ರಾಜರಾಳ್ವಿಕೆಯ ಬಂಗಾರ -ಬೆಳ್ಳಿಯ ಸಿಂಹಗಳುಳ್ಳ ಸಿಂಹಾಸನವಲ್ಲವಿದು/
ಮೆತ್ತನೆಯ ತಿರುಗುವ ಸುಖಾಸನಗಳ ಸಿಂಹಾಸನವದು/
ಅಧಿಕಾರದ ಅಂತಸ್ತಿಗೆ ತಕ್ಕಂತೆ ಪ್ಲಾಸ್ಟಿಕ್ಕು, ಕಟ್ಟಿಗೆ, ತಿರುಗುವ ಆಸನ/
ಹೊಣೆಗಾರಿಕೆಯ ನಿಭಾಯಿಸುವ ಯೋಗ್ಯತೆ -ಅಹ೯ತೆ ಇರಲು ಆಗದು ಪ್ರಹಸನ/
ಕುಚಿ೯ಯದು ಹುಡುಗಾಟಿಕೆಯ ಸರಕಲ್ಲ/
ಕುಚಿ೯ಗಾಗಿ ಅಡ್ಡದಾರಿ ಹಿಡಿದರೆ ಪರಿಣಾಮವೂ ಆಡ್ಡಡ್ಡವೇ ಆಗುವದಲ್ಲ/
ಮೆತ್ತನೆಯ ಕುಚಿ೯ಯಡಿ ಕಾಣದ ಮುಳ್ಳುಗಳು/
ಚುಚ್ಚದಂತೆ ನಿವ೯ಹಿಸಬೇಕು ಎಚ್ಚರಿಕೆಯೊಳು/
ಕಾಲೆಳೆಯುವವರು,ಛೂ ಬಿಡುವವರು, ಹಚ್ಚಿಕೊಡುವವರು ಕೆದಕುವವರು /
ಅಧಿಕಾರದ ಕುರ್ಚಿಯದು ಅಗ್ಗಿಷ್ಟಿಕೆಯಂತೆ ಶಮನಿಸುವ ಚಾಣಕ್ಯರು ಬಾಳುವರು/
ಕುಚಿ೯ ಏರುವವನ
ಭಾವ-ಬುದ್ಧಿ ಶುದ್ಧವಿರಲು ಯಶವು ಅವನಿಗೆ/
ಪ್ರಗತಿಯು ದೇಶಕ್ಕೆ; ನೆಮ್ಮದಿಯು ಪ್ರಜಾ ಗಣಕ್ಕೆ/
ಕುಚಿ೯ಗಾಗಿ ನಡೆಯುತ್ತಿವೆ ನಾನಾ ತಾಲೀಮು -ತಂತ್ರ -ಕಸರತ್ತು/
ಜಯವು ಖಚಿತವು ಅಭ್ಯರ್ಥಿಗಳಲ್ಲಿ ಇದ್ದರೆ ನಿಯತ್ತು/
- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ