ಗುರುವಾರ, ಅಕ್ಟೋಬರ್ 13, 2022

ಮಂದಾರವೇ ನೀ (ಕವಿತೆ) - ಶಿವಾ ಮದಭಾಂವಿ, ಗೋಕಾಕ.

ಲತೆಗಳಲ್ಲಿ ಕುಸುಮವರಳಿ
ಇವಳ ದಂತಪಂಕ್ತಿಗಳೇ ಬಾನಾಡಿ ಬೆಳ್ಳಕ್ಕಿಸಾಲು 
ನಿಂತಿಹಳು ಚೆಲುವಿ ನಗುಮೊಗವ ಚೆಲ್ಲಿ
ನಿಂತಿಹಳು ಚೆಲುವಿ ನಗುಮೊಗವ ಚೆಲ್ಲಿ

ಕುಡಿಹುಬ್ಬ ಕಾಮನಬಿಲ್ಲು
ಕಣ್ಣೇರಡು ಕಮಲದ ಹೂವು
ನಿಂತಿಹಳು ಚೆಲುವಿ ಹೂವ ಚೆಲ್ಲಿ
ನಿಂತಿಹಳು ಚೆಲುವಿ ಹೂವ ಚೆಲ್ಲಿ

ನಗುಮೊಗದಲಿ ತುಂಬಿದೆ ಒಲವು
ಇವಳ ಸವಿ ಮಾತುಗಳಲ್ಲಿದೆ ಬಲವು
ನಿಂತಿಹಳು ಮನದನ್ನೆ ನಲ್ಲನೆದೆಯ ಕದ್ದು
ಇವಳಿಂದ ಚಿಗುರುತಿದೆ ಮನದಲಿ ಹೂಬಳ್ಳಿ

ಮನದಲಿ ಮನೆಯ ಮಾಡಿ
ಕ್ಷಣ ಕ್ಷಣವೂ ಉಸಿರಲಿ ಉಸಿರಾಗಿ ಬೆರೆತು
ಬರುವ ನೋಡುತ ನಿಂತಿಹಳು ಮಲ್ಲಿ
ನೋಡುತ ನಿಂತಿಹಳು ಮನದ ಚೆಲುವಿ ಮಲ್ಲಿ
- ಶಿವಾ ಮದಭಾಂವಿ, ಗೋಕಾಕ.

ಸೌಂದರ್ಯ ಲಹರಿ (ಕವಿತೆ) - ಶಾಂತಾರಾಮ ಶಿರಸಿ.

ಮುದ್ದು ಕುವರಿ,
ಪೆದ್ದು ಮರಿ,
ಸೌಂದರ್ಯ ಸಿರಿ,
ನಿನ್ನಂದವು ರಂಗಿನ ನವಿಲು ಗರಿ...

ಸೌಂದರ್ಯವೆಲ್ಲಾ ನಿನ್ನಲ್ಲೇ ಸೃಷ್ಟಿಸಿ,
ನಿನ್ನ ನೋಡಲು ಬಹಳ ಖುಸಿ(ಷಿ),
ಸೀರೆಯುಟ್ಟು-ಮಲ್ಲಿಗೆಯ ಮುಡಿದು-ಹಣೆಯ ಮೇಲೆ ಬೊಟ್ಟಿಟ್ಟು ಶೃಂಗರಿಸಿ,
ಪದೇ-ಪದೇ ಅದೇ ಮುಂಗುರುಳ ಸರಿಸಿ,
ಕೆಂದುಟಿಯ ಕೆಂಪನೆಯ ತುಟಿಯಿಂದ ನಗುವ ಹೊರಸೂಸಿ,
ಹಾರುವ ಹಕ್ಕಿಗಳಿಗೆಲ್ಲಾ ಹಾಗೇ ಕೈಬೀಸಿ,
ನೋಡುವ ಹುಡುಗರನೆಲ್ಲಾ ಮೋಹಿಸಿ...

ಮುನಿಸಿರದ ಮುತ್ತಿನಂಥ ಮಾತುಗಳು,
ಕೈಯಾರೆ ತಿನಿಸುವ ತಿನಿಸುಗಳು,
ಯಾರಿಗೂ ಬೇಧ-ಭಾವ ತೋರದೇ,
ಎಲ್ಲರೂ ನನ್ನಂತೇ ಎಂದೇ,
ನಿನ್ನನ್ನು ಮರೆಯದ ಈ ಹೃದಯ ಉಸಿರಾಡುತಿದೆ...

 - ಶಾಂತಾರಾಮ ಶಿರಸಿ.

ನನ್ನ ಸುಂದರ ಶಾಲೆ (ಕವಿತೆ) - ಕೊಟ್ರೇಶ ನಡುವಿನಮನಿ.

ಕಣ್ಣಿನುದ್ದಕ್ಕೂ ನೋಡಿದರೆ ಕಾಣುವುದು ನಿಮಗೆ ಹಸಿರು ವನ,
ಸುಖ, ದುಃಖಗಳನ್ನು ಸರಿಸಮಾನವಾಗಿ ಸ್ವೀಕರಿಸಿ ಜೀವನ
ನಡೆಸುತ್ತಿದ್ದಾರೆ, ಹಿರೇಹೊನ್ನಿಹಳ್ಳಿ ಜನ.

ಕಲ್ಲು ಮುಳ್ಳುಗಳನ್ನು ಬುನಾದಿ ಮಾಡಿಕೊಂಡು ನಿಂತಿದೆ ಬಾಹುಬಲಿಯಂತೆ ಗುಡ್ಡದ ಮೇಲೆ, 
ಕಾನನದ ನಡುವೆ ನವಿಲು, ನರಿಗಳ ಮಧುರ ಸ್ವರ ಕೇಳಿ
ಮೈಮರೆತು ನಿಂತಿದೆ, ಕಿ.ರಾ.ಚೆನ್ನಮ್ಮ ವಸತಿ ಶಾಲೆ.

ನನ್ನ ಸುಂದರ ಶಾಲೆಯ ಮುಖ್ಯ  ಪ್ರವೇಶ ದ್ವಾರದಲ್ಲಿದೆ
“ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಫಲಕ.
ಜ್ಞಾನ ಸಂಪಾದಿಸಿಕೊಂಡರೆ, ಸಮಾಜದಲ್ಲಿ ಗೌರವ ಸಿಗುವುದು
ಕೊನೆಯತನಕ.
ಇವರೇ ನಮ್ಮ ಶಾಲೆಗೊಂದು ಕಳಶಪ್ರಾಯ,    ಅಸಿಪ್ ಅಲಿ ನದಾಪ್ ಸರ್ ಮಹಾಭಾರತದ ಧರ್ಮರಾಯ.
ಇವರ ಮುಖದಲ್ಲಿರುವುದು ಸದಾ ಬುದ್ದನಲ್ಲಿರುವ ಹುಣ್ಣಿಮೆಯ ಚಂದ್ರನಂತ ಕಳೆ,
ತೌಫೀನ್ ಮೇಡ್ಂರವರನ್ನು ಕಂಡಾಗ ನಾಚುವುದು ನಮ್ಮ ಇಳೆ.
ವಿಜ್ಞಾನ ವಿಷಯ ಅಂದರೆ ಇವರಿಗೆ ಅಚ್ಚುಮೆಚ್ಚು ,
ಆದರೆ ಆಸ್ಮಾ ಮೇಡ್ಂ ಕನ್ನಡ  ಮಾತನಾಡಲು ಕಲಿಯಬೇಕಿದೆ
ಹೆಚ್ಚುಹೆಚ್ಚು.

ಗಾನಕೋಗಿಲೆಗೆ ಪ್ರತಿಸ್ಪರ್ಧೆ ನೀಡುವ ಕಂಠ ಈ ಶಾಲೆಯಲ್ಲಿ ಉಂಟು,
ಸೀಮಾ ಮೇಡ್ಂರವರಿಗೆ ಕಿ.ರಾ.ಚೆ. ವಸತಿ ಶಾಲೆಗೆ ಇದೇ 
ಬಹಳ ದಿನದ ಜನುಮ ಜನುಮದ ನಂಟು.

ಶಾಲೆಗೆ ಒಬ್ಬರಾದರು ಶಿಸ್ತಿನ ಸಿಪಾಯಿ ಇರಬೇಕ್ರಿ ,
ತಪ್ಪು ಮಾಡಿದವರಿಗೆ, ಆಶಾಮೇಡ್ಂರವರು
 ಮಾಡುವರು ಆಗಾಗ ರಿಪೇರಿ.  ಬಂದವರಿಗೆ ಹೇಳಿಕೊಡುವರು ಇವರು
ಉಚಿತ ಕಂಪ್ಯೂಟರ್ ಶಿಕ್ಷಣ, ಕಷ್ಟ ಅಂತಾ ಅಂದಾಗ 
ಮಂಜುಳಾ ಮೇಡ್ಂರವರು ಸಹಾಯ ಮಾಡುವರು ತಕ್ಷಣ.

ಇವರು ಕ್ರೀಡೆ ಆಡಲು ನಿಂತರೆ ನಿಲ್ಲುವುದು ಎದುರಾಳಿ ಉಸಿರು ,
ಐ.ಎಮ್. ಕಿಲ್ಲೇದಾರ್ ಸರ್ ಎಂಬುದು ಇವರ ಹೆಸರು.
ಮಕ್ಕಳಿಗೆ ಬಹಳಷ್ಟು ಮಾಡುವರು ಇವರು ಪ್ರೀತಿಯಿಂದ ಮುದ್ದು ,
ಮಕ್ಕಳನ್ನು ಶಾಂತಮಾಡಲು ನಮ್ಮ ಶಾಲೆಯ ವ.ನಿ.ಪಾಲಕರಾದ ರೇಖಾ ಮೇಡ್ಂ ಬರುವರು
ಕುಳಿತಲ್ಲಿಂದ ಎದ್ದು ಬಿದ್ದು.

                        
 - ಕೊಟ್ರೇಶ ನಡುವಿನಮನಿ.
ಅತಿಥಿ ಶಿಕ್ಷಕರು ಕಿ.ರಾ.ಚೆ.ವಸತಿ ಶಾಲೆ ಹಿರೇಹೊನ್ನಿಹಳ್ಳಿ.

ಸೌಹಾರ್ದತೆ (ಕವಿತೆ) - ಮೇಘನಾ ಶಿವಾನಂದ್.

ಒಂಟಿಯಾಗಿ ಬಂದದ್ದಾಗಿದೆ ಹಾಗೆಯೇ ಹೋಗುವುದಿದೆ 
ಬಾಳ್ಮೆಯ ಹಂತದೊಳಾದರೂ ಜಂಟಿಯಾಗಿರಬಹುದಲ್ಲವೇ 
ಮೈತ್ರಿಯ ಮರೆತು ನಾನತ್ವದಿ ಮೆರೆದ ದಿನಗಳು 
ಮತ್ತೆ ಮರಳಿ ಬಾರದಾಗಿವೆ ನಿನ್ನೊಡನೆ 

ಇರುವುದದೆಷ್ಟು ದಿವಸವೀ ಮಾಯಾವಿ ಲೋಕದೊಳು 
ನಡೆದದ್ದು ನಡೆದಾಗಿದೆ ನಡೆಯಬೇಕಾದದ್ದನ್ನು ನೋಡು 
ಮತ್ಸರವ ಹಂಚುವ ಮೊದಲು ವಾಸ್ತವವನ್ನರಿತು 
ಭಾತೃತ್ವದ ಸವಿಯ ಸಾರುವಲ್ಲಿ ಮುಂದಾಗು 

ನಿನ್ನಂತೆ ಪರರಿಲ್ಲಿ ಅಜರಾಮರರಾರಿಲ್ಲ 
ಸ್ನೇಹಪರತೆಯಲ್ಲಿ ಎಲ್ಲರೊಳಗೊಂದಾಗಿ ಬದುಕಿ ಬಿಡು 
ನೀಡುವುದಾದರೆ ಪ್ರೀತಿ ವಿಶ್ವಾಸವ ನೀಡಿಬಿಡು ಬೇಡುವುದಾದರೆ ಕರುಣಾಂಬುನಿಧಿಯ ಬೇಡಿಬಿಡು 

ಇವನಾರವ ಎಂದೆನ್ನಬೇಡ ಇವ ನಮ್ಮವನೇ 
ದುಶ್ಚಟದ ದಾಸನಾಗಿಹೆಯಲ್ಲಾ ನಿನ್ನ ಪರಿಚಯವಾದರೂ ನಿನಗಿದೆಯೇ 
ಬಡವನಲ್ಲೂ ಹೃದಯವಿದೆ ಪ್ರೀತಿಯ ಉಣಬಡಿಸು 
ಮನುಷ್ಯರಂತಿರುವೆಲ್ಲರಲ್ಲೂ ಮನುಷ್ಯತ್ವವ ರೂಪಿಸು 

ದ್ವೇಷವೆಂಬ ಕಂತೆಯ ಸಲಹುತ ಮುಂಬರುವೆಯಾ 
ದಹಿಸುವಲ್ಲಿ ಆದಿಯಾಗು ಅನ್ಯರುನ್ನತಿಯ ಕಂಡ ಹೊಟ್ಟೆ ಉರಿಯ 
ಸೌಹಾರ್ದತೆಯಲಿ ಜೀವಿಸಿ ಇತಿಹಾಸದ ಪುಟವಾಗಲೆತ್ನಿಸು 
ಇಲ್ಲದ ದಳ್ಳೂರಿಯಲ್ಲಿ ಭವಿಷ್ಯ‌ ಹರಣವಾಗುವ ಮುನ್ನ

 - ಮೇಘನಾ ಶಿವಾನಂದ್
 ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ
 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾಪುರ
 ಯುವ ಕವಯಿತ್ರಿ ಮತ್ತು ಬರಹಗಾರ್ತಿ.

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...