ಶನಿವಾರ, ಜನವರಿ 15, 2022

ಅಸೀಮ ದೇಶಭಕ್ತ (ಕವಿತೆ) - ಆಶಾ ಎಲ್.ಎಸ್. ಶಿವಮೊಗ್ಗ.

ವಿಶ್ವನಾಥ ಭುವನೇಶ್ವರಿ ಪುತ್ರ
ನರೇಂದ್ರನಾಥದತ್ತ
ಗುರು ರಾಮಕೃಷ್ಣರಿಂದ ಆದರು
ಸ್ವಾಮಿ ವಿವೇಕಾನಂದ

ಗುರು ರಾಮಕೃಷ್ಣರ ಪ್ರೀತಿಯ ಶಿಷ್ಯ
ದೇವರ ಇರುವಿಕೆಯ ತನ್ನ ಪ್ರಶ್ನೆಗೆ
ಗುರುಪಾದಸ್ಪರ್ಶದಿಂದ ಪಡೆದ ಉತ್ತರವ

ನವಭಾರತ ನಿರ್ಮಾತೃ ನೀವು
ಗುರು ಸಂದೇಶ ಪ್ರಚಾರಕರು
ಭಾರತದ ಏಕತೆಗೆ ಅಡಿಪಾಯ ಹಾಕಿದವರು
ಇಡೀ ವಿಶ್ವಕ್ಕೆ ಪ್ರೇರಕರಾದವರು

ಭಾಷೆ, ಜಾತಿ, ಸಂಪ್ರದಾಯ, ವರ್ಗಗಳ
ಮೀರಿ ನಿಂತವರು
ಭಾರತದ ಸಂಸ್ಕೃತಿ ಪರಂಪರೆಯನ್ನು
ಜಗತ್ತಿಗೆ ಸಾರಿದ ವೀರ ಸನ್ಯಾಸಿ

ನಿಮ್ಮ ಬದುಕಿನ ಶಿಲ್ಪಿ ನೀವಾಗಬೇಕು
ಎಂದು ಯುವಕರಿಗೆ ಕರೆ ಇತ್ತವರು
ಎದ್ದೇಳು, ಎಚ್ಚರಗೊಳ್ಳು, ಗುರಿ ಮುಟ್ಟುವ
ತನಕ ನಿಲ್ಲಬೇಡಿ ನಿಮ್ಮ ಧ್ಯೇಯ ವಾಕ್ಯ

ಸಹೋದರ ಸಹೋದರಿಯರೆ- ಇದು 
ಸಂಚಲನ ಸೃಷ್ಟಿಸಿದ ವಾಣಿ
ದೇಶದ ಜನರ ಅಸಹಕಾರಕೆ ನೊಂದು
ಮರುಗಿ ಧ್ಯಾನಸ್ಥರಾದವರು 
ಅಸೀಮ ದೇಶಭಕ್ತರು, ಸ್ವಾಮಿ ವಿವೇಕಾನಂದರು.
✍️ಆಶಾ ಎಲ್.ಎಸ್. ಶಿವಮೊಗ್ಗ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...