ಸಿರಿತನದಿ ಹುಟ್ಟಿದರು
ಬಡತನದ ಬೇಗೆಯ ಕಣ್ಣಾರೆ ಕಂಡವಳು
ವಿದ್ಯೆಯ ಬೆನ್ನಟ್ಟದಿದ್ದರು
ಜೀವನದ ಬೆನ್ನಟ್ಟಿದವಳು
ಮಮತೆಯ ವಾತ್ಸಲ್ಯ ದೊರೆಯದಿದ್ದರೂ
ಪ್ರೀತಿಯ ಹಂಚುಂಡಿ ಬೆಳೆದವಳು
ಹಣ ಸಂಪತ್ತಿಗೆ ಬೆಲೆ ಕೊಡದವಳು
ಪ್ರೀತಿ ಗುಣಕ್ಕಾಗಿ ಬೆಲೆ ಕೊಟ್ಟವಳು//
ಬಂದುಗಳೆಲ್ಲ ಕೈ ಚೆಲ್ಲಿ ನಿಂತಾಗ
ಮನ ಗುಂದದೆ ಮುನ್ನಡೆದವಳು
ಚೊಚ್ಚಲ ಹೆರಿಗೆಯ ಮಾಹಾದಾಷೆಯಲ್ಲಿ
ಜೀವನ್ಮರಣದಲ್ಲಿ ಹೋರಾಡಿ ಬಂದವಳು
ಬಡತನ ವೆಂದು ಹೆದರದೆ
ತಾನೊಂದು ನೆಲೆಯಾಗಿ ನಿಂತವಳು
ನಂಬಿಕೆಯ ಮಾತಿಗೆ ಮರುಳಾಗಿ
ಸಂಬಂಧದೊಳು ದೃಢವಾಗಿ ನಿಂತವಳು//
ಚುಚ್ಚು ಮಾತುಗಳ ಸಹಿಸಿ
ಹಟ್ಟಹಾಸದಿ ಮೆರೆದವರ ಮುಂದೆ
ಸಹನೆಯ ಮೂರ್ತಿಯಂತೆ ಇದ್ದವಳು
ತನ್ನ ಮಕ್ಕಳ ಭವಿಷ್ಯಕ್ಕಾಗಿ
ಪರಪ ಮನೆಯ ಕಸಮುಸುರೆ ತಿಕ್ಕಿದವಳು//
ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮಹದಾಷೆ ಹೊತ್ತು ಮುನ್ನಡೆಯುತ್ತಿದ್ದಳು
ಹೀನಾಯವಾಗಿ ಕಂಡು ಅವಮಾನಿಸಿದವರ ಮುಂದೆ
ಹಠ ಛಲದಿಂದ ಬದುಕಿದವಳು
ಎಸ್ಟೇ ಸಂಕಷ್ಟವಿದ್ದರು ಕೈ ಚಾಚದೆ
ದುಡಿದು ಪರಿಶ್ರಮದಿ ಮುಂದೆ ಬಂದವಳು//
ಯಶಸ್ಸಿನ ಮೆಟ್ಟಿಲುಗಳನ್ನು ಮೆಟ್ಟಿ ನಿಂತು
ಕನಸಿನ ಗೋಪುರವ ಕಟ್ಟಲು ಮುಂದಾದವಳು
ಎಲ್ಲವನ್ನೂ ಸಹಿಸದ ಜನರೊಳು
ಕಾಣದ ದೇವರು ಸಹಿಸದಾದನು
ಕೊನೆಗೂ ಕಣ್ಮರೆಯಾಯಿತು ಇಂದು//
ಜೀವನವನ್ನು ಮೌನದಿಂದಲೆ
ನಿರಂತರ ಹೋರಾಟ ಮಾಡಿದ
ದೃಢದಿ ನಿಂತ ಛಲ ಬಿಡದ ಧೀರ ಮಹಿಳೆ ಇಂದು
ಸಹನೆ ಮೂರ್ತಿಯ ಸಹನೆಯಕ
ಕಟ್ಟೆಯೋಡೆಯದೆ
ಮರೆಯಾಯಿತಿಂದು ಜಗದೊಳು ಶಾಂತಿಯಿಂದಲೇ //
✍️ ಭರತ್ ಕೆ.ಆರ್.
ನೀಲ ರಂಗಸ್ವಾಮಿ.
ಕಾರೇಕೆರೆ ಊರು.
ಹಾಸನ ಜಿಲ್ಲೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Chenagide bro
ಪ್ರತ್ಯುತ್ತರಅಳಿಸಿಅಭಿನಂದನೆಗಳು.... ಶುಭವಾಗಲಿ
ಪ್ರತ್ಯುತ್ತರಅಳಿಸಿSuper bharath
ಪ್ರತ್ಯುತ್ತರಅಳಿಸಿTumba chennagide all the best Bharath, keep writing....
ಪ್ರತ್ಯುತ್ತರಅಳಿಸಿSuper brother but nim kalege bele sigtilvalla ade bejaru
ಪ್ರತ್ಯುತ್ತರಅಳಿಸಿSuper
❤👌💐
ಪ್ರತ್ಯುತ್ತರಅಳಿಸಿನಿಮ್ಮ ವಾಕ್ಚಾತುರ್ಯ ಅಧ್ಬುತವಾಗಿದೆ.
ಪ್ರತ್ಯುತ್ತರಅಳಿಸಿಇಷ್ಟೊಂದು ಚಂದವಾಗಿ ವರ್ಣನೆ ಮಾಡಿದ್ದೀರ
Superrr
ಪ್ರತ್ಯುತ್ತರಅಳಿಸಿSuperb👏
ಪ್ರತ್ಯುತ್ತರಅಳಿಸಿಅದ್ಭತವಾದ ಬರಹ✍🏻
ಪ್ರತ್ಯುತ್ತರಅಳಿಸಿVery precious words are used this Noval
ಪ್ರತ್ಯುತ್ತರಅಳಿಸಿSuper bharath all the best for ur journey ������
“In the middle of difficulty lies opportunity.” — Albert Einstein
ಪ್ರತ್ಯುತ್ತರಅಳಿಸಿKeep rocking 🤩 superb
ಅದ್ಭುತ ಬ್ರೋ... 👌👌👌
ಪ್ರತ್ಯುತ್ತರಅಳಿಸಿ