ಮಂಗಳವಾರ, ಮಾರ್ಚ್ 7, 2023

ಮೌನಯಾನ (ಕವಿತೆ) - ಕಾವ್ಯ ದಿವಾಕರ್‌.

ಕನಸೊಂದ ಕಂಡಿರಲು
ಆ ಕನಸಿಗೆ ಅರ್ಥವಿಲ್ಲ..!

ಮನನೊಂದು ಹಾಡಿರಲು
ಆ ರಾಗಕೆ ತಾಳವಿಲ್ಲ..!

ಪ್ರೀತಿಯೊಂದು ಮೂಡಿರಲು
ಆ ಪ್ರೀತಿಗೆ ನೆಲೆಯಿಲ್ಲ..!

ಕವಿತೆಯ ಸಾಲೊಂದು ಬರೆದಿರಲು
ಆ ಸಾಲಿಗೆ ಸಾರವೇ ಇಲ್ಲ..!

ಬದುಕೊಂದ ನಡೆಸುತ್ತಿರಲು
ಆ ಬದುಕಿಗೆ ಸತ್ವವೇ ಇಲ್ಲ..!

ದೇಹದಿ ಆತ್ಮವೊಂದು ನೆಲೆಸಿರಲು
ಆ ಆತ್ಮಕ್ಕೆ ಬದುಕುವ ದಾಹವಿಲ್ಲ..!

- ಕಾವ್ಯ ದಿವಾಕರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...