ಸೋಮವಾರ, ಜನವರಿ 15, 2024

ಬದುಕು ಬರಹ (ಕವಿತೆ) - ಶಿವಾ ಮದಭಾಂವಿ, ಗೋಕಾಕ.

ಬದುಕಿನ ಆಗುಹೋಗುಗಳೇ
ಕವಿ ಮನದಲ್ಲಿನ
 ಪ್ರತಿ ಪದಗಳು

ಮನಸ್ಥಿತಿಯ ಮಾತುಗಳೇ
ಅರಳಿ ಬರುವವು ಹೂವುಗಳು

ಒತ್ತಡದಲ್ಲೆಂದೂ ಬರದು
ಒಂದೂ ಪದಪುಂಜಗಳು

ಮನಶ್ಯಾಂತಿಗೆ ಬೇಕು ನಿದ್ದೆ
ನಿದ್ದೆ ಮಾಡಿ ಚಿಂತೆಗೆ ಕೊಟ್ಟು ಗುದ್ದು

ಏಳಿ ಏದ್ದೇಳಿ ಒಳ್ಳೆಯ ಯೋಚನೆ ಹೊತ್ತು
ನಿಮ್ಮ ಬದುಕು ರೂಪ ಮಾಡಿಕೊಳ್ಳಿ ಮುತ್ತು.

- ಶಿವಾ ಮದಭಾಂವಿ, ಗೋಕಾಕ.


ಮರಣ ಮಾಲಿಕೆ (ಕವಿತೆ) - ಬಿ ಎಂ ಮಹಾಂತೇಶ.

ಬದುಕಿನ ಮರಕೆ ಸುತ್ತಿದ,
ಕರುಳ ಬಳ್ಳಿಗಳನು ಕ್ಷಣದಲೆ ಬಿಡಿಸುವ,
ಸಾವೇ ನೀನೇದೆಂತ ಅದ್ಭುತ..
ನೀ ಮಾತಿಗಿಂತ ಹರಿತ...

ನಾನು ನನ್ನೆದೆಂಬುವ,
ಸೊಕ್ಕನು ಕುಕ್ಕುವ,
ನೆತ್ತಿಯ ಮೇಲಿನ ಹದ್ದೆ...
ತಿಳಿಯಲಿಲ್ಲ ನೀ ಬಂದ ಸದ್ದೆ..

ಇಳೆಯಗಲದ ಬಯಕೆಗಳನು,
ಮುಗಿಲಗಲದ ಕನಸುಗಳನು,
ಹೊತ್ತು ಸಾಗುವ ಪಯಣಕೆ...
ಒಮ್ಮೆಲೇ ಹಾಕುವೆ ಮರಣ ಮಾಲಿಕೆ...

ಎನಗರಿವಿಲ್ಲ ನಿನ್ನಾಗಮನ,
ಆದರೂ ನಿನ್ನ ಮೇಲೆಯೇ ನನ್ನ ಗಮನ,
ಒಂದಲ್ಲ ಒಂದು ದಿನ ನೀ ಬರುವುದು ಖಚಿತ...
ಬಂದಾಗ ನನ್ನ ನೆನಪುಗಳು ಮಾತ್ರ ಇಲ್ಲಿ ಪರಿಚಿತ...

- ಬಿ ಎಂ ಮಹಾಂತೇಶ
SAVT ಕಾಲೇಜ್ ಕೂಡ್ಲಿಗಿ
ವಿಜಯನಗರ,
9731418615

ಶುಕ್ರವಾರ, ಜನವರಿ 5, 2024

ಪ್ರೀತಿಯ ಅರಂಭ(ಕವಿತೆ) - ಆದರ್ಶ್ ಪಟೇಲ್, ಚಿಕ್ಕಮಗಳೂರು.

ಆರಂಭವೇ ನಿನ್ನಿಂದ ಈ ಪ್ರೀತಿಗೆ
ನಿನ್ನ ಕಂಡೊಡನೆ ನೂರಾರು ಕನಸುಗಳ ಹೆಣೆದೆ
ಹೇಳದೆ ಬಂದ ಒಲವನು ನಾ ಹೇಗೆ ಬೇಡವೆನ್ನಲೆ 
ಕನ್ನಡಿಯ ಮುಂದೆ ನಿಂತು ಕಣ್ಣು ಹೊಡೆಯೋದನ್ನು
 ನಿನಗಾಗಿ ಕಲಿತಿರುವೇನು

ಕನಸಿನ ಕಂಗಳಿಗೂ ನಿನ್ನದೇ ಅಲೆ 
ಈ ಉಸಿರಿಗೆ ಅನಿವಾರ್ಯ ನಿನ್ನದೇ ಪ್ರದಕ್ಷಿಣೆ
ಸ್ಮರಣೆಯ ಮಾಡುವೆ ನಿನ್ನದೇ ಹೆಸರನು
ರಾಶಿ ಕನಸುಗಳ ಹೊತ್ತು ತಂದೆ ನನ್ನೆದೆಯ ಹೊಸ್ತಿಲಲ್ಲಿ

ನೀನೊಮ್ಮೆ ಕನಸುಗಳ ಬಿತ್ತಿ ಬಾ ನಾ ಪ್ರೇಮ ಲೋಕವ ಕಟ್ಟುವೆ 
ಅಲೆದಾಡುವ ಈ ಮನಸ ಮನಸಾರೆ ಆಲಂಗಿಸಿ ಸೊಗಸಾದ ಕಥೆಯ ಬರೆಯಲು ಬಾ
ಸೃಷ್ಟಿಯೇ ಒಮ್ಮೆ ದೃಷ್ಟಿಯ ತೆಗೆಯಬೇಕು ಹೀಗೆ ಜೊತೆಯಾಗಿರೋಣ ಬಾ
ಅಂತರಂಗದಲ್ಲಿ ಅಲಂಕೃತಳಾಗಿ ನಲಿಯು ಬಾ
ಈ ಪ್ರೀತಿಯೆಂಬ ಹಾಡಿಗೆ ಹೊಸ ಶೀರ್ಷಿಕೆ ನೀನಾಗು ಬಾ.

- ಆದರ್ಶ್ ಪಟೇಲ್
ಚಿಕ್ಕಮಗಳೂರು.

ಬೆಂಕಿ ಮತ್ತು ಹೊಗೆ (ಕವಿತೆ) - ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ಪಾರ್ಲಿಮೆಂಟ್ ಒಳಗೆ ಬೆಂಕಿ ಇಲ್ಲ ಹೊಗೆ ಮಾತ್ರ ಸಹಕರಿಸಿ. 

ವಿರೋಧಿ ತಲೆಯೊಳಗೆ
ಬೆಂಕಿ ಬಿದ್ದಿದೆ ಅಧಿಕಾರ ಇಲ್ಲದೆ.

ಜನರ ಹೊಟ್ಟೆ ಒಳಗೆ ಬೆಂಕಿ 
ಮಹಾಭಾರತ ಸಾಕ್ಷಿಯಾಗಿ .

ಭೂಮಿಗಾಗಿ ಸಂತತಿಗಾಗಿ ಕುಟುಂಬಕ್ಕಾಗಿ ಬೆಂಕಿ ಹಚ್ಚು ಹೊಗೆ ಹಾಕು. 

ಕರೋನಾ ಸಮಯ ಶ್ವಾಸಕೋಶದಲ್ಲಿ ಬೆಂಕಿ 
ಔಷಧಿ ಇಲ್ಲ. 

ಕಿಡ್ನಿಯಲ್ಲಿ ಬೆಂಕಿ  ತಂದಿದೆ ಕಲ್ಲು 
ನೀರು ಕುಡಿಯಿರಿ. 

ಹೊಗೆ ಜಾಸ್ತಿ ಪಾದಗಳು ತೊಡೆಗಳು ಅಲುಗಾಡುತ್ತಿವೆ. 

ಜನರ ಪ್ರತಿನಿಧಿ ಸಭೆಯಲ್ಲಿ ನಾಲಿಗೆ ಉಗುಳುತ್ತಿದೆ ಹೊಗೆ. 

ಯುವಕರ ಕೂದಲು ಬೆಳ್ಳಗಾಗಿವೆ ಹೊಗೆಯಿಂದ. 

ಬಂಡವಾಳ ಬೆಳೆಯುತ್ತಿದೆ ಕನಸುಗಳು ಕಮರಿವೆ ಉದ್ಯೋಗ ಸಿಗದೆ. 

ತುತ್ತಿನ ಚೀಲ ತುಂಬುವಂತೆ ಪಾರ್ಲಿಮೆಂಟ್ ಒಳಗೆ ಹೊಗೆ ಹಾಕಿರುವರಂತೆ. 

ಬೆಂಕಿಯಲ್ಲಿ ಬೇಯದೆ ಹೊಗೆಯಲ್ಲಿ ಉಸಿರು ಕಟ್ಟಿ ಸಾಯದೆ ಉಳಿದ ಯುವಕರು. 

ವಿಮಾನ ಉರಿದು ಕಣ್ಣುಗಳಲ್ಲಿ
ಮೂರನೇ ಕಣ್ಣು ತೆರೆದು ಹೊಗೆ. 

ಬೆನ್ನು ಮೂಳೆ ಮುರಿದ ಆಡಳಿತ 
ಯುವಕರ ಚರ್ಮ ಸುಲಿದು ನಾಯಿಪಾಡು. 

ಜೀರ್ಣ ಆಗದ ಉಚಿತ ಆಹಾರ 
ನಿರುದ್ಯೋಗ ಏನಿಲ್ಲ ವಿರೋಧಿ ಪಕ್ಷ ಮಸಲತ್ತು.

ಮದುವೆಗಳು ನಡೆಯುತ್ತಿವೆ 
ಕಷ್ಟ ಏನಿಲ್ಲ ಬಸ್ಸು ವಂದೇ ಭಾರತ ರೈಲು ತುಂಬಿ ತುಳುಕುತ್ತಿವೆ.

-ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...