ಶಾಂತಿಧೂತ ರಾಷ್ಟ್ರಪಿತ ಸಹನೆ ನಿನ್ನ ಮಂತ್ರ
ರಾಮಭಕ್ತ ಅಹಿಂಸಾವಾದಿ ಇದುವೆ ನಿನ್ನ ಅಸ್ತ್ರ
ಸತ್ಯ ಶಾಂತಿ ವೃತ್ತಿನಿಷ್ಠೆ ಇದುವೆ ನಿನ್ನ ಮಾರ್ಗ
ನಿನ್ನ ಪಡೆದ ಭೂಮಿ ಇದುವೆ ಧನ್ಯ ತಾ ಸ್ವರ್ಗ
ಮಕ್ಕಳಿಗೆಲ್ಲ ಅಚ್ಚುಮೆಚ್ಚು ದೇಶಕೆ ನೀ ಬಾಪು
ಸರಳ ಉಡುಗೆ ಸಹೃದಯಿ ಕರುಣೆ ನಿನ್ನ ರೂಪು
ಮಹಾತ್ಮ ನೆಂಬ ಬಿರುದುˌ ನಿನಗೆ ತಂದ ಮೆರುಗು
ನಿನ್ನ ಪಡೆದು ಧನ್ಯಭಾವ ನಮ್ಮ ಭರತ ಮಾತೆಗು
ನಿನ್ನ ನುಡಿ ದಾರಿದೀಪ ವರ್ಷವೆಷ್ಟೆ ಕಳೆದರೂ
ಮಾಸದು ನಿನ್ನ ಛಾಪು ನೀನಿಲ್ಲಿ ಇಲ್ಲವಾದರೂ
ಸ್ಫೂರ್ತಿ ನಿನಗೆ ಶ್ರವಣಕುಮಾರ ಹರಿಶ್ಚಂದ್ರರು
ಅಮರ ನೀನು ಇರುವವರೆಗೂ ಜಗದಿ ˌಸೂರ್ಯಚಂದ್ರರು
ಮರಳಿ ಬಾ ಮತ್ತೆ ನೀನು ಶಾಂತಿಮಂತ್ರ ಬಿತ್ತಲು
ಸತ್ಯ ಶಾಂತಿ ಧರ್ಮನಿಷ್ಠೆ ಸುಮವರಳಲಿ ಸುತ್ತಲೂ
ನಿನ್ನ ನಾವು ಕಳೆದುಕೊಂಡ ದಿನವಿದು
ಆಚರಿಸುವೆವು ಹುತಾತ್ಮರ ದಿನವೆಂದು
ಶ್ರೇಷ್ಠ ಮಹಾತ್ಮ ನೀನು ಹುತಾತ್ಮನಾದೆ
ಭಾರತದ ಭವ್ಯ ಭವಿಷ್ಯಕೆ ನಂದಾದೀಪವಾದೆ
ಆಧುನಿಕ ಯುಗದಲೂ ಸತ್ಯವನೇ ನುಡಿದು ಜಗವ ಜಯಿಸಿದೆ
ಸತ್ಯಮೇವ ಜಯತೆ ಮೂಲಮಂತ್ರವನು ಜಗಕೆ ಬಿತ್ತಿದೆ
ಸತ್ಯಾಗ್ರಹ ಚಳುವಳಿಗಳೇ ನಿನ್ನ ಆಯುಧವಂದು
ಕಾರಾಗ್ರಹವಾಸದಲೂ ಬಿಡದ ಛಲವದು
ನಿನಗಿದೋ ಸಾವಿರದ ಶರಣು
- ಮಧುಮಾಲತಿ ರುದ್ರೇಶ್, ಬೇಲೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಅದ್ಬುತ ಪದ ಜೋಡಣೆ.... ಶುಭವಾಗಲಿ
ಪ್ರತ್ಯುತ್ತರಅಳಿಸಿ