ಮಂಗಳವಾರ, ಮೇ 17, 2022

ಪುಣ್ಯ ಭೂಮಿ (ಕವಿತೆ) - ಸಂತೋಷ ಆರ್ ಉಡೇವು.

ಸಿದ್ದರಾಗಿರಿ..ಸಿದ್ದರಾಗಿರಿ
ದೇಶ ಒಳಿತಿಗಾಗಿ
ನಾಡ ನುಡಿಗಾಗಿ
ಈ ಪುಣ್ಯ ಭೂಮಿಗಾಗಿ ॥

ದೇಶ ಕಾಯೋ ಯೋಧ
ಭತ್ತ ಬೆಳೆಯುವ ರೈತ 
ಜ್ಞಾನ ಪೀಠ ಪ್ರಶಸ್ತಿ ಪಡೆದ 
ರಾಷ್ಟ್ರ ಕವಿಗಳ ಬೀಡು ॥

ಅನ್ನ ಅಕ್ಷರದ
ದಾಸೋಹ ನೀಡಿದ
ನಡೆದಾಡುವ ದೇವರು
ಸಿದ್ದಗಂಗಾ ಶ್ರೀಗಳು ॥

ಕನ್ನಡಾಂಭೆಯ ಮಕ್ಕಳು ನಾವು
ದ್ವೇಷ ಬೇಡ ನಮಗೆ
ಭಾವೈಕತೆ ಮೂಡಲಿ 
ವಂದೇ ಮಾತರಂ ॥

- ಸಂತೋಷ ಆರ್ ಉಡೇವು 
ಮೊಳಕಾಲ್ಮುರು 
9008936478.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)

ಗಜಲ್ - ಐಶ್ವರ್ಯಾ ಶ್ರೀ, ಶರೆಗಾರ.

ಕಾರ್ಮೋಡ ಕವಿದಿಹುದು ನೀನಿರದೆ ಈ ಬಾಳಲ್ಲಿ 
ಹಗಲಿರುಳು ಒಂದೇ ನೀನಿಲ್ಲದೆ ಈ ಬಾಳಲ್ಲಿ 

ಬೆಳದಿಂಗಳ ಬೆಳಕು ನೀನಾಗಿ ಬಂದೆ
 ಸ್ವರ್ಗದ ಮೇನಕೆ ನೀನಾದೆ ಈ ಬಾಳಲ್ಲಿ 

ಅನುದಿನವು ಪ್ರೀತಿಯ ಕಾಲ್ಗೆಜ್ಜೆ ತೋಡಿಸುವೆ 
ಪರಿಮಳದ ಹೂವಂಗೆ ಅರಳಿದೆ ಈ ಬಾಳಲ್ಲಿ 

ಕರಿಮೋಡ ಸರಿಸಿ ನೀನಿಳಿದೆ ನನ್ನರಸಿ 
ನಾ ಕಂಡ ಕನಸಿನ ಅರ್ಧಾಂಗಿಯಾದೆ ಈ ಬಾಳಲ್ಲಿ 

ಕಾಮನ ಬಿಲ್ಲಿನ ಬಳೆಗಳ ತೋಡಿಸುವೆ 
ನನ್ನ ಹೃದಯದ ಒಡತಿಯಾದೆ ಈ ಬಾಳಲ್ಲಿ 

ರೆಪ್ಪಯ ಮಿಟುಕಿಸದೆ ಕಾಯ್ದಿದ್ದ ಈ ರಾಮ 
ತಂಗಾಳಿ ತಂಪಂತೆ ನೀ ಬಂದಿಳಿದೆ ಈ ಬಾಳಲ್ಲಿ. 

 - ಐಶ್ವರ್ಯಾ ಶ್ರೀ, ಶರೆಗಾರ, ಯರಗಟ್ಟಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)

ಮುದ್ದು ಬಂಗಾರ (ಕವಿತೆ) - ಶಿವಾ ಮದಭಾಂವಿ.

ಮುದ್ದುಕಂದ ಮಲಗೆನ್ನ ಬಂಗಾರ
ಬಂದಿಹನು ಆಗಸದಲಿ ಚಂದಿರ

ನಗುವ ಹಂಚಿ ನಲಿವೆ ಚೆಂದ
ನಿನ್ನ ತೋದಲ್ನುಡಿಯೇ ಕರ್ಣಾನಂದ

ಮನೆ ಮನಕ್ಕೆಲ್ಲ ರಸದೌತನ ನಿನ್ನಿಂದ 
ಇಳೆಗೆ ಸ್ವರ್ಗ ಬಂದಿದೆ ಅರಿವಿಲ್ಲದಂಗ

ನಗುತಿಹನು ಚಂದಿರ ನಿನ್ನ ತುಂಟಾದಿಂದ
ಯಾವಾಗಲೂ ಹೀಗೆ ಇರು ಅದುವೇ ನಮಗಾನಂದ

ಮೆಲ್ಲಗೆ ಬೀಸುತಿಹುದುತಂಗಾಳಿ
ಬರುತಿಹಳು ನಿದ್ರಾದೇವಿ ಓಡೊಡಿ

ಜಾಣ ಕಂದಮ್ಮ ನನ್ನುಸಿರು ನೀನು
ಯಾರ ದೃಷ್ಟಿಯೂ ಬಿಳದಂಗೆ ಕಾಪಾಡುವೆ ನಾನು

ನಿದ್ರೆ ಬರಲಿ  ನಾಳೆಯ ನಗುವಿಗಾಗಿ
ಹಾಡುವೇ ಲಾಲಿಯ ನಿನಗೆ ಸವಿಯಾಗಿ

ಕೊಡುವೆ ಮುತ್ತೊಂದು ಮುದ್ದು ಜಾಣೆಗೆ
ಜಾರು ಜಾರಮ್ಮ ನೀ ಒಳ್ಳೆಯ ನಿದ್ರೆಗೆ

 - ಶಿವಾ ಮದಭಾಂವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)

ಹೃದಯ ನುಡಿ ಕನ್ನಡ (ಕವಿತೆ) - ಹನುಮಂತ ದಾಸರ ಹೊಗರನಾಳ.

ಕನ್ನಡವೇ ಮುನ್ನುಡಿ ಕನ್ನಡವೇ ಬೆನ್ನುಡಿ ಕನ್ನಡವೇ ಕನ್ನಡಿ ಕನ್ನಡಿಗರಿಗೆ ಕನ್ನಡವೇ ಜೇನ್ನುಡಿ
ಕನ್ನಡವೊಂದೇ ಸಿರಿನುಡಿ ಕನ್ನಡವೊಂದೇ ಸಿಹಿನುಡಿ ಕನ್ನಡವೊಂದೇ ಕವಿನುಡಿ ಕನ್ನಡದ ಮನಗಳಿಗೆ ಕನ್ನಡವೊಂದೇ ತಾಯಿನುಡಿ....!!

ಕನ್ನಡವೇ ಹಸಿರು ಕನ್ನಡವೇ ಉಸಿರು ಕನ್ನಡವೇ ಹೆಸರು ಕನ್ನಡಾಭಿಮಾನಿಗಳಿಗೆ ಕನ್ನಡವೇ ತವರು
ಕನ್ನಡವೇ ಜೀವನ ಕನ್ನಡವೇ ಯವ್ವನ ಕನ್ನಡವೇ ಪಾವನ
ಕನ್ನಡ ಪ್ರೇಮಿಗಳಿಗೆ ಕನ್ನಡವೇ ಸ್ನೇಹ ಬಂಧನ....!!

ಕನ್ನಡವೇ ಪ್ರೀತಿ ಕನ್ನಡವೇ ಪ್ರೇಮ ಕನ್ನಡವೇ ಧಾಮ
ಕನ್ನಡದ ಕಂದರಿಗೆ ಕನ್ನಡವೇ ಕಾವ್ಯಧರ್ಮ
ಕನ್ನಡವೇ ಕಲ್ಪನಾ ಕನ್ನಡವೇ ಚಂದನಾ ಕನ್ನಡವೇ ಚುಂಬನ
ಕನ್ನಡದ ಕಲಾ ರಸಿಕರಿಗೆ ಕನ್ನಡವೇ ಆಲಿಂಗನಾ....!!

ಕನ್ನಡವೇ ಸ್ನೇಹಸಿರಿ ಕನ್ನಡವೇ ಕಾವ್ಯಸಿರಿ ಕನ್ನಡವೇ ನಾಟ್ಯಸಿರಿ
ಕನ್ನಡದ ರಂಗ ಕಲಾವಿದರಿಗೆ ಕನ್ನಡವೇ ಕಲಾ ಸಾಹಿತ್ಯ ಸಿರಿ
ಕನ್ನಡವೇ ಗಂಧದ ಗುಡಿ ಕನ್ನಡವೇ ಚೆಂದದ ನುಡಿ ಕನ್ನಡವೇ ಶ್ರೇಷ್ಠ ನುಡಿ ಕನ್ನಡದ ಚಿಂತಕರಿಗೆ ಕನ್ನಡವೇ ಹೃದಯ ನುಡಿ....!!

ಮರೆಯದಿರು ಕನ್ನಡ ತೊರೆಯದಿರು ಕನ್ನಡ ಜರೆಯದಿರು ಕನ್ನಡ
ಕರೆದು ಕಲಿಸದೇ ಕಳಿಸದಿರು ಕನ್ನಡ
ಬರೆದು ತಿಳಿಸದೇ ಅಳಿಸಿ ಹಾಕದಿರು ಕನ್ನಡ ಬೆಳೆಸಿ ಉಳಿಸಿ ಗಳಿಸು ಕನ್ನಡ ಧರೆಯಲಿ ಮೊಳಗಲಿ ಕಹಳೆಯೂ ಕನ್ನಡ.....!!

- ಹನುಮಂತ ದಾಸರ ಹೊಗರನಾಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...