ಭಾನುವಾರ, ಏಪ್ರಿಲ್ 17, 2022

ಪ್ರೀತಿ - ಪ್ರೇಮಕೆ ಬಲಿಯಾಗದಿರು (ಕವಿತೆ) - ಬಸವರಾಜ.ಹೆಚ್.ಹೊಗರನಾಳ

ಅಂದವ ನೋಡಿ ಮರುಳಾದೆ
ಚೆಂದದ ಮಾತಿಗೆ ಬೆರಗಾದೆ |
ಸಿಗುವಿ  ಎಂದು ಭಾವಿಸಿ
ಹಲವಾರು ಕನಸ ಕಟ್ಟಿದೆ ll
    
ನೀನು ಸಿಕ್ಕರೆ ಸಾಧನೆಗೆ ಮೀರಿದ ಮಾತೇ ಇಲ್ಲ ಎಂದೇ
ನಿನ್ನ ಪ್ರೀತಿಯ ಮುಂದೆ ಬೇರವಾ ಪ್ರೀತಿಯು ಇಲ್ಲ ಎಂದೇ |
ಆದರೇ ಪ್ರೀತಿಸುವ ಮುನ್ನ ಯೋಚಿಸಲೇ ಇಲ್ಲ ಊಸರವಳ್ಳಿಯಂತ ನಿನ್ನ ಭಾವಗಳ ಬದಲಾವಣೆಯನ್ನು
 ನಾ ಕಾಣಲೇ ಇಲ್ಲಲ್ಲಿll

ಕಣ್ಣಿಗೆ ಕಾಣುವ ಛಾಯೆಗೆ ನಾ ಮರುಳಾದೆ
ನಕ್ಕು - ನಗಿಸುವ ನಾಟ್ಯಕ್ಕೆ ನಾ ಬೆರಗಾದೆ |
ಬಿಟ್ಟು ಹೋಗುವ ಕೆಟ್ಟ ಪ್ರೀತಿಗೆ ನಾ ಮರುಗಿದೆ
ದಿಟ್ಟ ನಿರ್ದಾರವ ತೊರೆದು ದಟ್ಟ ಭಾವನೆಗಳ ಮೋಹದಿ ಸಿಲುಕಿದೆll

ನಡೆಯಲೇ ನಾ ಈ ಪ್ರೀತಿಯ ಹಿಂದೆ,
ಬದಲಾಗಬಹುದಾಗಿದೆ ನನ್ನ ಬದುಕು ಇಂದೇ |
 ಈ ಹಿಂದೆ-ಮುಂದಿನ ಬದುಕಿಗೆ ಇಂದಿನ ಪಯಣವೇ ಕಾರಣ 
ಈಗಿನ ಕ್ಷಣಗಳೇ ನೀಡುವುದು ನಮ್ಮ ಬದುಕಿಗೆ ಪ್ರೇರಣೆ ll

ಕಲಿಯಲು ಬಂದೇ ನಾ ಹಲವಾರು ಕನಸ ಹೊತ್ತು,
ಕನಸಿಗಾಗಿ ತೊರೆದು ಬಂದೇ ಅಮ್ಮನ ಪ್ರೀತಿಯ ತುತ್ತು | ಮರುಳಾಗಿಸಿ ನರಳಾಡಿಸಿದೆ ಇಲ್ಲಿ ಪ್ರೀತಿ -ಪ್ರೇಮದ ಮತ್ತು,
ಮತ್ತೆ ತೊರೆದು ನಡೆದರೇ ಇವೆಲ್ಲವನು ಈ ಹೊತ್ತು |
ಮುಂದೊಂದು ದಿನ ಜಗವೇ ಮೆರೆಸುವುದು
ನನ್ನ ಹೆಗಲ ಮೇಲೆ ಹೊತ್ತುll
     
- ಬಸವರಾಜ.ಹೆಚ್.ಹೊಗರನಾಳ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶ್ರೇಷ್ಠ ಮಹಾನಾಯಕ(ಕವಿತೆ) - ವೈಷ್ಣವಿ ರಾಜಕುಮಾರ್, ಕರಕ್ಯಾಳ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ 
ದೇಶವಾದ ಭಾರತಕ್ಕೆ ಸಂವಿಧಾನ ರಚಿಸಿ,
ದೇಶಕ್ಕೆ ಭದ್ರಬುನಾದಿ ಒದಗಿಸಿದ್ದಾರೆ,
ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಸವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ,
ಆ ಗ್ರಂಥದ ನಿಯಮಗಳು ಪಾಲಿಸಬೇಕೆಂದು ಹೇಳಿದ್ದಾರೆ,
ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕೆಂದು ಹೇಳಿದ್ದಾರೆ,
ಮಹಾನ್ ಮಾನವತಾವಾದಿ ಡಾll ಬಿ ಆರ್ ಅಂಬೇಡ್ಕರ್.

ಅವರ ಒಂದೊಂದು ಮಾತುಗಳು ಅದ್ಭುತ,
ಕೇಳಿದ ಕಿವಿಗಳಿಗೆ ಸ್ಫೂರ್ತಿದಾಯಕ,
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ,
ಭಾರತಕ್ಕೆ ಒಂದು ದೊಡ್ಡ ಕೊಡುಗೆ ನೀಡಿದ ಪ್ರಸಿದ್ಧ ನಾಯಕ.

ಕೀಳು ಜಾತಿಯವರೆಂದು ಅವಮಾನ ಮಾಡಿದರು,
ಅವಮಾನ ಪಡೆಯಲಿಲ್ಲ ಆ ನಾಯಕ,
ಎಲ್ಲಿ ಅವಮಾನ ಇದೆಯೋ ಅಲ್ಲಿ ಗೆಲುವು ಇದೆಯೆಂದು
ಎದ್ದುನಿಂತಿದ ಮಹಾನಾಯಕ,
ಡಾll ಬಿ ಆರ್ ಅಂಬೇಡ್ಕರ್.

ಅವರು ಮಾಡಿದ ಸಾಧನೆಗಳು,
ಅವರು ನಮಗೆ ಕೊಟ್ಟ ಕೊಡುಗೆಗಳು,
ನಮ್ಮ ಜೀವನದ ಅಸ್ತ್ರವಾಗಿವೆ,
 ನಮಗೆ ಬದುಕಲು ಸ್ಪೂರ್ತಿ ತುಂಬಿದ್ದಾರೆ,
ಡಾll ಬಿ ಆರ್ ಅಂಬೇಡ್ಕರ್. ಜೈ ಭೀಮ್.

- ವೈಷ್ಣವಿ ರಾಜಕುಮಾರ್, ಕರಕ್ಯಾಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸಮರವು ಬೇಡ (ಕವಿತೆ) - ರಾಜು ನಂಜಪ್ಪ, ನೆಲಗದರನಹಳ್ಳಿ.

ಎಷ್ಟೆಲ್ಲಾ ಆಯುಧ
ಎಷ್ಟೆಲ್ಲಾ ಸೈನಿಕರು
ಒಂದು ದೇಶದ ಮೇಲೆ
ಇನ್ನೊಂದು ದೇಶ
ಹನ್ನೊಂದು ದೇಶದ ಮೇಲೆ
ಮತ್ತೊಂದು ದೇಶ
ಹೆಣಗಳ ಲೆಕ್ಕ ತಪ್ಪಬಾರದು
ಒಂದು ತಲೆಗೆ ಎರಡೂ ತಲೆ
ಹತ್ತು ತಲೆಗೆ ಇಪ್ಪತ್ತು
ದೇಶಕೆ ಇದೆ ಆಪತ್ತು
ಪರಮಾಣು ಅಸ್ತ್ರ
ನೋಡಿ ಜಲಜಾಸ್ತ್ರ
ಲಕ್ಷ ಭುವಿಯ ಸುಡುವ
ಸಾಮರ್ಥ್ಯವಿದೆ ನಮಗೆ
ಒಂದು ಭುವಿಯ ಹುಟ್ಟು
ನಮಗಿಲ್ಲ ಯೋಗ್ಯತೆ
ಕರುಣೆಯ ಕಣ್ಣು
ಹಿಂಗಿ ಹೋಗಿದೆ
ಮಿಲಿಟರಿಗೆ ಹಣ
ನೀರಿನಂತೆ ಹರಿದಿದೆ
ಹೆಣಗಳ ಬಾಚಲು
ಕಾದಿವೆ ಪಿಶಾಚಿಗಳು
ನೆಮ್ಮದಿಯ ನಾಳೆ
ಯಾರಿಗೂ ಬೇಕಿಲ್ಲ
ರಕ್ತವನ್ನು ಕುಡಿಯಲು 
ಭೂತಾಯಿ ಬಯಸಿಲ್ಲ 
ರಕ್ಷಿಸಲು ಯುದ್ಧವಿರಲಿ
ಭಕ್ಷಿಸಲು ಬೇಡ 
ಸಮರವೇ ಜೀವನವಲ್ಲ
ಸಮರಸವು ಜೀವನ!! 
- ರಾಜು ನಂಜಪ್ಪ, ನೆಲಗದರನಹಳ್ಳಿ, ಬೆಂಗಳೂರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಧನ್ಯರಾಗುವ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್

ಒಣಗಿದೆದೆಗೆ ನಿನ್ನ ಪ್ರೀತಿ
ಒರತೆಯಾಗಿದೆ
ಮಳಗೆ ಭೂಮಿ ನೆನೆದ ಹಾಗೆ
ಮನವು ಅರಳಿದೆ

ಬೆಂಕಿಯಂತೆ ದಹಿಸೊ ಚಿಂತೆಗೆ
ಮಂಜೆ ಆದೆ ನೀ
ಬೆಳವ ಚಂದ್ರನ ಹಾಗೆ ದಿನವು
ಒಲವು ತಂದೆ ನೀ

ನಾಳೆ ಸೂರ್ಯನ ಬೆಳಗಿನಂತೆ
ಖಾತ್ರಿ ಬದುಕಿಗೆ
ಹಾಲು ಜೇನಿನ ಸವಿಯ ಹಾಗೆ
ಹೆಣ್ಣೆ ಬದುಕಿಗೆ

ನೆನೆಪೆ ನಿನದು ಗಂಧದಂತೆ
ಬದುಕಿನಾಟದಿ
ಕಷ್ಟ ಕರಗೊ ಮೋಡದಂತೆ
ನಿನ್ನ ಮಾತಿದೆ

ಏರು ಇಳುವಿನ ಅಲೆಗಳಂತೆ
ನೋವು ನಲಿವಿದೆ
ಜಗವು ಮೆಚ್ಚುವಂತೆ ಬಾಳಿ
ಧನ್ಯರಾಗುವ

 - ಶ್ರೀ ತುಳಸಿದಾಸ ಬಿ ಎಸ್
  ಶಿಕ್ಷಕರು ಸಿಂಧನೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...