ಏಸೋ ಜನ್ಮ ತಿರುಗಾಡಿ ಬಂದಿ ನೀನು ಮಾನವ ಜನ್ಮಕ್ಕ
ಮರ್ತ್ಯಕ್ಕ ಬಂದು ಮರೆತ ಕುಂತಿದಿ ತಿಳಿವಲ್ದು ನಿನ್ನ ಮನಕ
ಅರವ ತಪ್ಪಿ ತಿರುಗ ಬ್ಯಾಡ ನೀ ಆಗುತೀದಿ ಹುಚ್ಚು ಬುರುಕ
ಗಳಿಸಿ ಕೂಡಿ ಇಡಬ್ಯಾಡ ತಮ್ಮ ಮನೆಯಾಗ ನಿಟ್ಟ
ನೀನು ಹೋಗುವಾಗ ಬರುವುದಿಲ್ಲ ನಿನ್ನಿಂದ ಒಟ್ಟ
ಇರೋತನಕ ಚೆನ್ನಾಗಿ ಆರೋಗ್ಯ ನೋಡಿಕೋರು ಗುಟ್ಟ
ಹಾಳು ಪಾಳು ತಿಂದು ಹೊಟ್ಟಿ ಕೆಟ್ಟು ನಡೆದರೆ ಎಡವಟ್ಟ
ಸಕಲ ಜೀವಿಗಳಲ್ಲೇ ಮಾನವ ಆಗ್ಯಾನ ಶ್ರೇಷ್ಠ
ಇವನಿಂದಾಗದ ಕೆಲಸ ಭೂಮ್ಯಾಗ ಯಾವುದಿಲ್ಲೊಟ್ಟ
ನಿನ್ನೊಂದಿಗೆ ಇರುವವರನ್ನು ಕಾಣಬೇಡ ಕನಿಷ್ಠ
ನಿನ್ನೊಳಗಿರುವ ಭೂತಗಳನ್ನು ತೊಲಗಿಸೋವೊಷ್ಟ
ನೀನು ಮಾಡುವ ಕಾರ್ಯ ಕಂಡು ಬೆರಗಾಗುವುದು ಜಗವ
ಅದನ್ನು ಕಂಡು ಫಲಿಸಿದ ಮೇಲೆ ಮುಗಿಯುವುದು ತಿರುಗಿ ಕರವ
ಇದರಿಂದ ನಿನ್ನ ಮನಸ್ಸಿಗಾಗುವುದು ಸಂತೋಷವ
ಈ ಸಾಧನೆ ಕಂಡು ಹರುಷದ ಹೊಳೆಯಲ್ಲಿ ಮುಳುಗುವುದು ಕುಟುಂಬವ
ಹುಟ್ಟಿದ ಮೇಲೆ ಸಾಧಿಸಿದರೆ ಸಾವಿಗೆ ಬೆಲೆ
ನೀನು ಬದುಕುವುದಕ್ಕೆ ಇನ್ನೊಬ್ಬರನ್ನು ಮಾಡದಿರು ಕೊಲೆ
ಬೆಲೆ ಸಿಕ್ಕಾಗ ನಿನಗೆ ಸಿಗುವುದು ನಿಶ್ಚಿಂತಿಯ ನೆಲೆ
ಅನ್ಯರಿಗೆ ಪ್ರೀತಿಯ ತೋರಿದರೆ ದೇವರ ಆಶೀರ್ವಾದ ನಿನ್ನ ಮೇಲೆ.
- ಬಿ. ಹೆಚ್. ತಿಮ್ಮಣ್ಣ.
Superb Timma
ಪ್ರತ್ಯುತ್ತರಅಳಿಸಿ