ಯಕ್ಷಗಾನ ಬಯಲಾಟ ತೊಗಲು ಗೊಂಬೆ ಆಟ
ಇಳಿಬಿಟ್ಟ ದಾರದಲೆ ಕುಣಿವ ಸೂತ್ರಧಾರಿ ಆಟ
ಕಣ್ಮನ ತುಂಬುವ ರಸಮಯದಾಟ
ನೋಟಕ್ಕೆ ಹಬ್ಬದೂಟ!!
ರಂಗಭೂಮಿ ಜಾನಪದ ಲೋಕದ ದೃವತಾರೆ
ಬೆಳಗಲ್ಲು ವೀರಣ್ಣ ಮತ್ತೊಮ್ಮೆ ಹುಟ್ಟಿ ನೀ ಬಾರಣ್ಣ
ಜಗತ್ತಿಗೆ ಭಾರತೀಯ ಸಂಸ್ಕೃತಿ ಲೋಕದ ರೂವಾರಿ!!
ಜಡ ತುಂಬಿದ ಗೊಂಬೆಗೆ ಜೀವ ತುಂಬುವ ಸಂಜೀವಿನಿ
ಪಿಟೀಲು ವಾದಕ ಹನುಮಂತಪ್ಪನ
ಆಸೆಯ ಚಿಗುರು
ರಾಮಾಯಣದ ಪಂಚವತಿ ದಾಖಲೆ ಸ್ಪೂರ್ತಿ
ಭಾರತ ಸ್ವಾತಂತ್ರ್ಯ ಸಂಗ್ರಾಮ ತೆರೆಯಲಿ ಭಾವೈಕ್ಯತೆಯ ಸಂಕೇತ!!
ಪ್ರವಾದಿ ಬಸವೇಶ್ವರ. ಕಿತ್ತೂರು ಚೆನ್ನಮ್ಮ. ಮಹಾತ್ಮ ಗಾಂಧಿ
ಜೀವ ತುಂಬಿದ ತೊಗಲುಗೊಂಬೆ
ನಾಡೋಜ ಗೌರವ ಡಾಕ್ಟರೇಟ್
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳ ಮಹಾಪೂರ!!
ಕನ್ನಡ ನಾಡಿನ ಹೆಮ್ಮೆಯ ಪುತ್ರ
ಭಜನೆ ಗಾಯನ ಸಂಭ್ರಮ ಕ್ಷಣದಿ
ಮಣ್ಣ ಉಸಿರಲಿ ಚಿಗುರು ಎಲೆ
ಮಾವಿನ ಹೂ ಗೊಂಚಲು ಚಿಗುರ
ಕನ್ನಡ ಕಣ್ಮಣಿ ಅಜರಾಮರ!!
- ಶ್ರೀ ವೆಂಕಟೇಶ್ ಬಡಿಗೇರ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ