ಎಂದಿಗೂ ಇರುವೆ ಹೀಗೆ
ಬಿಡದೆ ನಿನ್ನಯ ಕರವನು
ಪಿಡಿದು ನಡೆಯುವೆ ಜೊತೆಗೆ
ಬಿಡದಿರು ಕೊನೆವರೆಗೆ
ನೋವಿನಲಿ ನಲಿವಿನಲಿ
ಸ್ನೇಹದಿ ಬಂಧಿಯಾಗಿರಲಿ
ಮುನಿಸು ಜಗಳ ಇರಲಿ
ಹಿತಮಿತವಾಗಿ ಬಾಳಲಿ
ಬಣ್ಣ ಬಣ್ಣದ ಚೆಂದದ ಮಣಿಗಳ
ಬಳೆಗಳ ಧರಿಸಿಹ ಕರಗಳು
ಬಿಗಿಯಾಗಿ ಹಿಡಿದಿಹ ಸುಂದರ
ಕರಗಳಲಿ ತುಂಬಿದೆ ಭರವಸೆಯು
ಹಸಿರ ಮಡಿಲಲಿ ಜೊತೆಯಾಗಿ
ಸಾಗುತಲಿ ಇರುವಾಗ ಹಿತವಾಗಿ
ನಿರಾಳವಾಗಿಹುದು ಮನಕೆ
ಪ್ರಕೃತಿಯು ಸಾಕ್ಷಿಯಾಗಿಹುದು ಸ್ನೇಹಕೆ I
ಭರವಸೆಯ ಬೆಳಕಲ್ಲಿ ಜೀವನ ಸಾಗಲಿ
ಶುದ್ಧ ಸ್ನೇಹಕೆ ಎಂದೂ ಚ್ಯುತಿ ಬಾರದಿರಲಿ
ಮುನಿಸು ಪ್ರೀತಿ ಬೆರೆತ ಸ್ನೇಹ ಜೊತೆಯಾಗಿರಲಿ
ಯಾರ ದೃಷ್ಟಿಯೂ ಬೀಳದಿರಲಿ
- ಆಶಾ ಎಲ್. ಎಸ್., ಶಿವಮೊಗ್ಗ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ