ತಾಯಿಯ ಮಡಿಲಲ್ಲಿ ಮಲಗಿ ತಿಂದ ಅನ್ನದ ತುತ್ತು
ತಂದೆಯ ತೋಳುಗಳು ಬಾಚಿ ತಬ್ಬಿದ ಆ ಕ್ಷಣದ ಹೊತ್ತು
ಇವರಿಬ್ಬರು ಧರೆಯಲಿ ಕಲ್ಪನೆಗೆ ನಿಲುಕದ ಸಂಪತ್ತು
ಎಂದಿಗೂ ಮರೆಯದಿರಿ ತಂದೆ ತಾಯಿಗಳ ಋಣವನು ಯಾವತ್ತು
ನವಮಾಸದಲಿ ಹೆತ್ತ ತಾಯಿಯ ಒಡಲು
ಮಮತೆ ತುಂಬಿದ ಆ ಪ್ರೇಮದ ಕಡಲು
ಅಪ್ಪನಬೆರಳು ಹಿಡಿದು ನಡೆದ ದಿನಗಳ ನೆನೆಯಲು
ಈಗ ಜೀವನದ ದಾರಿಯ ಇಡಿದು ಹೊರಟಿರುವೆ ಬದುಕನು ಸಾಧಿಸಲು
- ಕಿರಣ್ ಜಿ, ರಾಮನಗರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ