ತ್ರಿವಿಧ ದಾಸೋಹಿ ಕಾಯಕಯೋಗಿ ನೀವು
ಭುವಿಗಿಳಿದ ಶಿವಸ್ವರೂಪಿ ದೈವವೇ ನೀವು
ವಿಶ್ವರತ್ನ ನೀವು ಭಾರತಾಂಬೆಯ ಮುಕುಟವೇ
ವಿಶ್ವಕೇ ಹಬ್ಬಿತು ಕೀರುತಿ ನೀ ಕಳಶವೇ
ಸರ್ವಧರ್ಮಸಮನ್ವಯದ ಹರಿಕಾರನೇ
ಬಸವಣ್ಣನ ಮರು ಜನ್ಮವೇ ನೀ ಸಿದ್ಧಿಪುರುಷನೇ
ಕೋಟಿ ಮಕ್ಕಳ ಬಾಳು ಬೆಳಗಿದ ನಂದಾದೀಪವೇ
ಮೇಟಿ ವಿದ್ಯೆಯನೂ ಅರುಹಿದ ಸದ್ಗುರುವೇ
ಜಾತಿ ˌಧರ್ಮ ˌಲಿಂಗˌ ಭಾಷೆ ಮೀರಿನಿಂತ ಮೇರುವೆ
ಸಿದ್ದಗಂಗಾ ಭಾಸ್ಕರನೇ ನೀ ಜಗದ ಪುಣ್ಯವೇ
ಸರಳ ಸಜ್ಜನಿಕೆಯೊಂದಿಗೆ ವಿದ್ಯಾಸಾಗರವೇ
ಅಕ್ಕರದಿ ಅಕ್ಷರ ಬೀಜ ಬಿತ್ತಿದ ಮಹಾಸಾಧುವೇ
ಅನುಕ್ಷಣ ಶಿವ ಜಪವು ಭಸ್ಮವೇ ಭೂಷಣ
ಅರಸಿಬಂತು ಕೀರುತಿಯ ಮುಕುಟಕೆ ಪದ್ಮಭೂಷಣ
ತಂದೆ-ತಾಯಿ ಗುರು ಎಲ್ಲವೂ ಮೇಳೈಸಿದ ವ್ಯಕ್ತಿತ್ವ
ಜೀವಿಸಿ ತೋರಿದಿರಿ ಕಾಯಕವೇ ಕೈಲಾಸವೆಂಬ ತತ್ವ
ನಿಮ್ಮ ಮಡಿಲಲಿ ನುಡಿ ಕಲಿತವರು ಸಾವಿರಾರು
ಮತ್ತೆ ಭುವಿಯ ಬೆಳಕಾಗಲು ಬಾ ಓ ಸದ್ಗುರು
- ಮಧುಮಾಲತಿ ರುದ್ರೇಶ್ ಬೇಲೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಸೂಪರಾ
ಪ್ರತ್ಯುತ್ತರಅಳಿಸಿ