ಪ್ರೀತಿ (ಕವಿತೆ) - ಸ್ಪೂರ್ತಿ ಎಸ್ ಆರ್.
ಪ್ರತಿ ನೋಟದಲ್ಲೂ ಅಲಂಕಾರ ರೂಪ
ಪ್ರತಿ ಸಂಭಾಷಣೆಯಲ್ಲೂ ದೇವತೆಯ ಪ್ರತಿಬಿಂಬ
ಪ್ರತಿ ನಡತೆಯಲ್ಲೂ ಪ್ರಕೃತಿಯ ಪ್ರತಿರೂಪ
ನನ್ನೆದೆಯಲ್ಲಿ ಅಚ್ಚು ಉಳ್ಳಿದ ಅತ್ಯಂತ ಅಪರೂಪ
ಕಾಡಿಗೆ ಕಣ್ಗಳ ಮೋಡಿಗೆ ಸೋತೆ ಈದಿನ
ಕಮಲದ ನಯನ ರೆಪ್ಪೆ ಬಡಿದರೆ ಚಿಟ್ಟೆಯಂತೆ
ಆಗಿದೆ ನೋಡುತ್ತ ಹೃದಯ ತಲ್ಲಣ
ಎಲ್ಲರಂತಲ್ಲ ನನ್ನವರು
ಎಲ್ಲ ಹುಡುಕಿದರೂ ಸಿಗದೇ ಇರುವವರು
ಹುಡುಕಲು ಬೇಕಾಗುವುದು ಏನೋ ಒಂದೆರಡು ಜನ್ಮ
ನಾನು ಕಂಡ ಚೆಂದವ
ಎಲ್ಲೆಲ್ಲೂ ಹುಡುಕಿದರೂ ಸಿಗದು ಅ ಅಂದವ
ಕಣ್ಣು ಸನ್ನೆ ನೀ ವಾಗಿರಲು
ಹೃದಯತುಂಬಿ ಕವಿತೆ ಬರೆಯುತ್ತಿರುವೆ
ನಗುಮೊಗವನ್ನು ತೋರುತಿರಲು ಸಿಹಿಜೇನು ಮಡಿಲಲ್ಲಿ ಸಾಗುತ್ತಿರುವೆ
- ಸ್ಪೂರ್ತಿ ಎಸ್ ಆರ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ