ಹರಿದ ಬಟ್ಟೆ ತೊಟ್ಟುಕೊಂಡು
ಕೆಸರಲಿ ಕೊಳಕು ಮಾಡಿಕೊಂಡು
ಜಗಕೆ ಅನ್ನ ನೀಡಿದವರು
ಹಸಿದ ಹೊಟ್ಟೇಲಿ ಮಲಗಿದವರು
ನಾವೇ ಬೆಳೆದ ಧಾನ್ಯಗಳನ್ನು
ಖರೀದಿಸಲಾಗದೇ ಇದ್ದವರು
ಸಾಲ-ಶೂಲ ಮಾಡಿಕೊಂಡು
ನಿಮಗೆ ಅನ್ನ ನೀಡಿದವರು
ದೇಹ ದಂಡಿಸಿ ಪ್ರಾಣಿಗಳಂತೆ
ಹಗಲು-ರಾತ್ರಿ ದುಡಿದವರು
ನಮ್ಮ ಹಕ್ಕು ನಾವು ಕೇಳಿ
ಬೂಟಿಲೇ ಒದೆಸಿಕೊಂಡವರು
ಸರ್ಕಾರಕ್ಕೆ ಬೇಡವಾದಾಗ
ಲಾಟಿ ಏಟು ತಿಂದವರು
ಧನಿಕರ ಧ್ವನಿಗೆ ಮಾತೆತ್ತದೆ
ಮೈಯೊಳಗಿನ ರಕ್ತ ಬಸಿವರು
ಸಾಲಗಾರನ ಅಟ್ಟಹಾಸಕೆ
ಮೆಟ್ಟಿಲಾಗಿ ಬೆಂದು ಬದುಕಿದವರು
ಸಾಲದ ಕಿರುಕುಳ ತಾಳಲಾರದೆ
ನೇಣಿಗೆ ಕೊರಳ ಕೊಟ್ಟವರು
ರೈತರ ಬೆನ್ನೆಲುಬು ಅಂತೀರಿ
ಬೆನ್ನ ಮೇಲೆ ಚಪ್ಪಡಿ ಎಳ್ತೀರಿ
ನಮ್ಮೆದೆಯ ಮೇಲೆ ಕಾಲು ಇಡ್ತೀರಿ
ಜೈ ಕಿಸಾನ್ ಎಂದು ಬೊಬ್ಬೆ ಹೊಡ್ತೀರಿ
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ