ಪ್ರೀತಿಯ ಮೂಲಕ, ಸದಾನುಭೂತಿಯ ಮೂಲಕ ಮಾತ್ರವೇ ಒಳ್ಳೆಯ ಫಲಿತಾಂಶಗಳು ಉಂಟಾಗುತ್ತದೆ. ಪರರ ಸೇವೆಗಾಗಿ ಸರ್ವಸ್ವವನ್ನು ತೊರೆಯುವವನು ಮಾತ್ರ ಮುಕ್ತಿಗೆ ಅರ್ಹ" ಎಂದು ತಿಳಿಸಿದ ನಾಡು ಕಂಡ ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದರು.
ಇವರು ಕಂಡಂತಹ ಒಂದು ಸುಂದರ ಜಗತ್ತೆ "ವೀರ ಭಾರತ"
ಸ್ವಾಮೀಜಿ ಅವರ ಚಿಂತನೆಯಲ್ಲಿ ಭಾರತ ಎಂದರೆ ಅದು
ವಿಶ್ವ ಗುರುವಾಗಬೇಕು ಎಂಬ ಒಂದೇ ಗುರಿ ಇಟ್ಟುಕೊಂಡವರು.
ಅದು ನಮ್ಮ ದೇಶದಲ್ಲಿ ಇರುವ ಯುವ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಸಾರಿ ಹೇಳಿದವರು ಸ್ವಾಮಿವಿವೇಕಾನಂದರು.
1863 ಜನವರಿ 12ರಂದು ಕಲ್ಕತ್ತಾ ನಗರದಲ್ಲಿ ಜನಿಸಿದ ವಿಶ್ವೇಶ್ವರ ನಿಂದ ನರೇಂದ್ರನಾಥ ನಿಂದ ಸ್ವಾಮಿ ವಿವೇಕಾನಂದರಾಗಿ ಭಾರತವನ್ನು ಸಂಪೂರ್ಣವಾಗಿ ಪರ್ಯಟನೆಯನ್ನು ಮಾಡಿ ಡಿಸೆಂಬರ್ 25 ರಂದು ಕನ್ಯಾಕುಮಾರಿಯ ಬಂಡೆಯ ಮೇಲೆ 3 ದಿನ ಧ್ಯಾನ ಮಾಡಿದಾಗ ಅವರಿಗೆ ತಮ್ಮ ಜೀವನದ ಗುರಿ ಸ್ಪಷ್ಟವಾಯಿತು.
ನಂತರ ಅವರು ನನ್ನ ಭಾರತ ವಿಶ್ವಗುರು ಸ್ಥಾನವನ್ನು ಅಲಂಕರಿಸಬೇಕು. ಅದು ಎಲ್ಲ ರಾಷ್ಟ್ರಗಳಿಗೆ ಗುರು ಭಾರತವಾಗಿರಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು.
ಸ್ವಾಮೀಜಿಯ
ವೀರ ಭಾರತ ಎಂದರೆ,
* ರಾಷ್ಟ್ರದ ಕೆಲಸಕ್ಕೆ ಎಲ್ಲಾ ಯುವಕರು ಕೈಜೋಡಿಸಬೇಕು.
* ದೇಶದ ಎಲ್ಲಾ ಪ್ರಜೆಗಳು ಅಕ್ಷರಸ್ಥ ರಾಗಿರಬೇಕು.
*ಭಾರತ ದೇಶದ ಎಲ್ಲ ನಾಗರಿಕರು ಬಡತನದಿಂದ ನಿರ್ಮೂಲನೆ ಹೊಂದಬೇಕು.
*ಯಾರು ಹಸಿವಿನಿಂದ ಬಳಲಿ ಸಾಯಬಾರದು.
*ಎಲ್ಲರೂ ತಮ್ಮ ಜೀವನದಲ್ಲಿ ಧರ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು.
* ಗುರು ಹಿರಿಯರಿಗೆ ಗೌರವ ಕೊಡಬೇಕು.
*ಶಾಂತಿಯ ಸೌಹಾರ್ದತೆಯನ್ನು ಎತ್ತಿಹಿಡಿಯಬೇಕು.
* ಮೂಢನಂಬಿಕೆಯನ್ನು ಹೋಗಲಾಡಿಸಬೇಕು ಇವೆಲ್ಲವೂ ಯುವಶಕ್ತಿಗೆ ಮಾತ್ರ ಸಾಧ್ಯ ಎನ್ನುವ ನಂಬಿಕೆ ಇಟ್ಟವರು ಸ್ವಾಮೀಜಿಯವರು.
ಪ್ರಸ್ತುತ ಸ್ವಾಮೀಜಿಯವರ ವೀರ ಭಾರತ ನಮ್ಮ ಕಣ್ಣಮುಂದೆ ಕಾಣಬೇಕಾದರೆ,
*ಯುವಕರಿಗೆ ಸ್ವಾಮೀಜಿಯ ಜೀವನ ಆಧಾರಿತ ಚಲನ ಚಿತ್ರಗಳನ್ನು ತೋರಿಸುವ ಮೂಲಕ.
*ಸ್ವಾಮೀಜಿಯವರ ದಿವ್ಯ ವಾಣಿಯ ಅರ್ಥ ಮಾಡಿಸುವುದರ ಮೂಲಕ.
*ಮಕ್ಕಳಿಗೆ ಮತ್ತು ಯುವಕರಿಗೆ ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಆಧಾರಿತ ಪಠ್ಯಪುಸ್ತಕಗಳನ್ನು ಇಡುವ ಮೂಲಕ.
*ಸ್ವಾಮೀಜಿಯವರ ಇಂಚು ಇಂಚು ಜೀವನಾಧಾರಿತ ಶಾರ್ಟ್ ಯೂಟ್ಯೂಬ್ ವಿಡಿಯೋಗಳು ಅಥವಾ ಚಲನ ಚಿತ್ರಗಳನ್ನು ಮಾಡುವ ಮೂಲಕ.
*ವಿವೇಕಾನಂದರವರ ವಾಣಿ ಗಳನ್ನು ವಾಟ್ಸಪ್ ಸ್ಟೇಟಸ್( WhatsApp status) ಮೂಲಕ.
*ಸ್ವಾಮೀಜಿಯವರ ಧ್ಯೇಯವಾಕ್ಯವನ್ನು ಟಿಕ್ ಟಾಕ್( Tik Tok) ಮಾಡುವುದರ ಮೂಲಕ.
*ವಿವೇಕಮಾಲೆ ಆಚರಿಸುವುದರ ಮೂಲಕ.
* ಸ್ವಾಮೀಜಿಯವರ ಜೀವನ ಘಟನೆಗಳ ಆಧಾರಿತ ನಾಟಕ ಪ್ರದರ್ಶನ ಮಾಡುವುದರ ಮೂಲಕ.
*ವಿವೇಕ ಬ್ಯಾಂಡ್ ,ವಿವೇಕಾ ಟಿ-ಶರ್ಟ್, ವಿವೇಕ ಮೊಬೈಲ್ ಪೌಚ್, ವಿವೇಕ ಸ್ಟೇಟಸ್ ವಿಡಿಯೋ,
ವಿವೇಕ ಸೈಕಲ್, ವಿವೇಕ ಬೈಕ್, ವಿವೇಕ ಕಾರ್, ವಿವೇಕ ಮೊಬೈಲ್, ಇತ್ಯಾದಿ ಹೊಸ ಆವಿಷ್ಕಾರ (Trend) ಮಾಡುವ ಮೂಲಕ.
ಇದಷ್ಟೇ ಅಲ್ಲದೆ ಈಗಿನ ಯುವಕರು ರಾಷ್ಟ್ರದಲ್ಲಿ ಇರುವಂತಹ ಸಂವಿಧಾನದ ನಾಲ್ಕು ಆಧಾರ ಸ್ತಂಭಗಳು ಎಂದು ಕರೆಯಲ್ಪಡುವ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಮತ್ತು ಮಾಧ್ಯಮ, ಇವುಗಳಲ್ಲಿ ಯುವಕರು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಂಡಿದ್ದೆ ಆದರೆ ಅಂದರೆ ಈ ಎಲ್ಲಾ ಆಧಾರ ಸ್ತಂಭಗಳ ಹುದ್ದೆಗಳಲ್ಲಿ ಯುವಕರು ಬಂದರೆ ಆಗ,
ಸ್ವಾಮೀಜಿ ಕಂಡಂತಹ ವೀರ ಭಾರತ ವನ್ನು ನಾವು ಮುಟ್ಟಲಿಕ್ಕೆ ಸಾಧ್ಯವಾಗಬಹುದು ಎಂದು ಈ ಮೂಲಕ ನೋಡಬಹುದಾಗಿದೆ.
ಯಾವಾಗಲೂ ಒಳ್ಳೆಯದನ್ನೇ ಮಾಡಿ, ನಿರಂತರವಾಗಿ ವಿಚಾರವನ್ನೇ ಆಲೋಚಿಸಿ,ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದೇ ಮಾರ್ಗ. ಎಂದು ಸ್ವಾಮಿ ವಿವೇಕಾನಂದರು ಇಡೀ ವಿಶ್ವಕ್ಕೆ ಧರ್ಮ-ಸಂಸ್ಕೃತಿ ರಾಷ್ಟ್ರವೇ ನಮ್ಮೆಲ್ಲರ ದೈವ ಎಂದು ಪ್ರಸ್ತುತ ಜಗತ್ತಿಗೆ ಅನ್ವಯವಾಗುವಂತೆ ತೋರಿಸಿಕೊಟ್ಟವರು ನಮ್ಮ ಸ್ವಾಮೀಜಿ.
- ಯ.ಬ.ದ.ಕ
(ಯಳನಾಡು ಬಡಗಿ ದಾಸಪ್ಪನ ಮಗ ಕರಿಯಣ್ಣ)
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ