ಗುರುವಾರ, ಡಿಸೆಂಬರ್ 2, 2021

ಸೈನಿಕರಿಗೆ ಗೌರವದ ಸೆಲ್ಯೂಟು (ಕವಿತೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ತಾಯಿ ಭಾರತಾಂಬೆಯ ಸೇವೆಗೆ ಸದಾ ಸಿದ್ಧರು ಹೆಮ್ಮೆಯ ವೀರ ಸೈನಿಕರು, 
ತಾಯ್ನೆಲದ ಸೇವೆಗೆಂದು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು,
ತನ್ನೂರು ಹೆತ್ತವರ ಬಿಟ್ಟು ಬಂದಿಹರು, 
ಸೈನಿಕರಿಗೂ ಪ್ರೀತಿಯ ತಾಯ್ತಂದೆ, ಬಂಧು-ಬಳಗ ಮಡದಿ -ಮಕ್ಕಳಿಹರು,
ಅವರೇ ಸೈನಿಕರಿಗೆ ಉಸಿರಾಗಿಹರೂ, 
ಆದರೂ ದೇಶಸೇವೆಗೆ ಸದಾ ಸಿದ್ಧರು, 
ಸೈನಿಕರ ತಾಯ್ತಂದೆ-ಮಡದಿ-ಮಕ್ಕಳಿಗೆ ಗೌರವದ ಸೆಲ್ಯೂಟು ಸಲ್ಲಿಸುತಾ ಜೊತೆಯಲ್ಲಿ ಸಾಗುತಿರು... 

ದಿನವಿಡಿ ದಣಿವರಿಯದೇ ದೇಶಕ್ಕಾಗಿ ದುಡಿಯುವ ಜೀವ, 
ಸೈನಿಕನನ್ನೇ ನೆನೆದು ದೂರದಲ್ಲಿ ಕಾಯುತಿರುವ ಬಾಂಧವ್ಯದ ಬೆಸುಗೆಯನು ಹೊತ್ತ ಅವೆಷ್ಟೋ ಜೀವ, 
ಕೆಲವೊಮ್ಮೆ ಮನಸಿಗೆ ತರುವುದು ನೋವ, 
ಆದರೂ ಕುಂಟುಂಬಸ್ತರ ಮನದಲ್ಲಿ ನಮ್ಮ ಮಗ ದೇಶದ ಸೈನಿಕನೆಂಬ ಹೆಮ್ಮೆಯ ಭಾವ, 
ಸೈನಿಕರ ತಾಯ್ತಂದೆ-ಮಡದಿ-ಮಕ್ಕಳಿಗೆ  ಗೌರವದ ಸೆಲ್ಯೂಟುಗಳ ಸಲ್ಲಿಸಿ ಜೊತೆಯಲ್ಲಿ ಸಾಗುತಿರುವ,

ದೇಶದ ರಕ್ಷಣೆಗೆಂದು ತನ್ನ  ಪ್ರಾಣವ ಮುಡಿಪಾಗಿಟ್ಟು,
ತನ್ನೂರನ್ನು ಬಿಟ್ಟೂ -ತಾಯಿ ಭಾರತಮಾತೆಯ ಕರೆಗೆ ಓಗೊಟ್ಟು, 
ತನ್ನ ಮಡದಿ-ಮಕ್ಕಳ ಆಸೆ-ಆಕಾಂಕ್ಷೆಗಳ ಪಕ್ಕಕ್ಕಿಟ್ಟು- ಕುಟುಂಬದ ಚಿಂತೆಯ ಬಿಟ್ಟು, ದೇಶಕ್ಕಾಗಿ ಎದೆಯುಬ್ಬಿಸಿ ತೊಡೆಯ ತಟ್ಟು- ವಚನವ ಕೊಟ್ಟು, 
ಸೈನಿಕರ ತ್ಯಾಗ ಬಲಿದಾನಗಳು ಗಣಿತದ ಎಣಿಕೆಗೂ ನಿಲುಕದಷ್ಟು, 
ಸೈನಿಕರನ್ನು ಮೀರಿಸುವವರ್ಯಾರುಂಟು, 
ಸೈನಿಕನಂತೆ ಶಿಖರವೇರಿ ಭಾರತದ ತಿರಂಗಧ್ವಜವ ಹೆಮ್ಮೆಯಿಂದ ಹಾರಿಸುವಂತೆ ಗುರಿಯ ಮುಟ್ಟು, 
ದೇಶಕ್ಕೆ-ದೇಶವೇ ಎದ್ದು ನಿಂತು ಸಲ್ಲಿಸುವುದು ಗೌರವದ ಸೈಲ್ಯೂಟು,
"ಜೈ ಹಿಂದ್ " ಸ್ವರಕ್ಕೆ ಆಸೆಪಟ್ಟು- ಆಲಿಸಿದಾಗ  ಗರಿಯು ಸಿಕ್ಕಷ್ಟು  ಖುಷಿಯಪಟ್ಟು- ಶಕ್ತಿಯಾಗುವುದು ದುಪ್ಪಟ್ಟು, 
ಸೈನಿಕರ ತಾಯ್ತಂದೆ-ಮಡದಿ-ಮಕ್ಕಳಿಗೆ ಗೌರವದ ಸೆಲ್ಯೂಟು ಸಲ್ಲಿಸಲೂ ನನಗಂತೂ  ಹೆಮ್ಮೆಯುಂಟು, 
"ಜೈ ಹಿಂದ್"... 
- ಶಾಂತಾರಾಮ ಶಿರಸಿ, ಉತ್ತರ ಕನ್ನಡ.
8762110543
7676106237.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರಾಳ ಮುಖ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

ಫಲ ಹೊತ್ತು ನಿಂತಿತ್ತು ನಿಂತಿದ್ದು ಬಾಗಿತ್ತು
ಕೊಯ್ದದ್ದು ಮುಳುಗಿತ್ತು ರಾಶಿ ಕೊಚ್ಚೇ ಹೋಯ್ತು
ಬೇಡವಾದಾಗ ಬಂದು ಕಸಿದೋಯ್ತು ಎಲ್ಲವನು
ಇನ್ನೂ ನಿಲ್ಲಲೇ ಇಲ್ಲ ಮಳೆ

ಕಟ್ಟಿಗೆಯು ತೊಯ್ದಿತ್ತು ಒಳಗೆಲ್ಲ ನೀರಿತ್ತು
ಗೋಡೆ ಮೆಲ್ಲಗೆ ಬಾಗಿ ಮನೆಯಿಂದು ಬಿದ್ದೋಯ್ತು
ಕನಸು ಸಣ್ಣಗೆ ಜಾರಿ ಕಣ್ಣೆಲ್ಲ ನೀರಾಯ್ತು
ಇನ್ನೂ ನಿಲ್ಲಲೇ ಇಲ್ಲ ಮಳೆ

ವಾಹನಗಳನೇ ಸೆಳೆದು ತಾ ದೂರ ಸಾಗಿತ್ತು
ಜೀವರಾಶಿಯ  ನುಂಗಿ ನೋವ ತಾನುಳಿಸಿತ್ತು
ಊರಿಗೂರೇ ನೀರು ಸುತ್ತಲೆತ್ತಲೂ ನೀರು!
ಇನ್ನೂ ನಿಲ್ಲಲೇ ಇಲ್ಲ ಮಳೆ

ಕರೆದಾಗ ಬರಲಿಲ್ಲ ಬಂದಾಗ ನಗುವಿಲ್ಲ
ಋತು ಚಕ್ರವನೆ ಮೀರಿ ಸುರಿಯುತಲಿದೆ ತಾನು
ಎಲ್ಲದನು ನಿಲ್ಲಿಸುತ ತಣ್ಣಗೊಮ್ಮೆಗೆ ನಿಂತು
ತನ್ನ ಲೋಪದ ಕುರಿತು ಮರುಗೀತೆ ಮಳೆಯು?
- ಶ್ರೀ ತುಳಸಿದಾಸ ಬಿ ಎಸ್, ಶಿಕ್ಷಕರು ಸಿಂಧನೂರು ಜಿ.ರಾಯಚೂರು.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸಂತಸದ ಸದ್ದು (ಕವಿತೆ) - ಸ್ಪೂರ್ತಿ ಎಸ್. ಆರ್.

ನೀವು ಬರುವಾಗ ನನ್ನ ಮನ ನಗು ಬೀರುತ್ತಿದೆ ಆ ಚಂದ್ರನಂತೆ..!
ನಿಮ್ಮ ನಡತೆ ನೋಡಿ ಕಣ್ಣುಗಳು ನರ್ತಿಸುತ್ತಿದೆ ಅ ನವಿಲಿನಂತೆ.....!
ನಿಮ್ಮ ಮಾತು ಕೇಳಿ ನನ್ನ ಕರ್ಣಗಳು ಆಲಿಸುತ್ತಿದೆ ಆ ಕೋಗಿಲೆಯ ಧ್ವನಿ ಆಲಿಸಿದಂತೆ ...!
ನಿಮ್ಮ ಮೃದು ಸ್ವಭಾವ ಕಂಡು ಮನಸ್ಸು ವರ್ತಿಸುತ್ತಿದೆ ಮಲ್ಲಿಗೆಯಂತೆ ...!
ನಿಮ್ಮ ಅಂದವ ಕಂಡು ಮಧುರ ಮನಸ್ಸಾಕ್ಷಿ ಆಗುತ್ತಿದೆ ಚಿನ್ನದಂತೆ...!
ನಿಮ್ಮ ಚಂದ ಹೇಗೆ ವರ್ಣಿಸಲಿ ನಾ ನೀವೇ ಚಂದನ ವಾಗಿ ಇರುವಾಗ ........! 
ನನ್ನ ಗುರುಗಳು ಚಂದನ ಮೇಡಂ  ನಿಮಗಾಗಿ ನನ್ನ ಈ ಕವನ...!

  - ಸ್ಪೂರ್ತಿ ಎಸ್. ಆರ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮನದ ಹೂವು (ಕವಿತೆ) - ರಂಜಿತ್ ಕುದುಪಜೆ

ಮುಂಜಾನೆ ಮನಸು ಹೇಳುತ
ಹೃದಯವು ಭಾರವಾಗಿ ಏಳುತ
ಒಲ್ಲದ ಮನಸನು ಕೆಣಕುತ
ಇಲ್ಲಸಲ್ಲದ ನೋವ  ನುಂಗುತ

ಅಳುವ ಕಂದನಾಗಿ ಮನದ ಒಳಗೆ
ಭುವಿಯ ಹಂದರವಾಗಿ ಕಾನನದಲಿ
ಕೇಳುವ ಕಣ್ಣುಗಳು ಬಡವಾಗಿ
ಪಕ್ಷಿಗಳ ಕಲರವ ಬೇಡವಾಗಿ

ಹೊರಗೆ ನಗುವ ನೋವ ಮೊಗವು
ನಗುವಿನಲ್ಲಿ ಮಗುವ ಕಂಡು
ಅಳುವ ದನಿಯ ಮನದ ಕೂಗು
ಜೀವವಿಲ್ಲಿ ನಶ್ವರ ಜೀವನವೆಂದು ಬೀಗು

ಸತ್ಯಕ್ಕಿಲ್ಲ ಬೆಲೆಯ ಸತ್ವ
ಹತ್ತಿಕ್ಕುತಿಹುದು ಸುಳ್ಳು ನಿತ್ಯ
ಕಾಮಾಲೆಯಂತೆ ಕಂಡ ಹಳದಿ
ಹೂಮಾಲೆ ಬಾಡಿತಲ್ಲಿ ತಳದಿ

ಸಿಹಿಯ ಕಹಿಯು ಮುಳ್ಳು ಚುಚ್ಚಿ
ಮಾಯದ ಗಾಯ ಬರೆಯ ಹಚ್ಚಿ
ಮೊಗ್ಗು ಮರಳಿ ದೀಪ ಹೊರಳಿ
ಮುಗ್ಧ ಮನಸ್ಸು ಕನಸು ನರಳಿ

✍🏻ರಂಜಿತ್ ಕುದುಪಜೆ.
S/o ದಾಮೋದರ ಕೆ.ಡಿ. , ತಣ್ಣಿಮಾನಿ ಗ್ರಾಮ, ಭಾಗಮಂಡಲ , ಮಡಿಕೇರಿ  ಕೊಡಗು ಜಿಲ್ಲೆ- ೫୭೧೨೪୭
ಮೋ : ೯೪೮೦೭೩೨೫೭೬.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...