ಭಾನುವಾರ, ಜನವರಿ 30, 2022

ಗಾಂಧಿ ಪುಣ್ಯ ಸ್ಮರಣೆ (ಕವಿತೆ) - ಶ್ರೀಮತಿ ರೇಖಾ ನಾಡಿಗೇರ.

ಮೋಹನದಾಸ ಕರಮಚಂದ ಗಾಂಧಿ
ಪೋರಬಂದರಿನ ಪುತಳಿಬಾಯಿಯ ಉದರದಿಂದ ಜನಿಸಿ ಈ ಜಗಕೆ ಬಂದಿ

ಅಮ್ಮ ಮಾಡ್ವ ವ್ಳತ,ನೇಮ, ನಿಷ್ಠೆ
ಎರಕ ಹೊಯ್ದವು ನಿಮ್ಮಲ್ಲಿ
ಬಿಡದೆ ದುಡಿವ ಕಾಯಕ ನಿಷ್ಠೆ

ಕಥೆ,ನಾಟಕಗಳು ಬೀರಿದಂಥ ಸತ್ ಪ್ರಭಾವ
ಹರಿಶ್ಚಂದ್ರ ನಾಟಕ ತಿಳಿಸಿತು ನಿಮಗೆ 
ಸತ್ಯವೇ ಶಕ್ತಿ ಎಂಬ ಭಾವ

ಮಾತಾ ಪಿತರ ದೀನರ ಸೇವೆಯೇ ಈಶ ಸೇವೆ ಎಂದರಿತೆ
ಓದಿ ಶ್ರವಣಕುಮಾರ ಚರಿತೆಯ
ಸತ್ಯ ಶಾಂತಿ ಅಹಿಂಸಾ ಮಾರ್ಗದಾಯ್ಕೆಗೆ ಅವೇ ನೀಡಿದವು ಪ್ರೇರಣೆಯ

ಮೂರು "ಮ"ಗಳಿಂದ ದೂರವಿರು (ಮದಿರೆ,ಮಾನಿನಿ,ಮಾಂಸ)
ಎಂದ ಮಾತೆಗೆ 
ನೀಡಿದೆ ಭರವಸೆಯ
ನಿಯಮದಂತೆ ನಡೆದು ಪಡೆದೆ ವಿದೇಶದಿಂದ ಬ್ಯಾರಿಸ್ಟರ್ ಪದವಿಯ

ವಿದೇಶದ ಓದಿನಿಂದ ಬರಲಿಲ್ಲ ನಿಮಗೆ ದಪ೯,ಅಹಂಕಾರ
ದೇಶ ಸುತ್ತುವರೆದ ದಾಸ್ಯ,ಬಡತನ ಕಣ್ಣುತೆರೆಸಿ ಆದೆ ನೀನು ಸ್ವಾತಂತ್ರ್ಯ ಹೋರಾಟಗಾರ

ಸತ್ಯ ಶಾಂತಿ ಅಹಿಂಸೆ ಉಪವಾಸ ಸತ್ಯಾಗ್ರಹ,ಆಂದೋಳನ ಗಳೇ ನಿಮ್ಮ ಅಸ್ತ್ರ
ನಡೆ ನುಡಿಯ ಸರಳತೆ
ನಿ:ಸ್ವಾರ್ಥ ಚರಿತ್ರೆ ಮಾಡಿದವು ಜನರ ಪಾಲಿಸುವಂತೆ ನಿಮ್ಮ ಸೂತ್ರ

ಕೈಯಲ್ಲೊಂದು ಕೋಲು
ತುಂಡು ಪಂಚೆ ಸರಳ ಉಡುಗೆ
ಮುಖದ ತುಂಬ ಮಗುವಿನಂಥ ಹೂ ನಗೆ

ಕೋಟ್ಯಾನುಕೋಟಿ ಭಾರತೀಯರು 
ಹೆಜ್ಜೆಗೂಡಿಸಿದರು ನಿಮ್ಮೊಂದಿಗೆ
ಛಲ ಬಿಡದ ಹೋರಾಟದಿಂದ ಬೆಳಗಿದೆ ಸ್ವಾತಂತ್ರ್ಯ ದೀವಿಗೆ

ಆದೆ ನೀನು ವಿಶ್ವವಂದ್ಯ ರಾಷ್ಟ್ರಪಿತ
ಭಾರತಾಂಬೆ ಸಂಕೋಲೆ ಬಿಡಿಸಲು ಸವ೯ಸಂಗ ಪರಿತ್ಯಾಗ ಮಾಡಿದ ವೀರ ಸುತ, ಶಾಂತಿ ದೂತ

ದೇಶ ಇಬ್ಭಾಗಕೆ ಒಪ್ಪಿಗೆಯಿತ್ತ ಆ ಘಳಿಗೆ
ಶಾಂತಿ ಸೂತ್ರ ಒಪ್ಪಿತವಾಗಲಿಲ್ಲ 
ಕ್ರಾಂತಿಕಾರಿಗಳಿಗೆ

1948 ಜನವರಿ 30ರ ದಿನ ಬಲಿಯಾದಿರಿ ಘೋಡ್ಸೆ ಗುಂಡಿನೇಟಿಗೆ
ತತ್ತರಿಸುತ್ತಿದೆ ದೇಶ ಇಂದಿಗೂ......

- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ರುಬಾಯಿ - ಕುಡಗುಂಟಿ ಗವಿಸಿದ್ದಪ್ಪ

ಬಿಸಿರಕ್ತದ ಉರುಪಿನಲಿ 
ತಪ್ಪು ಒಪ್ಪಿನ ತಿಳಿಯದಲಿ 
ಹೊದಿದ್ದೆ ದಾರಿ ಮಾಡಿದ್ದೆ ಹಾದಿ 
ಅಂತ ಹಾಳಾದ ಜೀವನದಲಿ 

ದಂಪತಿಗಳ ನುಡುವಿನ ಸರಸ 
ಬದುಕಲು ತೊರೆಯಬೇಕು ವಿರಸ 
ತಿಳಿದು  ಬಾಳಿದರೆ ಸುಖ ಸಂಸಾರ 
ಆಗಲಾರದು ದುಃಖಗಳ ಸಾಹಸ

ಇರುವುದು ತಲೆಯ ತುಂಬ ಶಕ್ತಿ
ಕಣ್ಣತುಂಬ ಕನಸುಗಳ ಯುಕ್ತಿ 
ನೀನಾಗಬೇಡ ಸೋಮಾರಿತನವು 
ಸಾಧಿಸಿ ಜಯಿಸದೆ ಇಲ್ಲ ಮುಕ್ತಿ

ಹೊಟ್ಟೆ ಹಸಿವು ಮಾಡಿಸುವುದು ಕೆಲಸ 
ಭಿಕ್ಷೆ ಬೇಡುವ ಬಾರದಿದ್ದರೆ ಗೆಲಸ 
ಊರೂರು ತಿರುಗಿ ಕೊನೆಗೆ ಮಾಡುವನು 
ಸಮಾಜಕ್ಕೆ ದೊಡ್ಡ ದೊಡ್ಡ ದುಃಖದ ಮೋಸ 

ಮಗನ ಸೋಮಾರಿತನ ಅಪ್ಪನಿಗಿಡಿಸದು 
ಅವನ್ನೆಲ್ಲ ಮಾಡುವ ಕಾರ್ಯ ಅಮ್ಮನಿಗಾಗದು 
ಅವರೆಲ್ಲರೂ ಬೈದರೆಂದು ಅವನು ಊರುಬಿಟ್ಟು 
ಸೂರಿಲ್ಲದೆ ಅಳುತ್ತಾ ಕುಳಿತ ನೆನೆ ನೆನೆದು 

ಹಠದಲಿ ತಾನು ಊರು ಬಿಟ್ಟು ಪರಾರಿಯಾದ 
ಚಿಂತೆಯಿಲ್ಲದೆ ಮದುವೆಯ ವಯಸ್ಸು ತಾನಾದ 
ಸುಳ್ಳುಗಳ ಹೇಳಿಕೆಯಲ್ಲಿಯೇ ಮದುವೆಯಾಗಿ 
ದುಃಖಿಸುವನು ನಿತ್ಯ ಮಾಡಿದ ತಪ್ಪು ನೆನದ 

- ಕುಡಗುಂಟಿ ಗವಿಸಿದ್ದಪ್ಪ,
ಜೀವಶಾಸ್ತ್ರ ಉಪನ್ಯಾಸಕರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮಹಾತ್ಮ — ಹುತಾತ್ಮ (ಕವಿತೆ) - ಮಧುಮಾಲತಿ ರುದ್ರೇಶ್, ಬೇಲೂರು.

ಶಾಂತಿಧೂತ ರಾಷ್ಟ್ರಪಿತ ಸಹನೆ ನಿನ್ನ ಮಂತ್ರ 

ರಾಮಭಕ್ತ ಅಹಿಂಸಾವಾದಿ ಇದುವೆ ನಿನ್ನ ಅಸ್ತ್ರ 

 ಸತ್ಯ ಶಾಂತಿ ವೃತ್ತಿನಿಷ್ಠೆ ಇದುವೆ ನಿನ್ನ ಮಾರ್ಗ

 ನಿನ್ನ ಪಡೆದ ಭೂಮಿ ಇದುವೆ ಧನ್ಯ ತಾ ಸ್ವರ್ಗ 

ಮಕ್ಕಳಿಗೆಲ್ಲ ಅಚ್ಚುಮೆಚ್ಚು ದೇಶಕೆ ನೀ ಬಾಪು

 ಸರಳ ಉಡುಗೆ ಸಹೃದಯಿ ಕರುಣೆ ನಿನ್ನ ರೂಪು

 ಮಹಾತ್ಮ ನೆಂಬ ಬಿರುದುˌ ನಿನಗೆ ತಂದ ಮೆರುಗು 

ನಿನ್ನ ಪಡೆದು ಧನ್ಯಭಾವ ನಮ್ಮ ಭರತ ಮಾತೆಗು

 ನಿನ್ನ ನುಡಿ ದಾರಿದೀಪ ವರ್ಷವೆಷ್ಟೆ ಕಳೆದರೂ

 ಮಾಸದು ನಿನ್ನ ಛಾಪು ನೀನಿಲ್ಲಿ ಇಲ್ಲವಾದರೂ

 ಸ್ಫೂರ್ತಿ ನಿನಗೆ ಶ್ರವಣಕುಮಾರ ಹರಿಶ್ಚಂದ್ರರು

 ಅಮರ ನೀನು ಇರುವವರೆಗೂ ಜಗದಿ ˌಸೂರ್ಯಚಂದ್ರರು

 ಮರಳಿ ಬಾ ಮತ್ತೆ ನೀನು ಶಾಂತಿಮಂತ್ರ ಬಿತ್ತಲು

ಸತ್ಯ ಶಾಂತಿ ಧರ್ಮನಿಷ್ಠೆ ಸುಮವರಳಲಿ  ಸುತ್ತಲೂ

ನಿನ್ನ ನಾವು ಕಳೆದುಕೊಂಡ ದಿನವಿದು
ಆಚರಿಸುವೆವು ಹುತಾತ್ಮರ ದಿನವೆಂದು

ಶ್ರೇಷ್ಠ ಮಹಾತ್ಮ ನೀನು ಹುತಾತ್ಮನಾದೆ
ಭಾರತದ ಭವ್ಯ ಭವಿಷ್ಯಕೆ ನಂದಾದೀಪವಾದೆ

ಆಧುನಿಕ ಯುಗದಲೂ ಸತ್ಯವನೇ ನುಡಿದು ಜಗವ ಜಯಿಸಿದೆ

ಸತ್ಯಮೇವ ಜಯತೆ ಮೂಲಮಂತ್ರವನು ಜಗಕೆ ಬಿತ್ತಿದೆ

ಸತ್ಯಾಗ್ರಹ ಚಳುವಳಿಗಳೇ ನಿನ್ನ ಆಯುಧವಂದು
ಕಾರಾಗ್ರಹವಾಸದಲೂ ಬಿಡದ ಛಲವದು

ನಿನಗಿದೋ ಸಾವಿರದ ಶರಣು

 - ಮಧುಮಾಲತಿ ರುದ್ರೇಶ್, ಬೇಲೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪ್ರೀತಿ (ಕವಿತೆ) - ಸ್ಪೂರ್ತಿ ಎಸ್. ಆರ್.

ಪ್ರೀತಿ (ಕವಿತೆ) - ಸ್ಪೂರ್ತಿ ಎಸ್ ಆರ್.

ಪ್ರತಿ ನೋಟದಲ್ಲೂ ಅಲಂಕಾರ ರೂಪ 
ಪ್ರತಿ ಸಂಭಾಷಣೆಯಲ್ಲೂ ದೇವತೆಯ ಪ್ರತಿಬಿಂಬ
ಪ್ರತಿ ನಡತೆಯಲ್ಲೂ ಪ್ರಕೃತಿಯ ಪ್ರತಿರೂಪ   
ನನ್ನೆದೆಯಲ್ಲಿ ಅಚ್ಚು ಉಳ್ಳಿದ ಅತ್ಯಂತ ಅಪರೂಪ 

ಕಾಡಿಗೆ ಕಣ್ಗಳ ಮೋಡಿಗೆ ಸೋತೆ ಈದಿನ
ಕಮಲದ ನಯನ ರೆಪ್ಪೆ ಬಡಿದರೆ ಚಿಟ್ಟೆಯಂತೆ 
ಆಗಿದೆ ನೋಡುತ್ತ ಹೃದಯ ತಲ್ಲಣ

ಎಲ್ಲರಂತಲ್ಲ ನನ್ನವರು 
ಎಲ್ಲ ಹುಡುಕಿದರೂ ಸಿಗದೇ ಇರುವವರು 
ಹುಡುಕಲು ಬೇಕಾಗುವುದು ಏನೋ ಒಂದೆರಡು ಜನ್ಮ 

ನಾನು ಕಂಡ ಚೆಂದವ
ಎಲ್ಲೆಲ್ಲೂ ಹುಡುಕಿದರೂ ಸಿಗದು ಅ ಅಂದವ 

ಕಣ್ಣು ಸನ್ನೆ ನೀ ವಾಗಿರಲು 
ಹೃದಯತುಂಬಿ ಕವಿತೆ ಬರೆಯುತ್ತಿರುವೆ 
ನಗುಮೊಗವನ್ನು ತೋರುತಿರಲು  ಸಿಹಿಜೇನು ಮಡಿಲಲ್ಲಿ ಸಾಗುತ್ತಿರುವೆ  
- ಸ್ಪೂರ್ತಿ ಎಸ್‌ ಆರ್. 


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...