ಮಂಗಳವಾರ, ಮಾರ್ಚ್ 7, 2023

ಪ್ರಥಮರು (ಕವಿತೆ) - ಸಬ್ಬನಹಳ್ಳಿ ಶಶಿಧರ.

ಹೆತ್ತವಳಿಗೆ ಹೊತ್ತವಳಿಗೆ
ಮೊದಲ ಪೂಜೆ ಇರಲಿ
ಪೂಜಿಸುವ ಮನದಲ್ಲಿ
ಪ್ರೀತಿ ಭಕ್ತಿ ಇರಲಿ

ಎದೆಯೊಳಗಿನ ಮಂದಹಾಸ
ಮರೆಯಾಗದೆ ಇರಲಿ
ಸರ್ವರನು ಪ್ರೀತಿಸುವ
ಗುಣ ನಿನ್ನೊಳಗಿರಲಿ

ಎಲ್ಲ ಬಲ್ಲೆನೆಂಬ ಬಿಂಕ
ಎಂದೂ ಸುಳಿಯದಿರಲಿ
ಎಲ್ಲರೊಳಗು ನಾನೊಬ್ಬ
ಎಂಬ ಅರಿವು ಇರಲಿ

ಹೆತ್ತಿರುವ ಹೊತ್ತಿರುವ
ತಾಯಿ ಭೂಮಿ ಹೆಣ್ಣು
ಇಬ್ಬರನ್ನು ಮರೆತರೆ
ಬದುಕೆಲ್ಲಾ ಮಣ್ಣು

ಹೆತ್ತವಳು ಹೊತ್ತವಳು
ಜಗದ ಪ್ರಥಮ ದೇವರು
ಅವರಿಬ್ಬರ ಮುಂದೆ ಇಲ್ಲ
ಯಾರು ಅವರ ಸಮರು.
- ಸಬ್ಬನಹಳ್ಳಿ ಶಶಿಧರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...