶ್ರಯ ಕಾಣದೆ ಕಂಗಾಲಾಗಿಹೆವುˌˌ
 ಮರಳದೆ ಮತ್ತೆ ನಮ್ಮ ನಲಿವಿನ ದಿನಗಳವುˌˌˌ

 ಅರಿಯಬೇಕಿದೆ ನೀವು ನಿಸರ್ಗದ ಸತ್ಯವಾˌˌˌ
 ಉಳಿಸಬೇಕಿದೆ ನಾಳೆಗಾಗಿ ಪರಿಸರದ ಧರ್ಮವˌˌˌ
- ಮಧುಮಾಲತಿ ರುದ್ರೇಶ್ ಬೇಲೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...