ವಿದ್ಯಾರ್ಥಿಗಳಲ್ಲಿ ಹೊಂದಾಣಿಕೆ, ಸಹಕಾರ, ವಿದೇಯತೆ ಮತ್ತು ನಯ ವಿನಯದಿಂದ ನಡೆದು ದೂರದೃಷ್ಟಿಯ ಬದುಕಿನ ಜ್ಞಾನ ಸಂಪಾದನೆಮಾಡುವದು ಇಂದಿನ ಯುಗದ ಶಿಕ್ಷಣದಲ್ಲಿ ಅವಶ್ಯವಿದೆ. ವಿದ್ಯಾರ್ಥಿಗಳ ಮನೋಭಾವ ಶಾಲಾ ಹಂತದ ಸೆಮಿನಾರ್ ನಂತಹ ಚಟುವಟಿಕೆಯಲ್ಲಿ ತೊಡಗುವದರಿಂದ ಸ್ಪರ್ಧಾ ಮನೋಭಾವಕ್ಕೆ ಸ್ಫೂರ್ತಿ ನೀಡಿದಂತಾಗುತ್ತದೆ. ಜಾಗತಿಕರಣದ ಸವಾಲು ಎದುರಿಸಲು ಇಂಗ್ಲೀಷ ಜ್ಞಾನ ಅತೀ ಅವಶ್ಯವಾಗಿದೆ. ಅದರಲ್ಲೂ ಪ್ರೌಢ ಶಾಲಾ ಹಂತದಲ್ಲಿ ಸೆಮಿನಾರ್ ಪದ್ಧತಿ ಅಳವಡಿಕೆ ಮಾಡಿಕೊಳ್ಳುವದರಿಂದ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಕಲಿಕೆಗೆ ಪುಷ್ಠಿ ನೀಡಿದಂತಾಗುತ್ತದೆ ಅಂತಹದೊಂದು ಪ್ರಯತ್ನ ವಿಜಯಪುರ ಜಿಲ್ಲೆಯಲ್ಲಿ ಮೊಟ್ಟಮೋದಲಬಾರಿಗೆ ಮೋರಟಗಿಯ ಕಲ್ಪವೃಕ್ಷ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀ ರಾಘವೇಂದ್ರ ಚೌಧರಿ ಇವರು ಸೆಮಿನಾರ್ ಅಳವಡಿಕೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದ್ದಾರೆ.
ಶಾಲಾ ಹಂತದ ಇಂಗ್ಲೀಷ ಸೆಮಿನಾರ್ ಮಹತ್ವದ ರೂಪ ಪಡೆದು ವಿವಿಧ ಶಾಲೆಗಳಿಗೆ ಮಾದರಿಯಾಗಿ ಹೊರಹೋಮ್ಮಿದೆ. ಪ್ರಯತ್ನಕ್ಕೆ ತಕ್ಕ ಪ್ರತಿಫಲದಂತೆ ಬೆಳದಿಂಗಳು ಸಾಂಸ್ಕೃತಿಕ ಸಮಿತಿಯು ವಿದ್ಯಾರ್ಥಿಗಳ ಸೆಮಿನಾರ್ ಗೆ ಬೆಳದಿಂಗಳ ಜ್ಞಾನ ದೀವಿಗೆ ರಾಜ್ಯ ಪುರಸ್ಕಾರ ನೀಡುತ್ತಿರುವದು ಜ್ಞಾನದ ಬೆಳಕಿಗೆ ಹೊಸ ಮುನ್ನುಡಿ ಬರೆದಂತೆ.
ನಿರಂತರ ಶ್ರದ್ದೆ, ಭಕ್ತಿ ಮತ್ತು ಪ್ರಾಮಾಣಿಕತೆ ಇವು ಯಶಸ್ಸಿನ ಮೂಲ ಎಂಬ ಸ್ವಾಮಿ ವಿವೇಕಾನಂದರ ನುಡಿಯು ಇಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಕಾರಣ ಶ್ರದ್ದೆಗೆ ಪ್ರತಿಫಲ ದೊರೆಯುವದು ಎನ್ನುವದಕ್ಕೆ ಈ ಸೆಮಿನಾರ್ ಪದ್ಧತಿ ಮಾದರಿಯಾಗಿದೆ. ತಂದೆ ತಾಯಿಗೆ ಊರುಗೋಲಾಗುವ ಮಕ್ಕಳಿಗೆ ಜ್ಞಾನದಾಹವಿರಬೇಕು ಅಂದಾಗಲೇ ಸಾಧನೆಗೆ ದಾಪುಗಾಲು ಇಟ್ಟಂತೆ.ಬೆಳಗುವ ದೀಪದಂತೆ ಜ್ಞಾನ ಬೆಳಗಬೇಕಾಗಿದೆ ಅಂತಹ ಬೆಳಕನ್ನು ವಿದ್ಯಾರ್ಥಿಗಳು ಕಾಣಬೇಕಾದರೆ ಸ್ಪರ್ಧಾ ಮನೋಭಾವ ಶಾಲಾ ಹಂತದಲ್ಲೇ ಬೆಳೆಯಬೇಕು ಅಂತಹ ಪ್ರಯತ್ನ ಆದಾಗ ಮಾತ್ರ ಮಕ್ಕಳ ಜ್ಞಾನ ಬೆಳದಿಂಗಳಂತೆ ಮೂಡಿಬರುವದು. ಸಾಧನೆಗೆ ಪೂರಕವಾಗುವ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ. ಅಲ್ಲದೆ ಪ್ರಾಜೆಕ್ಟ್ ನಂತಹ ಚಟುವಟಿಕೆಗಳೂ ಕೂಡ ಜ್ಞಾನ ವೃದ್ಧಿಸುವಲ್ಲಿ ಸಹಕರಿಯಾಗಿದೆ. ಪ್ರೌಢ ಶಾಲಾ ಹಂತದಲ್ಲಿ ಸ್ಪರ್ಧಾ ಮನೋಭಾವ ಬೆಳೆದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಸ್ಪರ್ಧಾ ಲೋಕದಲ್ಲಿ ವಿದ್ಯಾರ್ಥಿಗಳು ಯಶಸ್ಸಿನ ಹಾದಿ ಕಂಡುಕೊಳ್ಳುತ್ತಾರೆ ಎಂಬ ಮಹತ್ವದ ವಿಚಾರಗಳನ್ನು ಅರಿತ- ಎಚ್. ಎಸ್. ಧೂಳಬಾ ಇವರು ತೆಗೆದುಕೊಂಡ ನಿರ್ಧಾರಗಳು ಮತ್ತೊಂದು ಶಾಲೆಗೆ ಮಾದರಿಯಾಗಿವೆ.
ಜ್ಞಾನ ದೀವಿಗೆ ಬೆಳಗಿದ ಸಂಸ್ಥಾಪಕರು :
ಕಲ್ಪವೃಕ್ಷದ ಸಂಸ್ಥಾಪಕರಾದ ಶ್ರೀ ಎಸ್. ವ್ಹಿ. ಬಿರಾದಾರ್ ಇವರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಮಕ್ಕಳ ಸಾಧನೆಗೆ ಸ್ಫೂರ್ತಿ ನೀಡುವದರ ಮೂಲಕ ಜ್ಞಾನ ದೀವಿಗೆ ಬೆಳಗುತ್ತಿದ್ದಾರೆ.
"ಪ್ರಯತ್ನಕ್ಕೆ ಸಂದ ಗೌರವ" : ಕಲ್ಪವೃಕ್ಷ
ಸಂಸ್ಥೆಯ ಎಚ್. ಎಸ್. ಧೂಳಬಾ ಇವರ ಮಾರ್ಗದರ್ಶನದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮೊಟ್ಟಮೊದಲಬಾರಿಗೆ ಪ್ರೌಢ ಶಾಲಾ ಹಂತದಲ್ಲಿ ಸೆಮಿನಾರ್ ಪದ್ಧತಿ ಅಳವಡಿಕೆ ಮಾಡಿದ ಶಾಲೆಯ ಮುಖ್ಯಗುರುಗಳಾದ ಶ್ರೀ ರಾಘವೇಂದ್ರ ಚೌಧರಿ ಇವರಿಗೆ ಬೆಳದಿಂಗಳು ಸಂಸ್ಕೃತಿ ಸಮೀತಿಯಿಂದ ಗೌರವಿಸಲಾಯಿತು.
"ಸೆಮಿನಾರ್ ಗೆ ಮಾರ್ಗದರ್ಶನ "
ವಿದ್ಯಾರ್ಥಿಗಳಿಗೆ ಸೆಮಿನಾರ್ ಮಾರ್ಗದರ್ಶನ ಅತೀ ಅವಶ್ಯ. ವಿಷದ ಶಿಕ್ಷಕರಿಂದ ಸೆಮಿನಾರ್ ರೂಪರೇಷಗಳು, ಮತ್ತೊಬ್ಬರಿಗೆ ಮಾದರಿಯಾಗುವಂತೆ ವಿದ್ಯಾರ್ಥಿಗಳ ವಿವರಣೆ ಶೈಲಿ ಹೇಗಿರಬೇಕು ಎಂಬುದನ್ನು ವಿಷಯದ ಶಿಕ್ಷಕರು ನಿರ್ವಹಿಸಬೇಕಾಗುತ್ತದೆ ಅಂತಹ ಮಾರ್ಗದರ್ಶನವನ್ನು ಇಂಗ್ಲೀಷ ಶಿಕ್ಷಕರಾದ ಮಂಜುನಾಥ ಹಿರೇಮಠ ಚಾಮನಾಳ ನಿರ್ವಹಿಸಿರುವದು ಶ್ಲಾಘನೀಯ
"ಬೆಳದಿಂಗಳ ಜ್ಞಾನ ದೀವಿಗೆ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳು "- ಕಲ್ಪವೃಕ್ಷದ 9 ನೇ ತರಗತಿ ವಿದ್ಯಾರ್ಥಿಗಳಾದ ಕುಮಾರಿ ಶ್ವೇತಾ ಬಿರಾದಾರ್, ರೇಣುಕಾ ರೊಟ್ಟಿ, ಪ್ರೀಯಾಂಕಾ ತಾಂಬೆ, ಪರ್ವೀನ್ ವಾಲಿಕಾರ,ರಕ್ಷಿತಾ ಬಿರಾದಾರ್, ಅಂಜಲಿ ಚೌಧರಿ ಮತ್ತು ದರ್ಶನ್ ಅಂಗಡಿ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿರುವದು ಹೆಮ್ಮೆಯ ಸಂಗತಿ.
ಗಮನಸೆಳೆದ ಅಂಜಲಿ ಚೌಧರಿ ಸೆಮಿನಾರ್ : ಇಂಗ್ಲೀಷ ವಿಷಯದ ಸೆಮಿನಾರ್ ಶಾಲಾ ಹಂತದಲ್ಲಿ ಮಹತ್ವದ ರೂಪ ಪಡೆದು ವಿಜಯಪುರ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ. 9 ನೇ ತರಗತಿಯ ಕುಮಾರಿ ಅಂಜಲಿ ಚೌಧರಿ ಸೆಮಿನಾರ್ ಗಮನಸೆಳೆದಿರುವದು ಜ್ಞಾನ ದೀವಿಗೆಗೆ ಬೆಳಕು ನೀಡಿದಂತಾಗಿದೆ.
- ಮಂಜುನಾಥ ಹಿರೇಮಠ ದಂಡಸೋಲಾಪುರ - (ಚಾಮನಾಳ) ಯುವ ಸಾಹಿತಿಗಳು ಮತ್ತು ಶಿಕ್ಷಕರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ