ಶನಿವಾರ, ಏಪ್ರಿಲ್ 8, 2023

ಭುವಿ ಸ್ವರ್ಗವಾಗಿಸಿದೆ (ಕವಿತೆ) - ತುಳಸಿದಾಸ ಬಿ. ಎಸ್.

                ಆ ರವಿಯ ಕಿರಣಕೆ
               ಇಬ್ಬನಿಯು ಹೊಳೆದಂತೆ
               ಎನ್ನ ಕಾಣುತ ಮಖವು
               ಮಿಂಚುವುದು ಹೊನ್ನಂತೆ

               ವಿರಹದ ಪ್ರತಿ ಗಳಿಗೆ
               ತಾಯಿ ಕರುಳ ಮಿಡಿವಂತೆ
               ನಿನ್ನ ಪ್ರೀತಿಯ ಮುಂದೆ
               ಆ ಬಾನು ಮಿಡಿಯಂತೆ

              ಪ್ರೀತಿ ಸಸಿಗೆ ನೀರೆರೆದು
              ಅರಳುತ ಹೂವಿನಂತೆ
              ನೆಲೆಸೆನ್ನ ಮನದಲ್ಲಿ
              ಹಸಿರುಟ್ಟ ಮಲೆಯಂತೆ

             ಬರಗಾಲದ ಆ ಮಳೆಗೆ
             ದೇಹ ತಾ ಮಿಂದಂತೆ
             ಹಣಿಸಿ ಪ್ರೀತಿಯ ತಣಿಸಿ
             ನಲಿಸುವೆ ಮೊದಲಿನಂತೆ

              ಹರೆ ಕರಗದೆಲೆ ತರುಣಿ
              ಮಳೆಗಾಲದ ಹಸಿರಂತೆ
              ಭುವಿ ಸ್ವರ್ಗವಾಗಿಸಿದೆ
              ಉದಯದ ರವಿಯಂತೆ

- ತುಳಸಿದಾಸ ಬಿ. ಎಸ್., ಸಿಂಧನೂರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...