ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಕವಿಯತ್ರಿ ಮಲ್ಲಮ್ಮ ಸಾಲೆಗಾ೦ವಯವರು ಬರೆದಿರುವ ಮತ್ತೆ ಮೂಡಲಿ ಬೆಳಕು ಕವನ ಸಂಕಲನ ಇಂದಿನ ವಾತಾವರಣಕ್ಕೆ ಅನುಗುಣವಾಗಿ ಮೂಡಿಬಂದಿರುವುದು ಸಂತೋಷದ ವಿಷಯ ಕವನಗಳಲ್ಲಿ ಬ್ರೂಣ ಹತ್ಯೆ ಅತ್ಯಾಚಾರ ಅಜ್ಜಿ ತಾಯಿ ಬಗ್ಗೆ ಸುಂದರವಾಗಿ ಮೂಡಿಬಂದಿದೆ,
ನಾನು ಗಟ್ಟಿಯಾಗಬೇಕು
ಹೆಣ್ಣೆಂದು ಅಯ್ಯೋ ಎನ್ನದೆ ಗಂಡೆ 0ದು ಮೆಟ್ಟಿ ನಿಲ್ಲುವ ಮೆಟ್ಟಿಲಾಗಬೇಕು
ನಾನು ಗಟ್ಟಿಯಾಗಬೇಕು,
ಜೀವನದಲ್ಲಿ ಬರುವ ದುಃಖ ನಿರಾಶೆ ಅವಮಾನ ಅಪಮಾನ ಪ್ರತಿಯೊಬ್ಬರ ಪಾಲಿಗೆ ಬರುವ ಅಂಶಗಳು ಇವುಗಳನ್ನು ಎದುರಿಸಿದಾಗ ಮಾತ್ರ ಪರಿಪೂರ್ಣ ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆ ಆಗುವುದರಲ್ಲಿ ಸಂಶಯವಿಲ್ಲ, ಚಿಕ್ಕಪುಟ್ಟ ಸಮಸ್ಯೆಗಳನ್ನು ಎದುರಿಸಲಾಗದೆ ಹೇಡಿಯಾಗಿ ಸಾಯುವುದು ಹೇಡಿಗಳ ಲಕ್ಷಣ ಒಂದು ಕಲ್ಲನ್ನು ಸುತ್ತಿಗೆಯಿಂದ ಒಂದು ಸುಂದರವಾದ ಮೂರ್ತಿ ಆಗುತ್ತದೆ ಅದೇ ರೀತಿ ಹೆಣ್ಣು ಸಹ ಗಂಡಿನ ಸಮಬಲದಲ್ಲಿ ಕೆಲಸ ಮಾಡುತ್ತಿದ್ದಾಳೆ ಹೆಣ್ಣು ಸಮಾಜದ ಕಣ್ಣು ಅದೇ ರೀತಿ ಛಲಗಾತಿ ಧೈರ್ಯವಂತೆ ,,
ನಿನ್ನ ಹೆತ್ತವಳು ನನ್ನ ಜಾತಿ
ನನ್ನ ಹೆತ್ತವಳು ನನ್ನ ಜಾತಿ
ಸಾಕಿಸಲುಹಲು ಬೇಕೇ ಬೇಕು ನನ್ನ ಜಾತಿ
ನಾನೇಕೆ ಬೇಕು?
ಹೆಣ್ಣನ್ನು ಭೂಮಿಗೆ ಹೋಲಿಸಿದ್ದಾರೆ, ಆದರೆ ದಿನಗಳು ಕಳೆದಂತೆ ಹೆಣ್ಣಿನ ಮೇಲೆ ಅನ್ಯಾಯ ಮೋಸ ವಂಚನೆ ಪ್ರೀತಿಯ ಹೆಸರಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಅನಾಚಾರ ಅತ್ಯಾಚಾರ ಸಮಾಜಕ್ಕೆ ಅಂಟಿದ ರೋಗ ಅಂದರೆ ತಪ್ಪಾಗಲಾರದು, ಹೆಣ್ಣು ಇದ್ದರೆ ಅಬಾರ್ಷನ್ ಮಾಡುವುದು ಹಾದಿ ಬೀದಿಯಲ್ಲಿ ಚೆಲ್ಲುವುದು ಪ್ರತಿ ನಿಮಿಷ ಹೆಣ್ಣಿನ ಮೇಲೆ ನಡೆಯುತ್ತಿರುವುದು ನಿಜಕ್ಕೂ ನಾಚಿಕೆಗೇಡು, ನರಸತ್ತ ಸರ್ಕಾರ ಕಿವಿ ಕಣ್ಣು ಇಲ್ಲದ ನ್ಯಾಯಾಂಗ ಪ್ರೀತಿ ವಿಶ್ವಾಸ ಕರುಣೆ ಮಮತೆ ಇಲ್ಲದ ಜನರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ? ಕಾನೂನಿನಿಂದ ಸಾಧ್ಯವಿಲ್ಲ ಪ್ರತಿಯೊಬ್ಬರು ಒಳ್ಳೆಯ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಧ್ಯ ಹೆಂಡತಿಯಾಗಿ ಬರಬೇಕು ಆದರೆ ಮಗಳಾಗಿ ಬೇಡ ಹೇಳುವುದು ಯಾವ ನ್ಯಾಯ?, ಎಂಬ ಪ್ರಶ್ನೆ ಕಾಡುತ್ತದೆ,
ಕ್ಷಣ ಕಳೆದರು ದಿನಗಳಿದರು ನೆನಪುಗಳೆಲ್ಲ,
ನಿನ್ನ ಸೀರೆಯ ಸೆರಗನ್ನು ಸುತ್ತಿದಂತಿವೆ ಕಂದನು ಅಳುವಾಗ ಕಾಯೋ ಅಮ್ಮನ ಕ೦ಡು ಕರುಳ ಕೊರಗುತ್ತಿದೆ ನೀನು ಕಾಣದೆ,
ಎರಡು ಅಕ್ಷರಗಳಿಂದ ಕೂಡಿದ ಅಮ್ಮ ಹೆಸರು ಮುತ್ತಿನಂತ ಅಮ್ಮನಿಗೆ ತಕ್ಕ ಹೆಸರು 9 ತಿಂಗಳು ಮುದ್ದಿನಿಂದ ಜೋಪಾನ ಮಾಡುವ ಅಮ್ಮ ನಿಗೆ ಬೆಲೆ ಕಟ್ಟಲು ಸಾಧ್ಯವಾಗದ ಹಾಗೂ ಮರೆಯಲಾಗದ ಮಾಣಿಕ್ಯ ಅಂದರೆ ತಪ್ಪಾಗಲಾರದು ಅಮ್ಮ ಆಕಾಶ ಆಕಾಶವೇ ಅಮ್ಮ ಎಂದು ಮಹರ್ಷಿಗಳು ಹೇಳಿದ ಮಾತಿದು ತನ್ನ ಮಕ್ಕಳಗೋಸ್ಕರ ಹಗಲು ಇರುಳು ದುಡಿದು ಮಕ್ಕಳನ್ನು ಸಾಕುತ್ತಾಳೆ ತನ್ನ ಜೀವನವನ್ನು ತ್ಯಾಗ ಮಾಡುತ್ತಾಳೆ ಕಷ್ಟವನ್ನು ಮರೆತು ಮಕ್ಕಳ ಗೋಸ್ಕರ ಹೋರಾಟ ಮಾಡುತ್ತಾಳೆ ಒಂದು ರೀತಿಯಲ್ಲಿ ಹೇಳಬೇಕಾದರೆ ಅಮ್ಮನಿಗೆ ಅಮ್ಮನಿಗೆ ಸಾಟಿ ಮಕ್ಕಳು ಸಹ ಹೆತ್ತವರನ್ನು ಸೇವೆ ಮಾಡಬೇಕು ಅಂದಾಗ ಮಾತ್ರ ತಾಯಿಯ ಋಣ ತೀರಿಸೋ ಸಾಧ್ಯ,
ಬಡವಿಯ ಬಾಳಿಗೆ ಬಾಳಾಗಿ ಬಂದವನೇ ಬಂಗಾರದಂಗ ವನು ಮತ್ಯಾಕ ಬೇಕ ಬಂಗಾರ,
ಗಂಡ ತನ್ನ ಹೆಂಡತಿ ಗೋಸ್ಕರ ಪ್ರೀತಿಯಿಂದ ಚೆನ್ನಾಗಿ ನೋಡಿಕೊಳ್ಳುತ್ತಾನೆ ಅವಳನ್ನು ನೆಮ್ಮದಿಯಿಂದ ಇರಲು ಪ್ರಯತ್ನ ಮಾಡುತ್ತಾನೆ ಹೆಂಡತಿ ಗಂಡ ನಗುನಗುತ್ತ ಸದಾ ತನ್ನ ಮುಂದೆ ಇರಬೇಕು ಎಂದು ಬಯಸುತ್ತಾಳೆ ತಾನು ಬಡವಿಯಾದರೂ ಗಂಡನ ಮನಸ್ಸು ಬಂಗಾರದಂತೆ ಇರುತ್ತದೆ ಬಂಗಾರ ಇಲ್ಲದೆ ಹೋದರು ಹೆಂಡತಿ ಗೋಸ್ಕರ ಹೃದಯ ಮಿಡಿಯುತ್ತದೆ ಕೊರಳಲ್ಲಿ ಬಂಗಾರ ಇದ್ದರು ಗಂಡನಿಗೆ ಕಾಡಿಬೇಡಿ ಬೇಕು ಒತ್ತಾಯ ಮಾಡುವ ಹೆಂಗಸರು ಇರುವಾಗ ತಾನು ಬಡವಿಯಾದರೂ ತನ್ನ ಗಂಡನೇ ಬಂಗಾರ ಹೇಳುವ ಹೆಂಡತಿಯ ಮನಸ್ಸು ಮೆಚ್ಚುವಂತದ್ದು,
ಹೆಣ್ಣಲ್ಲ ಹೆಂಗಸು ತಾಯಿಯಲ್ಲ ತಂಗಿ ಕಾಮದ ಕಪಿಗಳಿಗೆ ಕಾಣದ ಇದು ಕೈಕಟ್ಟಿ ಕೊರಳಿಗೆ ಕಾಲಿಟ್ಟು ಬಲೆಗಳೆದಾಗ,
ಬಲಿ ಯಾಗಿರುವಳು ಬಲತ್ಕಾರಕ್ಕೆ,
ಇಂದು ದೇಶದಲ್ಲಿ ವಯಸ್ಸಾದ ವಯಸ್ಕರಿಂದ ಹಿಡಿದು ಎರಡು ಮೂರು ವರ್ಷದ ಕಂದಮ್ಮಗಳ ಮೇಲೆ ಅತ್ಯಾಚಾರ ನಡೆಯುತ್ತಿರುವುದು ವಿಷಾದನೀಯ ಏನು ಅರಿಯದ ಮುಗ್ಧ ಕಂದಮ್ಮಗಳು ದೇವರ ಮಕ್ಕಳು ಎಂದು ಕರೆಯುತ್ತಾರೆ ಕಳೆದ 10-12 ವರ್ಷಗಳಿಂದ ಅತ್ಯಾಚಾರ ಪ್ರಕರಣಗಳು ಲೆಕ್ಕಕ್ಕೆ ಸಿಗಲಾರದ ಮಟ್ಟಿಗೆ ಏರಿಕೆಯಾಗುತ್ತಿರುವುದು ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ , ಹೆಣ್ಣು ಮಕ್ಕಳು ಸರಿಯಾದ ವೇಳೆಗೆ ಬಾರದೇ ಇದ್ದಾಗ ನಾನಾ ತರದ ಸಂಶಯ ಕಾಡುತ್ತದೆ ಹೊಲಕ್ಕೆ ಹೋದ ಹೆಣ್ಣು ಮಕ್ಕಳು ಹೀಗೆ ಹತ್ತಾರು ಕಾರಣಗಳಿಂದ ಹೆಣ್ಣಿನ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಈ ದೇಶದ ದುರಂತ ಹಲ್ಲು ಕಿತ್ತ ಹಾವಿನಂತಾಗಿದೆ ಇಂದಿನ ಕಾನೂನು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳದೆ ಇಂಥ ಅನಾಚಾರ ನಡೆಯುತ್ತಿರುವುದು ಇದರ ವಿರುದ್ಧ ಹೋರಾಟ ಮಾಡದೆ ಹೋದರೆ ಇಂಥ ಘಟನೆಗಳು ನಡೆಯುತ್ತಾ ಇರುತ್ತವೆ,
ಕವಿಯತ್ರಿ ಮಲ್ಲಮ್ಮ ಸಾಲೆಗಾ೦ವ ಯವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂಬುದು ಮಹಾ ಕನ್ನಡಿಗರ ಹಾಗೂ ಗಡಿನಾಡು ಕನ್ನಡಿಗರ ಶುಭ ಹಾರೈಕೆ ಅಭಿನಂದನೆಗಳು.
- ದಯಾನಂದ ಪಾಟೀಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ