ನಿನ್ನ ಸನಿಹ ನನ್ನೊಳು ಹರಿದ ಮಿಂಚಿಗೆ ಬೆದರಿದೆ ತಂಬೆಳಕೆ
ನಲ್ಮೆಯ ಬಿಗಿದಪ್ಪಿದ ಆಲಿಂಗನದಲ್ಲಿ ಮುದುರಿದೆ ತಂಬೆಳಕೆ
ಭಾವಾತೀತ ಹೃದಯಗಳ ಮಿಡಿತ ಅರಿತೇವು ಏನೂ
ಒಂದಾದ ಮೃದು ಭಾವ ಭಾವನೆ ಕುದರಿದೆ ತಂಬೆಳಕೆ
ಚಿಗುರೋಡೆದ ಮಧುರ ಪ್ರೇಮ ಸಿಂಚರಿಸಿತು ಸುಗಂಧ
ಹೂಬನದಲ್ಲಿ ಅರಳು ಮಲ್ಲಿಗೆ ಮೋಹ ಕೆದರಿದೆ ತಂಬೆಳಕೆ
ಬಾಗುತ್ತಿವೆ ರೆಪ್ಪೆಗಳು ನಸು ನಾಚಿ ಸಂಜೆಯ ಕಾಂತೆ
ಇರುಳ ಸವಿಗನಸಿಗೆ ಮನ ಅದರಿದೆ ತಂಬೆಳಕೆ
ಹಂಬಲಿಸಿತು ಆಸೆಯ ಅಲೆ ದಡ ಸೇರಲು "ಮಾಜಾ"
ತೆರೆದ ಸಿಂಪಿಗೆ ಸ್ವಾತಿ ಮಳೆ ಹನಿ ಉದುರಿದೆ ತಂಬೆಳಕೆ
- ಮಾಜಾನ್ ಮಸ್ಕಿ
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ