ಗುರುವಾರ, ಮಾರ್ಚ್ 2, 2023

ಕನ್ನಡದ ಕಂದ (ಕವಿತೆ) - ಶಾರದ ದೇವರಾಜ್ . ಎ ಮಲ್ಲಾಪುರ.

ಬಂದ ಬಂದ ಕನ್ನಡದ ಕಂದ
 ಕನ್ನಡದ ಪ್ರೀತಿಯ ಸವಿಯುತ ನಿಂದ 
ಕನ್ನಡಕ್ಕೆ ಇವನೇ ಮಹಾದಾನಂದ
 ಕನ್ನಡ ನುಡಿಯ ನುಡಿಸುತನಿಂದl

 ಕನ್ನಡಕ್ಕಾಗಿ ಹುಟ್ಟಿದ ಪ್ರೇಮಮಯಿ 
ಕನ್ನಡಕ್ಕಾಗಿ ಬಾಳಿದ ತ್ಯಾಗಮಯಿ
 ಕನ್ನಡತನವ ಎಲ್ಲೆಡೆ  ಹರಳಿಸಿದ ಅಮೃತಮಯಿ ಕನ್ನಡದ  ಕಂಪನು ಬೀರಿದ ಕರುಣಾಮಯಿl

 lಬಂದ ಬಂದ ಕನ್ನಡದ ಕಂದl

 ಕನ್ನಡವೇ ಇವನ ಉಸಿರು
 ಕನ್ನಡವೇ ಇವನ ಹಸಿರು
 ಕನ್ನಡವೇ ಇವನ ಹೆಸರು
 ಕನ್ನಡವೇ ಇವನ ತವರುl

l ಬಂದ ಬಂದ ಕನ್ನಡದ ಕಂದl

 ಕನ್ನಡದ ಕಲೆ ಅರಳಿಸಿ 
ಕಸ್ತೂರಿಯ ಕಂಪನು ಸೂಸಿ 
ಕನ್ನಡದ ನುಡಿಯ ಪೋಷಿಸಿ 
ಕನ್ನಡದ ನಡೆಯ ಘೋಷಿಸಿl

l ಬಂದ ಬಂದ ಕನ್ನಡದ ಕಂದl

 ಕಡೆತನಕ ಕನ್ನಡಕ್ಕಾಗಿ ಬಾಳಿ 
ಇರೋತನಕ ಕನ್ನಡಕ್ಕಾಗಿ ಬಳಲಿ 
ಬರುವ ಜನ್ಮದಲ್ಲಿಯೂ ಕನ್ನಡದಲ್ಲಿ 
ಬರುವೆನೆನುವನು ಜನ್ಮ ತಾಳಿl

l ಬಂದ ಬಂದ ಕನ್ನಡದ ಕಂದl

 ಕನ್ನಡದಿ  ತನುವರಳಿ
 ಕನ್ನಡದಿ ಮನವರಳಿ
 ಕನ್ನಡದ ನುಡಿಯರಲಿ 
ಕನ್ನಡತನ ಎಲ್ಲೆಡೆಯೂ  ಝೆಂಕರಿಸಲಿl

l ಬಂದ ಬಂದ ಕನ್ನಡದ ಕಂದl

 ಕನ್ನಡದ ಗೆಳೆತನಗಳಿಸಿ 
ಕನ್ನಡದ ಬಡತನ ಅಳಿಸಿ
 ಕನ್ನಡದ ಹೊಸತನ ಮೂಡಿಸಿ
 ಕನ್ನಡದ ಶಾಶ್ವತ  ತನ ಬೆಳೆಸಿl

l ಬಂದ ಬಂದ ಕನ್ನಡದ ಕಂದl
-  ಶಾರದ ದೇವರಾಜ್ 
 ಎ  ಮಲ್ಲಾಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...