ಮರೆಯಾದೆಯ ಗೆಳತಿ
ಮರಳಿ ನೋಡುವ ಕಣ್ಣಿಂದ
ಕರಗಿ ಆವಿಯಾದ ಹನಿಯಿಂದ ಜಾರಿ
ನೀ ಮನದಲಿ ಮುತ್ತಾಗಿಹೆ ಗೆಳತಿ
ಕಣ್ಮರೆಯಾದೆಯ ಗೆಳತಿ
ಕಲ್ಲು ಬಂಡೆಯಂತಿದ್ದ ಹೃದಯವನು
ಹದ ಮಾಡಿ ಕಾಣದಾದೆಯ
ನೀ ಮನದಲಿ ಮುತ್ತಾಗಿಹೆ ಗೆಳತಿ
ಮರು ಕಾಣದೆ ಹೋದೆಯ ಗೆಳತಿ
ಕರ ಹಿಡಿದು ನಡೆದ ಕೈಗಳಿಗೆ
ಉತ್ತರಿಸದೆ ಹೋದೆಯಾ
ನೀ ಮನದಲಿ ಮುತ್ತಾಗಿಹೆ ಗೆಳತಿ
ಮನಕೆ ಎಚ್ಚರಿಸದೆ ಹೋದೆಯ ಗೆಳತಿ
ನಿನಗಾಗಿ ಚಡಪಡಿಸುವ ಎದೆಬಡಿತ
ಕೇಳಲಾದರು ಬರಬಾರದೇ ನೀ ಓಡಿ
ನೀ ಮನದಲಿ ಮುತ್ತಾಗಿಹೆ ಗೆಳತಿ
ನಿನ್ನಿಂದ ಜೀವ ತುಂಬಿದ
ಕವನಗಳನ್ನಾದರು ನೋಡಲು
ನೀ ಬರಬಾರದೇ ಗೆಳತಿ
ನೀ ಮನದಲಿ ಮುತ್ತಾಗಿಹೆ ಗೆಳತಿ
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ