ಗುರುವಾರ, ಜನವರಿ 27, 2022

ಕನವರಿಕೆ (ಕವಿತೆ) - ಶ್ರುತಿ ಚಂದ್ರು, ಕೊಟ್ಟೂರು

ಸೋಲುವ ಪರಿಗೆ ಸುಳಿದಾಡದಿರು ಈ ಕಡೆಗೆ 
ಕುತೂಹಲದ ಕರೆಗೆ 
ಸನಿಹವೂ ಈ ಕರಗಳಿಗೆ ।
     
ಬಿಗಿ ದಿರಿಸು ನಿನ್ನ  ಉಸಿರೊಳಗೆ ಬೆಚ್ಚಗಿರುವೆ
ನಿನ್ನ ಎದೆಯೊಳಗೆ ॥
ನಿನ್ನ ಉಸಿರ ಬೆಸುಗೆ 
ಈ ಹೃದಯಕ್ಕೆ ಹಸಿರೇ ।
ಹಗಲ ಕನಸಿನ ಕರೆಗೆ ಇರುಳೆಲ್ಲ ಕನವರಿಕೆಯ ಜಾಗರಣೆ !

ಸೋತರೂ ಗೆಲುವಿನ ಖುಷಿಗೆ. 
ಕಲ್ಲಿನ ಹೃದಯ ಹೂವಾಗುವ ಕಡೆಗೆ।
ಇದೇನು? ಹೊಸದೊಂದು ಬೆಸುಗೆ
ನನ್ನೊಳಗೆ ಕಸಿಬಿಸಿಯ ಮನವರಿಕೆ  ॥
                   
  -  ಶ್ರುತಿ ಚಂದ್ರು, ಕೊಟ್ಟೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...